ಇಸ್ರೋ, ಐಎಎಫ್, ಡಿಆರ್‌ಡಿಒ ಸಂಸ್ಥೆಗಳಿಂದ ಯಶಸ್ವಿ ಪ್ರಯೋಗ; ಚಿತ್ರದುರ್ಗದಲ್ಲಿ RLV-LEX ಯಶಸ್ವಿ ಹಾರಾಟ
ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ RLV-LEX ಯಶಸ್ವಿ ಹಾರಾಟ ನಡೆಸಿದೆ.
ಚಿತ್ರದುರ್ಗ: ಇಸ್ರೋ, ಐಎಎಫ್, ಡಿಆರ್‌ಡಿಒ ಸಂಸ್ಥೆಗಳು ಮತ್ತೊಂದು ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ RLV-LEX ಯಶಸ್ವಿ ಹಾರಾಟ ನಡೆಸಿದೆ. ಮರುಬಳಕೆ ಮಾಡಬಹುದಾದ ವಾಹನ(RLV)ದ ಆಟಾನಮಸ್ ಲ್ಯಾಂಡಿಂಗ್ ಮಿಷನ್ ಯಶಸ್ವಿಯಾಗಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಭಾರತವು ಪ್ರಮುಖ ಸಾಧನೆಯನ್ನು ಮಾಡಿದೆ. ಡಿಆರ್‌ಡಿಒ ಜೊತೆಗೂಡಿ ಇಸ್ರೋ ಭಾನುವಾರ ಬೆಳಗ್ಗೆ, ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ರಿಯೂಸ್‌ಬಲ್ ಲಾಂಚ್ ವೆಹಿಕಲ್ ಆಟಾನಮಸ್ ಲ್ಯಾಂಡಿಂಗ್ ಮಿಷನ್(RLV LEX) ಯಶಸ್ವಿ ಪರೀಕ್ಷೆ ಮಾಡಲಾಗಿದೆ. ಭಾರತೀಯ ವಾಯು ಪಡೆಯ ಚೆನೋಕ್ ಹೆಲಿಕಾಪ್ಟ್ ಮೂಲಕ ಆರ್‌ಎಲ್‌ವಿ ಬೆಳಗ್ಗೆ 7.10ಕ್ಕೆ ಟೇಕ್ ಆಫ್ ಆಯ್ತು. ಆರ್‌ಎಲ್‌ವಿ ಬಿಡುಗಡೆಯು ಸ್ವಾಯತ್ತವಾಗಿತ್ತು. ನಂತರ ಇಂಟಿಗ್ರೇಟೆಡ್ ನ್ಯಾವಿಗೇಷನ್, ಗೈಡೆನ್ಸ್ ಮತ್ತು ಕಂಟ್ರೋಲ್ ಸಿಸ್ಟಮ್ ಅನ್ನು ಬಳಸಿಕೊಂಡು 7:40ಕ್ಕೆ ಆಟಾನಮಸ್ ಲ್ಯಾಂಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಮೂಲಕ ಬಾಹ್ಯಾಕಾಶ ವಾಹನದ ಆಟಾನಮಸ್ ಲ್ಯಾಂಡಿಂಗ್ ಅನ್ನು ಇಸ್ರೋ ಯಶಸ್ವಿಯಾಗಿ ಸಾಧಿಸಿ, ಮತ್ತೊಂದು ಹಂತಕ್ಕೆ ಏರಿದೆ ಎಂದು ಇಸ್ರೋ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ISRO, DRDO, IAF Jointly Conducted RLV Test@isro @DRDO_India and @IAF_MCC conducted the Reusable Launch Vehicle Autonomous Landing Mission (RLV LEX) successfully from Aeronautical Test Range, Chitradurga, Karnataka this morning.
Date : April 2, 2023 pic.twitter.com/HWfMHqIvLJ
— Indian Aerospace Defence News (IADN) (@NewsIADN) April 2, 2023
ಒಂದು ವೇಳೆ, ಬಾಹ್ಯಾಕಾಶದಿಂದ ರಾಕೆಟ್ ಬಂದರೆ ಯಾವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆಯೋ ಅಂಥದ್ದೇ ಪರಿಸ್ಥಿತಿಯಲ್ಲಿ ಮರು ಬಳಸಬಹುದಾದ ಉಡಾವಣಾ ವಾಹನದ ಸ್ವಾಯತ್ತ ಲ್ಯಾಂಡಿಂಗ್ ಪರೀಕ್ಷೆಯನ್ನು ಕೈಗೊಳ್ಳಲಾಯಿತು. ಅಂದರೆ, ಮಾನವ ರಹಿತ ರಾಕೆಟ್, ಲ್ಯಾಂಡಿಂಗ್ ಹೈ ಸ್ಪೀಡ್ ಮತ್ತು ರಿಟರ್ನಿಂಗ್ ಸೇಮ್ ಪಾಥ್‌ನ ಸ್ಥಿತಿಗಳಲ್ಲಿ ಈ ಪರೀಕ್ಷೆಯನ್ನು ಕೈಗೊಳ್ಳಲಾಯಿತು. ಸ್ವಾಯತ್ತ ಲ್ಯಾಂಡಿಂಗ್ ಪರೀಕ್ಷೆಗೆ ಸ್ಥಳೀಯ ನ್ಯಾವಿಗೇಷನ್, ಉಪಕರಣಗಳು, ಸಂವೇದಕಗಳು ಸೇರಿದಂತೆ ಇತ್ಯಾದಿ ಸ್ಥಳೀಯ ವ್ಯವಸ್ಥೆಗಳನ್ನು ಬಳಸಿಕೊಂಡು ಮಾಡಿರುವುದು ಇಸ್ರೋದ ಹೆಚ್ಚುಗಾರಿಕೆಯಾಗಿದೆ. ಈ ಎಲ್ಲ ವ್ಯವಸ್ಥೆಗಳನ್ನು ಇಸ್ರೋ ಅಭಿವೃದ್ದಿಪಡಿಸಿದೆ.
RLV’s autonomous approach and landing pic.twitter.com/D4tDmk5VN5
— ISRO (@isro) April 2, 2023
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:15 pm, Sun, 2 April 23