Sign In

By signing in or creating an account, you agree with Associated Broadcasting Company's Terms & Conditions and Privacy Policy.

Mountain Day 2021 :ನಿಮ್ಮ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯಲು ಈ ಸ್ಥಳಗಳಿಗೆ ಭೇಟಿ ನೀಡಿ

Best hill stations in karnataka: ಗಿರಿಧಾಮಗಳಿಗೆ ಹೆಸರುವಾಸಿ ರಾಜ್ಯದ ಕೂರ್ಗ್​ ಮತ್ತು ಚಿಕ್ಕಮಗಳೂರು ಜಿಲ್ಲೆ. ಪಶ್ಚಿಮ ಘಟ್ಟದಲ್ಲಿ ತಲೆ ಎತ್ತಿ ನಿಂತ  ಸಾಲು ಸಾಲು ಮರಗಳು ದಾರಿಯಲ್ಲಿ ಸಾಗುವಾಗ ತಣ್ಣನೆಯ ಗಾಳಿ ಸೋಕಿಸಿ ಕೈಬೀಸಿ ಕರೆದ ಅನುಭವ ನೀಡುತ್ತದೆ. ಚಿಕ್ಕಮಗಳೂರು ಜಿಲ್ಲೆ ಕರ್ನಾಟಕದಲ್ಲೇ ಹೆಚ್ಚು ಗಿರಿಧಾಮಗಳನ್ನು ಹೊಂದಿರುವ ಜಿಲ್ಲೆ. ಅಲ್ಲದೇ ಕಾಫಿ ನಾಡು ಕೂಡ ಹೌದು. ಹೀಗಾಗಿ ಭೇಟಿ ನೀಡಿದ ವೇಳೆ ಚುಮು ಚುಮು ಚಳಿಗೆ ಬಿಸಿ ಕಾಫಿ ಕುಡಿದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಭಾವ

Mountain Day 2021 :ನಿಮ್ಮ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯಲು ಈ ಸ್ಥಳಗಳಿಗೆ ಭೇಟಿ ನೀಡಿ
ನಂದಿ ಬೆಟ್ಟ
Follow us
TV9 Web
| Updated By: Digi Tech Desk

Updated on:Dec 11, 2021 | 11:41 AM

ದಿನದ ಓಡಾಟ, ಕೆಲಸದ ಒತ್ತಡಗಳ ಮಧ್ಯೆ ಸಂಗಾತಿಯೊಂದಿಗೆ ಒಂದಷ್ಟು ಸಮಯ ಪ್ರಕೃತಿಯ ಮಧ್ಯೆ ಕಳೆದರೆ ಮನಸ್ಸಿಗೆ ಆಹ್ಲಾದವೆನಿಸುತ್ತದೆ. ಪ್ರಕೃತಿಯ ಶಕ್ತಿಯೇ ಅಂಥದ್ದು ತನ್ನೊಳಗಿನ ಸೌಂದರ್ಯದಿಂದ ಎಂತಹವರನ್ನು ಮಂತ್ರಮುಗ್ಧಗೊಳಿಸುತ್ತದೆ. ಅದರಲ್ಲೂ ಬೆಟ್ಟ ಗುಡ್ಡಗಳಂತಹ ಗಿರಿಧಾಮಗಳಿಗೆ ಭೇಟಿ ನೀಡುವುದರಿಂದ ತಂಪನೆಯ ಗಾಳಿ ಮೈಸೋಕಿ ಹೊಸ ಲೋಕವನ್ನೇ ಪರಿಚಯಿಸುತ್ತದೆ. ಅಂತಹ ಸ್ಥಳಗಳಿಗೆ ನೀವು ಭೇಟಿ ನೀಡಬೇಕು ಎಂದರೆ ಇಲ್ಲಿದೆ ನೋಡಿ ನಿಮಗೆ ಒಂದಷ್ಟು ಮಾಹಿತಿ. ಗಿರಿಧಾಮಗಳಿಗೆ ಹೆಸರುವಾಸಿ ರಾಜ್ಯದ ಕೂರ್ಗ್​ ಮತ್ತು ಚಿಕ್ಕಮಗಳೂರು ಜಿಲ್ಲೆ. ಪಶ್ಚಿಮ ಘಟ್ಟದಲ್ಲಿ ತಲೆ ಎತ್ತಿ ನಿಂತ  ಸಾಲು ಸಾಲು ಮರಗಳು ದಾರಿಯಲ್ಲಿ ಸಾಗುವಾಗ ತಣ್ಣನೆಯ ಗಾಳಿ ಸೋಕಿಸಿ ಕೈಬೀಸಿ ಕರೆದ ಅನುಭವ ನೀಡುತ್ತದೆ. ಚಿಕ್ಕಮಗಳೂರು ಜಿಲ್ಲೆ ಕರ್ನಾಟಕದಲ್ಲೇ ಹೆಚ್ಚು ಗಿರಿಧಾಮಗಳನ್ನು ಹೊಂದಿರುವ ಜಿಲ್ಲೆ. ಅಲ್ಲದೇ ಕಾಫಿ ನಾಡು ಕೂಡ ಹೌದು. ಹೀಗಾಗಿ ಭೇಟಿ ನೀಡಿದ ವೇಳೆ ಚುಮು ಚುಮು ಚಳಿಗೆ ಬಿಸಿ ಕಾಫಿ ಕುಡಿದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಭಾವ..

ನಂದಿಬೆಟ್ಟ

nandi hills

ನಂದಿ ಬೆಟ್ಟ ಟಿಪ್ಪು ಸುಲ್ತಾನ ಬೇಸಿಗೆ ಸಮಯದಲ್ಲಿ ಕಾಲಕಳೆಯುತ್ತಿದ್ದ ಜಾಗ ನಂದಿಬೆಟ್ಟ. ಗತಕಾಲದ ಅದ್ಭುತ ವಾಸ್ತುಶಿಲ್ಪವನ್ನು ಪರಿಚಯಿಸುವ ಕಲ್ಲಿನ ಕೋಟೆ ನಂದಿ ಬೆಟ್ಟದಲ್ಲಿದೆ. ಇದು ಪ್ರವಾಸಿಗರನ್ನು ಇನ್ನಷ್ಟು ಕೈಬೀಸಿ ಕರೆಯುತ್ತದೆ. ಅಲ್ಲದೆ ನಂದಿಬೆಟ್ಟ ನಿಮ್ಮ ಸಂಗಾತಿಯೊಂದಿಗೆ ಕಾಲಕಳೆಯಲು ಉತ್ತಮ ಜಾಗವಾಗಿದೆ. ನಂದಿಬೆಟ್ಟದಲ್ಲಿ ಸೂರ್ಯಾಸ್ತವನ್ನು ವೀಕ್ಷಿಸಲು ದಿನನಿತ್ಯ ನೂರಾರು ಜನ ಭೇಟಿ ನೀಡುತ್ತಾರೆ. ನೀವೂ ನಿಮ್ಮ ಸಂಗಾತಿಯೊಂದಿಗೆ ದಿನದ ಅಂತ್ಯವನ್ನು ಸುಂದವಾಗಿ ಕಳೆಯಲು ನಂದಿಬೆಟ್ಟ ಪರ್ಫೆಕ್ಟ್​ ಸ್ಥಳವಾಗಲಿದೆ.

ಕೆಮ್ಮಣ್ಣುಗುಂಡಿ ಮೈಸೂರು ಕೃಷ್ಣರಾಜ ಒಡೆಯರ ಬೇಸಿಗೆಯ ವಿಶ್ರಾಂತ ಸ್ಥಳವಾಗಿದ್ದ ಕೆಮ್ಮಣ್ಣುಗುಂಡಿ, ಈಗ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಶ್ರೀ ಕೃಷ್ಣ ರಾಜೇಂದ್ರ ಹಿಲ್​ ಸ್ಟೇಷನ್​ ಎಂದೂ ಕೆಮ್ಮಣ್ಣುಗುಂಡಿಯ್ನು ಕರೆಯುತ್ತಾರೆ. ವರ್ಷದ ಎಲ್ಲಾ ಸಮಯದಲ್ಲೂ ಪ್ರವಾಸಕ್ಕೆ ಅನುಕೂಲಕರವಾದ ವಾತಾವರಣವನ್ನು ಹೊಂದಿರುವ ಕೆಮ್ಮಣ್ಣುಗುಂಡಿ ಸಮುದ್ರ ಮಟ್ಟದಿಂದ 1,434 ಅಡಿ ಎತ್ತರದಲ್ಲಿದೆ. ಅಲ್ಲದೆ ಚಾರಣ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಜಾಗ. ಇದರ ಜತೆಗೆ ಔಷಧೀಯ ಗುಣಗಳನ್ನು ಹೊಂದಿರುವ ಕ್ಯಾಸ್ಕೇಡ್​ಗಳು ಹಾಗೂ ಅಲ್ಲಲ್ಲಿ ಕಂಡುಬರುವ ಸಣ್ಣ ಜಲಪಾತಗಳು ನಿಮ್ಮ ಸಂಗಾತಿ ಜತೆಗಿನ ನಡಿಗೆಗೆ ಇನ್ನಷ್ಟು ಮೆರಗು ನೀಡುತ್ತದೆ. ಕೆಮ್ಮಣ್ಣುಗುಂಡಿ ಭೇಟಿಯ ವೇಳೆ ನೀವು ಹೆಬ್ಬೆ ಜಲಪಾತ. ಕಲ್ಹಟ್ಟಿ ಜಲಪಾತಗಳಿಗೂ ತೆರಳಬಹದು.

ಕೂರ್ಗ್ (ಕೊಡಗು – ಮಡಿಕೇರಿ) ದಕ್ಷಿಣ ಭಾರತದ ಕಾಶ್ಮೀರ ಅಥವಾ ಭಾರತದ ಸ್ಕಾಟ್​ ಲ್ಯಾಂಡ್​ ಎಂದೇ ಕರೆಯುವ ಕೂರ್ಗ್ ನವದಂಪತಿಗಳಿಗೆ ಸಮಯ ಕಳೆಯುಲು ಉತ್ತಮ ಜಾಗ. ನೀವು ನಿಮ್ಮ ಸಂಗಾತಿಯೊಂದಿಗೆ ಕೂರ್ಗ್ ಗೆ ತೆರಳಿ ಒಂದಷ್ಟುಸಮಯ ಕಳೆದರೆ ಜೀವನದ ಅಧ್ಬುತ ಸಮಯವಾಗುತ್ತದೆ. ಸದಾ ಮೈಗೆ ಸೋಕುವ ತಣ್ಣನೆಯ ಗಾಳಿ, ಚಳಿಗೆ ಒಪ್ಪುವಂತಹ ಬಿಸಿಯಾದ ಕಾಫಿ ನಿಮ್ಮ ದಿನವನ್ನು ಇನ್ನಷ್ಟು ಮುದಗೊಳಿಸುತ್ತದೆ. ಹಸಿರ ರಾಶಿಗಳ ನಡುವೆ ನಿರ್ಮಿಸಿದ ರೆಸಾರ್ಟ್​ಗಳು ನಿಮ್​ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುತ್ತವೆ.

ಸಾವನದುರ್ಗ ಬೆಟ್ಟಗಳು

ಸಾವನದುರ್ಗ

ಭಾರತದ ಅತಿ ದೊಡ್ಡ ಏಕಶಿಲೆಯ ಬೆಟ್ಟ ಈ ಸಾವದುರ್ಗ ಬೆಟ್ಟ. ಕಾಳಿಗುಡ್ಡ ಮತ್ತು ಬಿಳಿಗುಡ್ಡ ಎನ್ನುವ ಎರಡು ಬೆಟ್ಟಗಳು ಸೇರುವ ಈ ಸಾವನದುರ್ಗ ಸ್ಥಳ ಒಂದು ದಿನದ ನಿಮ್ಮ ಪ್ರವಾಸಕ್ಕೆ ಅತ್ಯುತ್ತಮ ಸ್ಥಳ. ಬೆಂಗಳೂರಿನಿಂದ ಒಂದು ಗಂಟೆ ಜರ್ನಿ ಮಾಡಿದರೆ ಕಣ್ಸೆಳೆಯುವ ಸಾವನದುರ್ಗ ಬೆಟ್ಟ ದೊರೆಯುತ್ತದೆ. ಚಾರಣ ಪ್ರಿಯರಿಗೆ ಕಡಿಮೆ ಸಮಯದಲ್ಲಿ ಭೇಟಿ ನೀಡಿ ಹೆಚ್ಚು ಹೊತ್ತು ಆನಂದಿಸಲು ಇದು ಉತ್ತಮ ಸ್ಥಳವಾಗಿದೆ. ಬೆಟ್ಟ ಹತ್ತುವ ಆರಂಭದಲ್ಲಿ ವೀರಭದ್ರಸ್ವಾಮಿ ಹಾಗೂ ಲಕ್ಷ್ಮೀ ನರಸಿಂಹ ದೇವಾಲಯ ದೊರೆಯುತ್ತದೆ. ಹೀಗಾಗಿ ಚಾರಣದ ಆರಂಭದಲ್ಲಿ ದೇವರ ದರ್ಶನವೂ ದೊರುಕುತ್ತದೆ.

ಆಗುಂಬೆ ಕರ್ನಾಟಕದಲ್ಲಿ ನಾಗರಹಾವಿನ ತವರು ಎಂದು ಆಗುಂಬೆಯನ್ನು ಕರೆಯತ್ತಾರೆ. ಏಕೆಂದರೆ ಆಗುಂಬೆಗೆ ತೆರಳುವ ದಾರಿಯಲ್ಲಿ ಅತೀ ಹೆಚ್ಚು ನಾಗರಹಾವು ಕಂಡುಬರುತ್ತದೆ. ಕರ್ನಾಟಕದ ಚಿರಾಪುಂಜಿ ಎಂದು ಕರೆಯುವ ಆಗುಂಬೆ ವಿಶ್ವ ಪಾರಂಪರಿಕ ಸ್ಥಳವಾಗಿದೆ. ಆಗುಂಬೆಯಲ್ಲಿರುವ ಹೇರಳವಾದ ಜೀವ ವೈವಿದ್ಯತೆ, ಪ್ರಾಣಿಸಂಕುಲದಿಂದ ಯುನೆಸ್ಕೋದಿಂದ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ. ಪಶ್ಚಿಮಘಟ್ಟಗಳಲ್ಲಿ ಕಂಡುಬರುವ ಪ್ರಸಿದ್ಧ ಗಿರಿಧಾಮ ಆಗುಂಬೆ ಪ್ರತಿದಿನ ಸುಂದರ ಸೂರ್ಯೋದಯಕ್ಕೆ ಸಾಕ್ಷಿಯಾಗುತ್ತದೆ. ಅರಬ್ಬೀ ಸಮುದ್ರದ ಮಧ್ಯದಿಂದ ಮೋಡಗಳನ್ನು ಸೀಳಿಕೊಂಡು ಹೊಸ ಹುರುಪು, ಹೊಸ ಉತ್ಸಾಹಗಳನ್ನು ತುಂಬಿಕೊಂಡು ಉದಯಿಸುವ ಸೂರ್ಯನನ್ನು ಕಣ್ತುಂಬಿಕೊಳ್ಳಲು ದಿನನಿತ್ಯ ನೂರಾರು ಪ್ರವಾಸಿಗರು ಆಗುಂಬೆಗೆ ಭೇಟಿ ನೀಡುತ್ತಾರೆ.

ಬಿಆರ್​ಹಿಲ್ಸ್​ (ಬಿಳಿಗಿರಿ ರಂಗನ ಬೆಟ್ಟ) ಒಂದು ಕಾಲದಲ್ಲಿ ಮೋಸ್ಟ್​ ವಾಂಟೆಡ್​ ಟೆರರಿಸ್ಟ್​ ವಿರಪ್ಪನ್​ ನೆಲೆಸಿದ ಸ್ಥಳ ಈ ಬಿಆರ್​ಹಿಲ್ಸ್ ಅಥವಾ ಬಿಳಿಗಿರಿ ರಂಗನ ಬೆಟ್ಟ ಸಂಗಾತಿಯೊಂದಿಗೆ ತೆರೆಳಲು ಉತ್ತಮ ಜಾಗ. ಪೂರ್ವ ಮತ್ತು ಪಶ್ಚಿಮ ಘಟ್ಟಗಳ ನಡುವೆ ಹಸಿರು ಹೊದ್ದ ಪ್ರಕೃತಿ ದೇವತೆ ನಿಮ್ಮನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತದೆ, ಸಮುದ್ರ ಮಟ್ಟದಿಂದ ಸುಮಾರು 4,500 ಅಡಿ ಎತ್ತರಲ್ಲಿರುವ ಬಿಆರ್​ಹಿಲ್ಸ್ ದಕ್ಷಿಣ ಭಾರತದ ಹನಿಮೂನ್​ ಸ್ಥಳಗಳಲ್ಲಿ ಒಂದು. ಸಂಗಾತಿಯಂದಿಗೆ ಕಾಲಕಳೆಯಲು ಇದು ಅತ್ಯಂತ ಪ್ರಶಾಂತವಾದ ಸ್ಥಳವಾಗಿದೆ. ಟ್ರೆಕ್ಕಿಂಗ್​, ಕ್ಯಾಂಪಿಂಗ್​, ಜಂಗಲ್​ ಸಫಾರಿ, ಟೆಂಪಲ್​ಹೋಪಿಂಗ್​ ಹಲವು ರೀತಿಯ ಅನುಭವಗಳನ್ನು ನೀವು ಇಲ್ಲಿ ಪಡೆಯಬಹುದು. ಬೇಸಿಗೆ ಆರಂಭದಲ್ಲಿ ಅಥವಾ ಚಳಿಗಾಲದಲ್ಲಿ ಇಲ್ಲಿ ಭೇಟಿಗೆ ಉತ್ತಮ ಸಮಯ. ಬಿಆರ್​ಹಿಲ್ಸ್ ನಲ್ಲಿ ನಿಮಗೆ ಉತ್ತಮ ರೆಸಾರ್ಟ್​ಗಳು ದೊರೆಯುತ್ತವೆ ಹೀಗಾಗಿ ವಸತಿಗೆ ಸಮಸ್ಯೆ ಇಲ್ಲ. ನೀವು ಇಲ್ಲಿಗೆ ಚಾಮರಾಜನಗರ ರೈಲು ನಿಲ್ದಾಣಕ್ಕೆ ಬಂದಿಳಿದರೆ ಆರಾಮವಾಗಿ ಹೋಗಬಹುದು

ದಾಂಡೇಲಿ ದಾಂಡೇಲಿ ಎಂದ ತಕ್ಷಣ ನೆನಪಿಗೆ ಬರುವುದು ರಿವರ್​ ರಾಪ್ಟಿಂಗ್​ . ಕಾಳಿ ನದಿಯ ದಂಡೆಯಲ್ಲಿರುವ ದಾಂಡೇಲಿ ಹೊಸ ಅನುಭವಗಳನ್ನು ಹೊತ್ತ ವಿಶಿಷ್ಟ ತಾಣ. ದಾಂಡೇಲಿಯನ್ನು ಕಾಶ್ಮೀರದ ಮನಾಲಿಗೆ ಹೋಲಿಸುತ್ತಾರೆ. ಅಲ್ಲದೆ ಇಲ್ಲಿ ನೀವು ಭೇಟಿ ನೀಡಿದ ವೇಳೆ ಹಲವು ಜಲಪಾತಗಳನ್ನು ಕಾಣಬಹುದು ಮುಖ್ಯವಾಗಿ ಸಫಾರಿಗೆ ತೆರಳಬಹುದು. ಸಾಹಸ ಮನಸ್ಥಿತಿಯುಳ್ಳ ದಂಪತಿಗೆ ದಾಂಡೇಲಿ ನಿಜಕ್ಕೂ ಹೇಳಿ ಮಾಡಿಸಿದ ಜಾಗ.

Published On - 11:08 am, Sat, 11 December 21