ಡೆತ್​ನೋಟ್ ಬರೆದಿಟ್ಟು ಖಾಸಗಿ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ; ಬ್ಯಾಂಕ್ ವಿರುದ್ಧ ಗಂಭೀರ ಆರೋಪ

| Updated By: ರಮೇಶ್ ಬಿ. ಜವಳಗೇರಾ

Updated on: Aug 06, 2024 | 7:42 PM

ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತ ಖಾಸಗಿ ಬ್ಯಾಂಕ್​ ಉದ್ಯೋಗಿ ಎಂ.ಸಂತೋಷ್​ ಖಾಸಗಿ ಲಾಡ್ಜ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಅವರಿಗೆ ಕೆಲ ದಿನಗಳ ಹಿಂದೆ ಮಧ್ಯಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿತ್ತು.

ಡೆತ್​ನೋಟ್ ಬರೆದಿಟ್ಟು ಖಾಸಗಿ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ; ಬ್ಯಾಂಕ್ ವಿರುದ್ಧ ಗಂಭೀರ ಆರೋಪ
ಪ್ರಾತಿನಿಧಿಕ ಚಿತ್ರ
Follow us on

ಚಿತ್ರದುರ್ಗ, ಆಗಸ್ಟ್.06: ಡೆತ್​ನೋಟ್ (Death Note) ಬರೆದಿಟ್ಟು ಖಾಸಗಿ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಖಾಸಗಿ ಲಾಡ್ಜ್​​ನಲ್ಲಿ ನಡೆದಿದೆ. ಖಾಸಗಿ ಬ್ಯಾಂಕ್​ ಉದ್ಯೋಗಿ ಎಂ.ಸಂತೋಷ್​(40) ಖಾಸಗಿ ಲಾಡ್ಜ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿ ಆಗಿದ್ದ ಸಂತೋಷ್ ಅವರಿಗೆ ಕೆಲ ದಿನಗಳ ಹಿಂದೆ ಮಧ್ಯಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅನಾರೋಗ್ಯ ಕಾರಣ ಸಂತೋಷ್​ ಅವರು ಕರ್ನಾಟಕದಲ್ಲೇ ಇರಲು ಬಯಸಿದ್ದರು. ಹೀಗಾಗಿ ಬ್ಯಾಂಕ್ ಮುಖ್ಯಸ್ಥರು 2 ದಿನಕ್ಕಾಗಿ ಹೊಸದುರ್ಗದಲ್ಲಿರಲು ಕಳಿಸಿದ್ದರು. ಸಂತೋಷ್ ಅವರು ಹೊಸದುರ್ಗದ ಬ್ಯಾಂಕ್ ಕಟ್ಟಡದ ಮೇಲ್ಭಾಗದಲ್ಲಿನ ಲಾಡ್ಜ್​ನಲ್ಲೇ ಪ್ರಾಣಬಿಟ್ಟಿದ್ದಾರೆ.

ಬ್ಯಾಂಕ್ ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಎಂದು ಸಂತೋಷ್ ಅವರು ತಮ್ಮ ಡೆತ್ ನೋಟ್​ನಲ್ಲಿ ಬರೆದಿದ್ದಾರೆ.  ಬ್ಯಾಂಕ್ ನನ್ನ ಸಾವಿಗೆ ಪರಿಹಾರ ನೀಡಬೇಕೆಂದು ಬರೆದಿದ್ದಾರೆ. ಅಲ್ಲದೆ ಲಂಚ ನೀಡಿದರೆ ಮಾತ್ರ ಬ್ಯಾಂಕ್​​ನಲ್ಲಿ ಕೆಲಸ ಆಗುತ್ತದೆಂದು ಆರೋಪಿಸಿದ್ದಾರೆ. ಸದ್ಯ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಮಳೆ ಮಧ್ಯೆಯೂ ಹೊತ್ತಿ ಉರಿದ ಬಿಎಂಟಿಸಿ ಬಸ್​

ದೇಗುಲ ಸ್ವಚ್ಛಗೊಳಿಸುವಾಗ ಕರೆಂಟ್ ಶಾಕ್​​, ಇಬ್ಬರು ಬಲಿ

ದೇವಸ್ಥಾನ ಸ್ವಚ್ಛಗೊಳಿಸುವಾಗ ವಿದ್ಯುತ್ ಪ್ರವಹಿಸಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಕಲಾವತಿ ಬೀದರವಾಡಿ ಮತ್ತು ಸವಿತಾ ಒಂಟಿ ಮೃತಪಟ್ಟ ದುರ್ದೈವಿಗಳು. ವಾಲ್ಮೀಕಿ ದೇವಸ್ಥಾನ ಸ್ವಚ್ಛಗೊಳಿಸಿ ಶೆಟರ್ ಎಳೆಯುವಾಗ ದುರಂತ ಸಂಭವಿಸಿದೆ. ಮೃತ ಕಲಾವತಿ ಪತಿ ಮಾರುತಿ ಬೀದರವಾಡಿಗೆ ಗಂಭೀರ ಗಾಯವಾಗಿದ್ದು, ಬೆಳಗಾವಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ರೈಲ್ವೆ ಹಳಿ ಮೇಲೆ ವ್ಯಕ್ತಿಯ ಶವಪತ್ತೆ

ರೈಲ್ವೆ ಹಳಿ ಮೇಲೆ ವ್ಯಕ್ತಿಯ ಶವಪತ್ತೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟಿ ಬಡಾವಣೆ ಬಳಿ ಮೃತದೇಹ ಸಿಕ್ಕಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ಶಂಕ ರೈಲ್ವೆ ಇಲಾಖೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:07 am, Tue, 6 August 24