ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ, ಸೈಬರ್​ ಠಾಣೆಯಲ್ಲಿ ದೂರು ದಾಖಲು

| Updated By: ಆಯೇಷಾ ಬಾನು

Updated on: Nov 02, 2022 | 11:19 AM

ತಿಪ್ಪಾರೆಡ್ಡಿ ಅವರಿಗೆ ವಿಡಿಯೋ ಕಾಲ್​ ಮಾಡಿದ್ದ ಯುವತಿ ಖಾಸಗಿ ಭಾಗಗಳನ್ನು ತೋರಿಸಿದ್ದಳು. ತಕ್ಷಣವೇ ಮೊಬೈಲ್​ ಪಕ್ಕಕ್ಕೆ ಇಟ್ಟಿರುವುದಾಗಿ ಜಿ.ಹೆಚ್.ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ, ಸೈಬರ್​ ಠಾಣೆಯಲ್ಲಿ ದೂರು ದಾಖಲು
ಜಿ.ಹೆಚ್.ತಿಪ್ಪಾರೆಡ್ಡಿ
Follow us on

ಚಿತ್ರದುರ್ಗ: ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರನ್ನು ಹನಿಟ್ರ್ಯಾಪ್​ಗೆ​ ಬೀಳಿಸುವ ಯತ್ನ ನಡೆದಿದೆ. ವಿಡಿಯೋ ಕಾಲ್​ ಮಾಡಿ ಶಾಸಕರನ್ನು ಹನಿಟ್ರ್ಯಾಪ್​ ಮಾಡಲು ಯತ್ನಿಸಲಾಗಿದ್ದು ತಕ್ಷಣ ಮೊಬೈಲ್​ ಪಕ್ಕಕ್ಕೆ ಇಟ್ಟಿರುವುದಾಗಿ ಜಿ.ಹೆಚ್.ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಈ ಬಗ್ಗೆ ಚಿತ್ರದುರ್ಗ ಸೈಬರ್​ ಠಾಣೆಗೆ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೊದಲಿಗೆ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅವರಿಗೆ ವಿಡಿಯೋ ಕಾಲ್ ಒಂದು ಬಂದಿದೆ. ಅದನ್ನು ರಿಸಿವ್ ಮಾಡುತ್ತಿದ್ದಂತೆ ಅದರಲ್ಲಿ ಅಶ್ಲೀಲ ದೃಶ್ಯ ಕಂಡು ತಿಪ್ಪಾರೆಡ್ಡಿ ಅವರು ಮೊಬೈಲನ್ನು ಪಕ್ಕಕ್ಕೆ ಇಟ್ಟಿದ್ದಾರೆ. ಬಳಿಕ ಹನಿಟ್ರ್ಯಾಪ್​ಗೆ​ ಯತ್ನಿಸಿದ್ದ ಕಿಡಿಗೇಡಿಗಳು ಕರೆ ಕಡಿತವಾದ ನಂತರ ಅಶ್ಲೀಲ ವಿಡಿಯೋ ವಾಟ್ಸಾಪ್​ ಮಾಡಿದ್ದಾರೆ. ವಿಡಿಯೋ ವಾಟ್ಸಾಪ್​ಗೆ ಬಂದದನ್ನು ಕಂಡು ತಿಪ್ಪಾರೆಡ್ಡಿ ಅವರು ತಮ್ಮವರಿಗೆ ಹೇಳಿ ವಿಡಿಯೋ ಕಾಲ್​ ಮಾಡಿದ್ದ ನಂಬರ್​ ಬ್ಲಾಕ್​ ಮಾಡಿಸಿದ್ದಾರೆ. ಇದಾದ ಬಳಿಕ ಸೈಬರ್​ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಆಳಂದ: ಕಬ್ಬಿನ ಗದ್ದೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ

ತನಿಖೆ ವೇಳೆ ಈ ವಿಡಿಯೋ ಕಾಲ್, ರಾಜಸ್ಥಾನ, ಒಡಿಶಾದಿಂದ ಬಂದಿದೆ ಎಂಬ ಮಾಹಿತಿ ಸಿಕ್ಕಿದೆ. ತಿಪ್ಪಾರೆಡ್ಡಿ ಅವರಿಗೆ ವಿಡಿಯೋ ಕಾಲ್​ ಮಾಡಿದ್ದ ಯುವತಿ ಖಾಸಗಿ ಭಾಗಗಳನ್ನು ತೋರಿಸಿದ್ದಳು. ತಕ್ಷಣವೇ ಮೊಬೈಲ್​ ಪಕ್ಕಕ್ಕೆ ಇಟ್ಟಿರುವುದಾಗಿ ಜಿ.ಹೆಚ್.ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಅಪರಿಚಿತ ಯುವತಿಯಿಂದ ವಾಟ್ಸಪ್‍ನಲ್ಲಿ ವಿಡಿಯೋ ಕಾಲ್ ಬಂದಿತ್ತು. ಕ್ಷೇತ್ರದ ಜನರೋ ಅಥವಾ ಸಂಬಂಧಿಕರೋ ಎಂದು ಕಾಲ್ ರಿಸೀವ್ ಮಾಡಿದ್ದೆ. ಆದರೆ ಅವರ ಭಾಷೆ ನನಗೆ ಅರ್ಥವಾಗಿಲ್ಲ. ಆದರೆ ಈ ರೀತಿ ಆಗಿರುವುದು ನನ್ನ ಗಮನಕ್ಕೆ 2 ಬಾರಿ ಬಂತು. ಆ ಸಮಯದಲ್ಲಿ ನನ್ನ ಪತ್ನಿಗೆ ತಿಳಿಸಿ ತಕ್ಷಣ ಆ ನಂಬರ್ ಅನ್ನು ಬ್ಲಾಕ್ ಮಾಡಿಸಿದೆ. ನಂತರ ಈ ಬಗ್ಗೆ ಎಸ್‍ಪಿಗೂ ಮಾಹಿತಿ ನೀಡಿದೆ. ಆದರೆ ತನಿಖೆ ಎಲ್ಲಿವರೆಗೆ ಬಂದಿದೆ ಎನ್ನುವುದನ್ನು ನಾನು ವಿಚಾರಿಸಿಲ್ಲ. ಆದರೆ ಅವರು ತನಿಖೆ ನಡೆಸುತ್ತಿದ್ದಾರೆ ಜೊತೆಗೆ ವೀಡಿಯೋ ಕಾಲ್ ಬಂದ ನಂಬರನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಇದು ಓರಿಸ್ಸಾ ಅಥವಾ ರಾಜಸ್ಥಾನದಿಂದ ಬಂದ ನಂಬರ್ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಯಾರ ಮೇಲೂ ನನಗೆ ಅನುಮಾನವಿಲ್ಲ. ನನಗೆ ಯಾರು ವಿರೋಧಗಳಿಲ್ಲ. ಘಟನೆಗೆ ಸಂಬಂಧಿಸಿ ಸೈಬರ್ ಠಾಣೆಗೆ ದೂರು ನೀಡಿದ್ದೇನೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:13 am, Wed, 2 November 22