ಚಿತ್ರದುರ್ಗ: ಮತಗಟ್ಟೆಯತ್ತ ಸುಳಿಯದ ಮತದಾರರು; ಮಧ್ಯಾಹ್ನ 2 ಗಂಟೆಯವರೆಗೆ ಶೇಕಡಾ 10.70ರಷ್ಟು ಮತದಾನ
MLC Election: ವಿಧಾನ ಪರಿಷತ್ತಿನ ಧಾರವಾಡ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆ ಮಧ್ಯಾಹ್ನ 2 ಗಂಟೆಯವರೆಗಿನ ಮತದಾನದ ವಿವರ ಇಲ್ಲಿದೆ. ಧಾರವಾಡ ಜಿಲ್ಲೆಯಲ್ಲಿ ಶೇಕಡಾ 68.98, ಹಾವೇರಿ ಜಿಲ್ಲೆಯಲ್ಲಿ ಶೇಕಡಾ 88.93, ಗದಗ ಜಿಲ್ಲೆಯಲ್ಲಿ ಶೇಕಡಾ 92.93 ಮತದಾನ ನಡೆದಿದೆ.
ಚಿತ್ರದುರ್ಗ: ಇಲ್ಲಿನ ವಿಧಾನಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಶೇಕಡಾ 10.70ರಷ್ಟು ಮತದಾನ ಮಾತ್ರ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ. ಬಹುತೇಕ ಮತದಾರರು ಜಿಲ್ಲೆಯಲ್ಲಿ ಮತಗಟ್ಟೆಯತ್ತ ಸುಳಿಯದ ಬಗ್ಗೆ ಹೇಳಲಾಗಿದೆ. ಅಭ್ಯರ್ಥಿಗಳಿಂದ ಹಣದ ನಿರೀಕ್ಷೆಯಲ್ಲಿ ಕಾದಿರುವ ಅನುಮಾನ ವ್ಯಕ್ತವಾಗಿದೆ.
ಮಧ್ಯಾಹ್ನ 2 ಗಂಟೆಯವರೆಗಿನ ಮತದಾನದ ವಿವರ ಇಲ್ಲಿದೆ ವಿಧಾನ ಪರಿಷತ್ತಿನ ಧಾರವಾಡ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆ ಮಧ್ಯಾಹ್ನ 2 ಗಂಟೆಯವರೆಗಿನ ಮತದಾನದ ವಿವರ ಇಲ್ಲಿದೆ. ಧಾರವಾಡ ಜಿಲ್ಲೆಯಲ್ಲಿ ಶೇಕಡಾ 68.98, ಹಾವೇರಿ ಜಿಲ್ಲೆಯಲ್ಲಿ ಶೇಕಡಾ 88.93, ಗದಗ ಜಿಲ್ಲೆಯಲ್ಲಿ ಶೇಕಡಾ 92.93 ಮತದಾನ ನಡೆದಿದೆ. ಅದರಂತೆ, ಒಟ್ಟು ಶೇಕಡಾ 84.06 ರಷ್ಟು ಮತದಾನ ನಡೆದಿದೆ ಎಂದು ತಿಳಿದುಬಂದಿದೆ.
ಕೋಲಾರ ವಿಧಾನಪರಿಷತ್ ಚುನಾವಣೆಯಲ್ಲಿ ಈವರೆಗೆ ಶೇಕಡಾ 88 ರಷ್ಟು ಮತದಾನ ನಡೆದಿದೆ. ಹಾವೇರಿ ಜಿಲ್ಲೆಯಲ್ಲಿ ಮಧ್ಯಾಹ್ನ ಎರಡು ಗಂಟೆಯವರೆಗೆ ಶೇಕಡಾ 88.93ರಷ್ಟು ಮತದಾನ ಆಗಿದೆ. ಬೆಳಿಗ್ಗೆ ಎಂಟು ಗಂಟೆಯಿಂದ ಆರಂಭವಾಗಿರುವ ಮತದಾನ, ಸಂಜೆ ನಾಲ್ಕು ಗಂಟೆಗೆ ಮುಕ್ತಾಯ ಆಗಲಿದೆ.
ಈ ಹಿಂದೆಯೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು, ಆದ್ರೆ ಕೊಡಲಿಲ್ಲ ಈ ಹಿಂದೆಯೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದ್ರೆ ಕೊಡಲಿಲ್ಲ. ಈಗ ಸಂಪುಟ ಪುನರ್ ರಚನೆ ಆಗುವ ನಿರೀಕ್ಷೆ ಇದೆ. ಆ ವೇಳೆ ಸಚಿವ ಸ್ಥಾನ ನೀಡುವ ನಿರೀಕ್ಷೆ ಇದೆ. ನನಗೆ ಅನ್ಯಾಯ ಆಗಿರುವುದು ನಿಜ. ನನಗೆ ಅನ್ಯಾಯವಾಗಿದೆ. ಅದು ಸರಿ ಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ದಾವಣಗೆರೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ಶಂಕರ ಹೇಳಿಕೆ ನೀಡಿದ್ದಾರೆ.
ಉತ್ತರಕನ್ನಡ: ಹಳಿಯಾಳ ಹಾಗೂ ಭಟ್ಕಳದಲ್ಲಿ ಶಾಸಕರಿಂದ ಮತದಾನ ಹಳಿಯಾಳ ಶಾಸಕ ಆರ್.ವಿ. ದೇಶ್‌ಪಾಂಡೆ ಹಾಗೂ ಭಟ್ಕಳ ಶಾಸಕ ಸುನೀಲ್ ನಾಯ್ಕ್‌ರಿಂದ ಮತದಾನ ನಡೆದಿದೆ. ಹಳಿಯಾಳದ ಸಮುದಾಯ ಭವನ ಹಾಗೂ ಭಟ್ಕಳ ಪಟ್ಟಣ ಪಂಚಾಯತ್‌ನಲ್ಲಿ ಮತದಾನ ಮಾಡಿದ್ದಾರೆ. ಬೆಂಬಲ ಮತದಾರರೊಂದಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ಮಧ್ಯಾಹ್ನವಾಗುತ್ತಿದ್ದಂತೇ ಜಿಲ್ಲೆಯಲ್ಲಿ ಬಿರುಸಿನ ಮತದಾನ ನಡೆದಿದೆ.
ವಿಧಾನಪರಿಷತ್ ಚುನಾವಣೆ ಹಿನ್ನೆಲೆ; ಟ್ಯಾಕ್ಟರ್ ನಲ್ಲಿ ಮತಘಟ್ಟೆಗೆ ಬಂದು ಹಕ್ಕು ಚಲಾಯಿಸಿದ ರೇಣುಕಾಚಾರ್ಯ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಟ್ಯಾಕ್ಟರ್ ನಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಶಾಸಕ ರೇಣುಕಾಚಾರ್ಯ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ನಗರದ ಪುರಸಭೆಯಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಪುರಸಭೆ ಸದಸ್ಯರೊಂದಿಗೆ ಹಿರೇಕಲ್ಮಠ ಹಾಗೂ ನೀಲಕಂಠೇಶ್ವರ ಸ್ವಾಮೀ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ರೇಣುಕಾಚಾರ್ಯ ಬಳಿಕ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಪುರಸಭೆಯ 14 ಜನ ಸದಸ್ಯರೊಂದಿಗೆ ಒಟ್ಟಿಗೆ ತೆರಳಿ ಮತ ಚಲಾಯಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ; ನಾನೇ ಸಿಎಂ ಆಗುವೆ: ಶಾಮನೂರು ಶಿವಶಂಕರಪ್ಪ
ಇದನ್ನೂ ಓದಿ: ಕಲಬುರಗಿ: ಪಾಲಿಕೆ ಸದಸ್ಯೆಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸದಂತೆ, ಮೇಯರ್ ಚುನಾವಣೆಯಲ್ಲಿ ಭಾಗವಹಿಸದಂತೆ ಸದಸ್ಯೆಗೆ ತಡೆಯಾಜ್ಞೆ