ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರೊಬ್ಬರ ಮೇಲೆ ಹಲ್ಲೆ ನಡೆಸಿ ವಿದ್ಯಾರ್ಥಿಗಳು ಪುಂಡಾಟ ಮೆರೆದಿದ್ದರು. ವಿದ್ಯಾರ್ಥಿಗಳು ಶಿಕ್ಷಕನ ಮೇಲೆ ಹಲ್ಲೆ ನಡೆಸಿ, ಕಿರಿಕಿರಿ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿ ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾನೆ. ಗ್ರಾಮಸ್ಥರು ಸೇರಿ ವಿದ್ಯಾರ್ಥಿಯಿಂದ ಶಿಕ್ಷಕರಿಗೆ ಕ್ಷಮೆ ಕೇಳಿಸಿದ್ದಾರೆ.
ಡಿಸೆಂಬರ್ 3 ರಂದು ಕೆಲ ವಿದ್ಯಾರ್ಥಿಗಳು ಸೇರಿ ತರಗತಿ ಕೊಠಡಿಯಲ್ಲೇ ಶಿಕ್ಷಕ ಪ್ರಕಾಶ್ ಎಂಬುವವರಿಗೆ ಕೀಟಲೆ ಮಾಡಿದ್ದರು. ಗುರುಗಳನ್ನು ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೂ ಶಿಕ್ಷಕರು ಸಹನೆ, ತಾಳ್ಮೆಯಿಂದ ವಿದ್ಯಾರ್ಥಿಗಳ ಭವಿಷ್ಯ ಹಿನ್ನೆಲೆ ಯಾರಿಗೂ ವಿಷಯ ತಿಳಿಸಿರಿಲಿಲ್ಲ. ವಿಡಿಯೋ ನೋಡಿದ ಜನರು ಘಟನೆಯನ್ನು ಖಂಡಿಸಿದ್ದರು. ಈ ಸಂಬಂಧ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ವಿದ್ಯಾರ್ಥಿಗಳನ್ನ ಶಾಲೆಯಿಂದ ಅಮಾನತು ಮಾಡಬೇಕೆಂದು ಕೆಲವರು ಆಗ್ರಹಿಸಿದ್ದರು.
ಶಿಕ್ಷಕನಿಗೆ ಎದೆ ನೋವು ಹಲ್ಲೆಗೊಳಗಾದ ಸ್ವಲ್ಪ ಹೊತ್ತಿನಲ್ಲಿ ಶಿಕ್ಷಕನಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಶಾಲೆಗೆ ಬಂದ ಶಿಕ್ಷಕ ಕೆಲ ಹೊತ್ತಿನ ನಂತರ ಆಸ್ಪತ್ರೆಗೆ ತೆರಳಿದ್ದರು. ಮಾಧ್ಯಮಗಳಿಗೆ ಹೇಳಿಕೆ ನೀಡಲು ಸಂಬಂಧಿಕರು ಹಿಂಜರಿದಿದ್ದರು. ಮಕ್ಕಳಿಂದ ಕಿರಿಕಿರಿ ಅನುಭವಿಸಿದ ಶಿಕ್ಷಕನಿಗೆ ನಿವೃತ್ತಿಗೆ ಒಂದು ವರ್ಷ ಮಾತ್ರ ಬಾಕಿ ಇದೆ ಎಂದು ತಿಳಿದು ಬಂದಿದೆ. ಮೇಲಾಗಿ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ತಿಳಿದುಬಂದಿದೆ.
ಹತ್ತನೇ ತರಗತಿಯ ಸಿ ಕ್ಲಾಸ್ನ ನಾಲ್ವರು ವಿದ್ಯಾರ್ಥಿಗಳಿಂದ ಕೃತ್ಯ ಎಸಗಿತ್ತು. ಓರ್ವ ವಿದ್ಯಾರ್ಥಿ ಮೊಬೈಲ್ನಲ್ಲಿ ಈ ವಿಡಿಯೋ ರೆಕಾರ್ಡ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ. 59 ವರ್ಷದ ಪ್ರಕಾಶ ಬೋಗಿ ಎಂಬ ಹಿಂದಿ ಶಿಕ್ಷಕನ ಮೇಲೆ ಹಲ್ಲೆ ಮಾಡಿ ವಿದ್ಯಾರ್ಥಿಗಳು ಅವಮಾನ ಮಾಡಿದ್ದರು. ನಿವೃತ್ತಿಗೆ ಒಂದು ವರ್ಷ ಬಾಕಿ ಇರುವಾಗಲೇ ಈ ಘಟನೆ ನಡೆದಿದೆ.
ಇದನ್ನೂ ಓದಿ
Mountain Day 2021 :ನಿಮ್ಮ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯಲು ಈ ಸ್ಥಳಗಳಿಗೆ ಭೇಟಿ ನೀಡಿ