Crime News: ಪತ್ನಿಯನ್ನೇ ಕೊಂದು ಮನೆಯಲ್ಲಿ ಹೂತಿಟ್ಟ ಗಂಡ; ನಾಪತ್ತೆಯಾದ ಪತಿಗಾಗಿ ಪೊಲೀಸರ ಶೋಧಕಾರ್ಯ

| Updated By: ganapathi bhat

Updated on: Jan 07, 2022 | 5:31 PM

ಇದೀಗ ಪತಿ ನಾರಪ್ಪ ನಾಪತ್ತೆ ಆಗಿದ್ದಾನೆ. ನಾಪತ್ತೆಯಾಗಿರುವ ಪತಿ ನಾರಪ್ಪಗಾಗಿ ಪೊಲೀಸರ ಶೋಧ ಕಾರ್ಯ ನಡೆಯುತ್ತಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Crime News: ಪತ್ನಿಯನ್ನೇ ಕೊಂದು ಮನೆಯಲ್ಲಿ ಹೂತಿಟ್ಟ ಗಂಡ; ನಾಪತ್ತೆಯಾದ ಪತಿಗಾಗಿ ಪೊಲೀಸರ ಶೋಧಕಾರ್ಯ
ಸಾಂದರ್ಭಿಕ ಚಿತ್ರ
Follow us on

ಚಿತ್ರದುರ್ಗ: ಪತ್ನಿಯನ್ನೇ ಪತಿ ಕೊಲೆಗೈದು ಬಳಿಕ ಮನೆಯಲ್ಲಿ ಹೂತಿಟ್ಟ ಘಟನೆ ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ. ಡಿಸೆಂಬರ್ 26 ರಂದು ಪತ್ನಿಯನ್ನು ಕೊಂದ ಪತಿ ಆಕೆಯ ಶವವನ್ನು ಮನೆಯಲ್ಲೇ ಹೂತಿಟ್ಟಿದ್ದ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ಸುಮಾ (30) ಹತ್ಯೆ ಮಾಡಲಾಗಿತ್ತು. ಪತಿ ನಾರಪ್ಪ ಪತ್ನಿ ಶವವನ್ನು ಮನೆ ಹಾಲ್‌ನಲ್ಲಿ ಹೂತು ಹಾಕಿದ್ದ ಎಂದು ಘಟನೆಯ ವಿವರಗಳು ತಿಳಿದುಬಂದಿದೆ. ಇದೀಗ ಪತಿ ನಾರಪ್ಪ ನಾಪತ್ತೆ ಆಗಿದ್ದಾನೆ. ನಾಪತ್ತೆಯಾಗಿರುವ ಪತಿ ನಾರಪ್ಪಗಾಗಿ ಪೊಲೀಸರ ಶೋಧ ಕಾರ್ಯ ನಡೆಯುತ್ತಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಶಾರ್ಟ್ ಸರ್ಕ್ಯೂಟ್​ನಿಂದ ಪಾನ್ ಶಾಪ್​ನಲ್ಲಿ ಬೆಂಕಿ
ಶಾರ್ಟ್ ಸರ್ಕ್ಯೂಟ್​ನಿಂದ ಪಾನ್ ಶಾಪ್​ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ- ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನಡೆದಿದೆ. ಪಾನ್ ಶಾಪ್​ನಲ್ಲಿ ದಿಢೀರ್ ಬೆಂಕಿ ಹತ್ತಿದ್ದರಿಂದ ಜನರು ಗಾಬರಿಯಾಗಿದ್ದಾರೆ. ಅಂಗಡಿಯಲ್ಲಿ ವಸ್ತುಗಳು ಸುಟ್ಟು ಕರಕಲಾಗಿದೆ. ಪಟ್ಟಣದ ಡಬಲ್ ರೋಡನಲ್ಲಿ ಇರುವ ಪಾನ್ ಶಾಪ್​ನಲ್ಲಿ ಘಟನೆ ನಡೆದಿದ್ದು ಬೆಂಕಿ ನಂದಿಸಿಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.

ಒಳಚರಂಡಿ ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು
ಒಳಚರಂಡಿ ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಸಂಭವಿಸಿದೆ. ಮಣ್ಣು ಕುಸಿದು ಕಾರ್ಮಿಕ ಧನರಾಜ್ (30) ದುರ್ಮರಣವನ್ನಪ್ಪಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ತುಮಕೂರು: ರಾಗಿತೆನೆ ಬಣವೆಗೆ‌ ದುಷ್ಕರ್ಮಿಗಳಿಂದ ಬೆಂಕಿ
ರಾಗಿತೆನೆ ಬಣವೆಗೆ‌ ದುಷ್ಕರ್ಮಿಗಳಿಂದ ಬೆಂಕಿ ಇಟ್ಟ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಾನಿಹಟ್ಟಿ ಗ್ರಾಮದಲ್ಲಿ ನಡೆದಿದೆ. ಒಂದು ಲಕ್ಷ ಬೆಲೆಬಾಳುವ ರಾಗಿತೆನೆ ಬಣವೆ ಸಂಪೂರ್ಣ ಭಸ್ಮವಾಗಿದೆ. ನಾಗಣ್ಣ, ಬಲ್ಲಯ್ಯ, ಶಾರದಮ್ಮ ಎಂಬ ರೈತರಿಗೆ ಸೇರಿದ ಬಣವೆಗಳು ಬೆಂಕಿಗಾಹುತಿ ಆಗಿದೆ. ಸ್ಥಳಕ್ಕೆ ತುರುವೇಕೆರೆ ಶಾಸಕ ಮಸಾಲ ಜಯರಾಮ್ ಭೇಟಿ ನೀಡಿದ್ದಾರೆ. ಸಂತ್ರಸ್ತ ರೈತರಿಗೆ ಪರಿಹಾರ‌ ಕೊಡಿಸೋ ಭರವಸೆ ನೀಡಿದ್ದಾರೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತುಮಕೂರು ವಿವಿ ಕಾಂಪೌಂಡ್ ಬಳಿ ಮದ್ಯದ ಬಾಟಲಿಗಳು ಪತ್ತೆ
ತುಮಕೂರು ವಿವಿ ಕಾಂಪೌಂಡ್ ಬಳಿ ಮದ್ಯದ ಬಾಟಲಿಗಳು ಪತ್ತೆ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನ ಕಾಪೌಂಡ್ ನಲ್ಲಿ ಮದ್ಯದ ಬಾಟಲಿಗಳು ಪತ್ತೆ ಆಗಿವೆ. ಕುಡಿದು ಖಾಲಿ ಮಾಡಿರುವ ಬಾಟಲಿಗಳು ಕಂಡುಬಂದಿದೆ. ಕಾಲೇಜಿನ ಪಕ್ಕದಲ್ಲಿ ಬಾಟಲ್ ಗಳು ಪತ್ತೆ ಆಗಿವೆ. ರಾತ್ರಿ ವೇಳೆ ಮದ್ಯ ಕುಡಿದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕ್ರೈಂಗೆ ತವರಾಗುತ್ತಿರುವ ಆನೇಕಲ್! ಕೇಂದ್ರ ಸಚಿವರ ಮನೆಯ ಮುಂದೆಯೇ ಕಾರು ಅಡ್ಡಗಟ್ಟಿ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ

ಇದನ್ನೂ ಓದಿ: ಆನೇಕಲ್: ಕಾರು ಅಡ್ಡಗಟ್ಟಿ ಗುಂಡಿಕ್ಕಿ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ