AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ; ನಾನೇ ಸಿಎಂ ಆಗುವೆ: ಶಾಮನೂರು ಶಿವಶಂಕರಪ್ಪ

ಬಿಜೆಪಿಯವರ ಆಡಳಿತದ ಬಗ್ಗೆ ಜನರಿಗೆ ಸಮಾಧಾನ ಇಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಗೆಲ್ಲಿಸಲಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿಲ್ಲಿದ್ದಾರೆ ಎಂದು ಶಾಮನೂರ ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ; ನಾನೇ ಸಿಎಂ ಆಗುವೆ: ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ
TV9 Web
| Edited By: |

Updated on: Dec 10, 2021 | 2:55 PM

Share

ದಾವಣಗೆರೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಸಿಎಂ ನಾನೇ ಆಗುವೆ, ನಾನು‌ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದು ದಾವಣಗೆರೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಜನ ಬಿಜೆಪಿ ಮೇಲೆ ಬೇಸರಗೊಂಡಿದ್ದಾರೆ. ಬಿಜೆಪಿಯವರ ಆಡಳಿತದ ಬಗ್ಗೆ ಜನರಿಗೆ ಸಮಾಧಾನ ಇಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಗೆಲ್ಲಿಸಲಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿಲ್ಲಿದ್ದಾರೆ ಎಂದು ಶಾಮನೂರ ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಫುರ: ಚುನಾವಣಾಧಿಕಾರಿಯ ಯಡವಟ್ಟು ಹಿನ್ನಲೆ ಸ್ಥಗಿತಗೊಂಡ ಮತದಾನ ಇಲ್ಲಿನ ಚಿಂತಾಮಣಿ ನಗರಸಭೆಯ ಮತಗಟ್ಟೆಯಲ್ಲಿ ಚುನಾವಣಾಧಿಕಾರಿಯ ಯಡವಟ್ಟು ಹಿನ್ನಲೆ ಸ್ಥಗಿತಗೊಂಡಿರುವ ಮತದಾನ ಮುಂದುವರೆಸುವಂತೆ ಪರ ವಿರೋಧ ಆಗ್ರಹ ವ್ಯಕ್ತವಾಗಿದೆ. ಸಂಸದ ಮುನಿಸ್ವಾಮಿ ಹಾಗೂ ಶಾಸಕ ಎಂ.ಕೃಷ್ಣಾರೆಡ್ಡಿ ಬೆಂಬಲಿಗರಿಂದ ಪರ ವಿರೋಧ ಕೇಳಿಬಂದಿದೆ. ಮುನಿಸ್ವಾಮಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೃಷ್ಣಾರೆಡ್ಡಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಶಾಸಕ ಆಗಿದ್ದಾರೆ. ಎಂ.ಎಲ್.ಸಿ ಚುನಾವಣೆಯ ಕೌಂಟರ್ ಬ್ಯಾಲೇಟ್ ಪೇಪರನ್ನು ಚುನಾವಣಾಧಿಕಾರಿ ಮತದಾರರಿಗೆ ನೀಡಿದ್ದರು. ಕೆಲವು ಮತದಾರರು ಬ್ಯಾಲೇಟ್ ಪೇಪರ್ ಹಾಗೂ ಕೌಂಟರ್ ಪೈಲ್ ಎರಡನ್ನು ಮತಪೆಟ್ಟಿಗೆಗೆ ಹಾಕಿರುವುದು ತಿಳಿದುಬಂದಿದೆ. ಹೀಗಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಆಗ್ರಹ ಕೇಳಿಬಂದಿದೆ. ಶಾಸಕ ಹಾಗೂ ಸಂಸದ ಸ್ಥಳದಲ್ಲೆ ಮುಕ್ಕಾಂ ಹೂಡಿದ್ದಾರೆ.

ಶಿವಮೊಗ್ಗ: ಗ್ರಾಮ ಪಂಚಾಯತ್​​ನ ಇಬ್ಬರು ಸದಸ್ಯರಿಂದ ಮತದಾನ ಬಹಿಷ್ಕಾರ ಇಲ್ಲಿನ ತೀರ್ಥಹಳ್ಳಿ ತಾಲೂಕು ನಾಲೂರು ಕೊಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಂಎಲ್​ಸಿ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡಿದ ಘಟನೆ ನಡೆದಿದೆ. ಗ್ರಾಮ ಪಂಚಾಯತ್​​ನ ಇಬ್ಬರು ಸದಸ್ಯರಿಂದ ಮತದಾನ ಬಹಿಷ್ಕಾರ ಮಾಡಲಾಗಿದೆ. ಸುಧಾ ಮತ್ತು ಬಿ.ಜಿ.ಸಂದೀಪ್ ಇಬ್ಬರು ಮತ ಚಲಾಯಿಸಿಲ್ಲ. ಗ್ರಾಮ ಪಂಚಾಯತ್​ಗೆ ಲಕ್ಷಾಂತರ ರೂಪಾಯಿ ರಾಜಧನ ಬರಬೇಕಿದೆ. ನಾಲೂರು ಕೊಳಿಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ಮೂರು ಮರಳು ಕ್ವಾರಿಗಳಿವೆ. ಇವುಗಳಿಂದ ಗ್ರಾಮ ಪಂಚಾಯಿತಿಗೆ ಪ್ರತಿ ವರ್ಷ 84 ಲಕ್ಷ ರೂ. ರಾಜಧನ ಬಿಡುಗಡೆಯಾಗಬೇಕು. ಕಳೆದ ಮೂರು ವರ್ಷದಿಂದ ರಾಜಧನ ಬಿಡುಗಡೆಯಾಗಿಲ್ಲ. ಹಾಗಾಗಿ 2.48 ಕೋಟಿ ರೂ. ರಾಜಧನ ಬಾಕಿ ಇದೆ. ಸಿಎಂ ಫಂಡ್​ನಿಂದ ರಾಜಧನ ಪಂಚಾಯತ್​ಗೆ ಬಿಡುಗಡೆ ಮಾಡಬೇಕು. ಈ ಕುರಿತು ಜಿಲ್ಲಾಡಳಿತ ನಿರ್ಲಕ್ಷ್ಯತೆ ವಹಿಸಿದೆ ಎಂದು ಗ್ರಾ.ಪಂ ಸದಸ್ಯರು ಮತ್ತು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಪಾಲಿಕೆ ಸದಸ್ಯೆಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸದಂತೆ, ಮೇಯರ್ ಚುನಾವಣೆಯಲ್ಲಿ ಭಾಗವಹಿಸದಂತೆ ಸದಸ್ಯೆಗೆ ತಡೆಯಾಜ್ಞೆ

ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ ಫೋಟೋ ವೈರಲ್, ಗೌಪ್ಯ ಮತದಾನ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ನಾಯಕರ ಆಕ್ರೋಶ