Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ಸ್ನಾನದ ವೇಳೆ ಲೂಫಾ ಬ್ರಷ್​ಗಳ ಬಳಕೆ ಒಳ್ಳೆಯದಾ? ಇಲ್ಲಿದೆ ನೋಡಿ ಮಾಹಿತಿ

ದಿನನಿತ್ಯ ಸ್ನಾನದ ವೇಳೆ ನೀವು ಬಳಸುವ ಈ ಲೂಫಾಗಳ ಬಳಕೆ ಎಷ್ಟು ನೈರ್ಮಲ್ಯಯುತವಾದದ್ದು ಎನ್ನುವ ಪ್ರಶ್ನೆ ಮೂಡುತ್ತದೆ. ಲೂಫಾಗಳನ್ನು ಪ್ಲಾಸ್ಟಿಕ್​ನಿಂದ ತಯಾರಿಸುತ್ತಾರೆ. ಅಲ್ಲದೆ ದಿನನಿತ್ಯ ಬಳಸಿದ ಬಳಿಕ ಅದರಲ್ಲಿ ನೀರಿನ ಅಂಶ ಹಾಗೇಯೇ ಉಳಿದು ಬ್ಯಾಕ್ಟೀರಿಯಾಗಳಿಗೆ ಮನೆಯಂತಾಗುತ್ತದೆ.

ಪ್ರತಿದಿನ ಸ್ನಾನದ ವೇಳೆ ಲೂಫಾ ಬ್ರಷ್​ಗಳ ಬಳಕೆ ಒಳ್ಳೆಯದಾ? ಇಲ್ಲಿದೆ ನೋಡಿ ಮಾಹಿತಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 11, 2021 | 3:22 PM

ದೇಹವನ್ನು ಆಂತರಿಕವಾಗಿ ರಕ್ಷಿಸಿಕೊಳ್ಳಲು ಹಾಗೂ ಆರೋಗ್ಯಯುತವಾಗಿರಿಸಿಕೊಳ್ಳಲು ಸಮತೋಲಿತ ಆಹಾರ ಸೇವಿಸಿದಂತೆಯೇ ಬಾಹ್ಯ ಸ್ವಚ್ಛತೆಗೂ ಅಷ್ಟೇ ಗಮನ ನೀಡಬೇಕು. ಸ್ನಾನಕ್ಕೆ ಬಳಸುವ ಸೋಪು, ಬ್ರಷ್ ಅಥವಾ ಲೂಫಾನಂತಹ ಬ್ರಷ್​ಗಳ ಬಗ್ಗೆಯೂ ಅಷ್ಟೇ ಕಾಳಜಿವಹಿಸಬೇಕು. ಏಕೆಂದರೆ ಹೊರಗಿನಿಂದ ರೋಗ ಹರಡುವ ಸಂಭವ ಜಾಸ್ತಿ ಇರುತ್ತದೆ. ಹೀಗಾಗಿ ನಾವು ಬಳಸುವ ವಸ್ತುವಿನ ಬಗ್ಗೆ ಹೆಚ್ಚಿನ ನಿಗಾ ಅಗತ್ಯ. ಕೊರೋನಾದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸ್ಯಾನಿಟೈಸರ್​ ಬಳಸಿದಂತೆಯೇ ಆಗಾಗ ಉಪಯೋಗಿಸುವ ವಸ್ತುಗಳನ್ನು ಶುದ್ಧಗೊಳಿಸುತ್ತಿರಬೇಕು. ಇನ್ನೂ ಕೆಲವೊಮ್ಮೆ ಕೆಲವು ವಸ್ತುಗಳನ್ನು ಅಗತ್ಯವಿಲ್ಲದಿದ್ದರೂ ಬಳಸುತ್ತಿರುತ್ತೇವೆ. ಅಂತಹವುಗಳಿಂದ ನಮ್ಮ ಚರ್ಮಕ್ಕೆ ಹಾನಿಯಾಗಬಹುದು. ಈ ರೀತಿ ತೀರಾ ಅಗತ್ಯವಿಲ್ಲದ ವಸ್ತುಗಳಲ್ಲಿ ಲೂಫಾ(ಮೈ ಉಜ್ಜುವ ಬ್ರಷ್) ಕೂಡ ಒಂದು.

ಹೌದು ದಿನನಿತ್ಯ ಸ್ನಾನದ ವೇಳೆ ನೀವು ಬಳಸುವ ಈ ಲೂಫಾಗಳ ಬಳಕೆ ಎಷ್ಟು ನೈರ್ಮಲ್ಯಯುತವಾದದ್ದು ಎನ್ನುವ ಪ್ರಶ್ನೆ ಮೂಡುತ್ತದೆ. ಲೂಫಾಗಳನ್ನು ಪ್ಲಾಸ್ಟಿಕ್​ನಿಂದ ತಯಾರಿಸುತ್ತಾರೆ. ಅಲ್ಲದೆ ದಿನನಿತ್ಯ ಬಳಸಿದ ಬಳಿಕ ಅದರಲ್ಲಿ ನೀರಿನ ಅಂಶ ಹಾಗೇಯೇ ಉಳಿದು ಬ್ಯಾಕ್ಟೀರಿಯಾಗಳಿಗೆ ಮನೆಯಂತಾಗುತ್ತದೆ. ಹೀಗಾಗಿ ಲೂಫಾಗಳ ಬಳಕೆ ನಿಮ್ಮ ಚರ್ಮಕ್ಕೆ ಅತ್ಯಂತ ಹಾನಿಕರ ಎನ್ನುತ್ತಾರೆ ವೈದ್ಯರು. ಲೂಫಾಗಳಿಂದ ನೀವು ನಿಮ್ಮ ಮೈಯನ್ನು ಉಜ್ಜಿಕೊಂಡರೆ ಮೃದು ಚರ್ಮ ಹಾನಿಗೊಳಗಾಗಿ ಉರಿ ಉಂಟಾಗಬಹುದು.

ಬ್ಯಾಕ್ಟೀರಿಯಾಗಳ ಆಗರ ಲೂಫಾಗಳು ಪ್ಲಾಸ್ಟಿಕ್​ನಿಂದ ತಯಾರಿಸಿದ ಲೂಫಾಗಳಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುತ್ತವೆ. ಅವು ನಿಮ್ಮ ಸ್ಕಿನ್​ ಗೆ ತಾಗಿ ಚರ್ಮ ಸಂಬಂಧೀ ಕಾಯಿಲೆಗಳಿಗೆ ಕಾರಣವಾಗಬಹುದು. ಈ ರೀತಿಯ ಪ್ಲಾಸ್ಟಿಕ್​ ಲೂಫಾಗಳಲ್ಲಿ ಇ.ಕೋಲಿ. ಸ್ಯಡೋಮೊನಾಸ್, ಎರುಗಿನೋಸಾ, ಸ್ಟ್ಯಾಫಿಲೊಕೊಕಾಸ್, ಸ್ಟ್ರಿಪ್ಟೋಕೋಕಸ್​ ಅಥವಾ ಶಿಲೀಂಧ್ರಗಳು ಸೇರಿಕೊಂಡಿರುತ್ತವೆ. ಹೀಗಾಗಿ ಈ ಶಿಲೀಂಧ್ರಗಳು ನಿಮ್ಮ ಸ್ಕಿನ್​ಗೆ ಧಕ್ಕೆಯುಂಟುಮಾಡಿ ಹಲವು ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಲೂಫಾಗಳ ಬಳಕೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.

ಸೋಂಕು ಹರಡುವಿಕೆ ಹೆಚ್ಚು ಲೂಫಾಗಳ ಬಳಕೆಯಿಂದ ನಿಮ್ಮ ಚರ್ಮದ ಮೇಲಾದ ಗಾಯಕ್ಕೆ ಹಾನಿಯಾಗಿ ಉರಿ ಆರಂಭವಾಗುತ್ತದೆ ಅಲ್ಲದೆ ಮೊಡವೆಗಳಿದ್ದರೆ ಅದರ ಮೇಲೆ ಉಜ್ಜಿದಾಗ ಮೊಡವೆಯಲ್ಲಿದ್ದ ಬ್ಯಾಕ್ಟೀರಿಯಾಗಳು ಮುಖದ ಉಳಿದ ಭಾಗಗಳಿಗೂ ಹರಡುವ ಸಾಧ್ಯತೆ ಹೆಚ್ಚು. ತೀರಾ ಅಗತ್ಯ ಕಾರಣಗಳಿಗೆ ಲೂಫಾಗಳನ್ನು ಬಳಕೆ ಮಾಡುತ್ತಿದ್ದರೆ, ಅವುಗಳ ಸ್ವಚ್ಛತೆಯೆಡೆಗೆ ನೀವು ಅತಿಯಾಗಿ ಗಮನಹರಿಸಬೇಕು. ಒಂದು ಬಾರಿ ಬಳಸಿದ ಲೂಫಾವನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಇದರಿಂದ ತೇವಾಂಶ ಒಣಗಿ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ.

ಸ್ನಾನಕ್ಕೆ ನೊರೆ ಬೇಕೆಂದು ಲೂಫಾಗಳ ಬಳಕೆ ಬೇಡ ನೀವು ಸ್ನಾನ ಮಾಡುವಾಗ ಸೋಪು ಬಳಸುವುದರಿಂದ ನೊರೆ ಬರುವುದಿಲ್ಲ ಎಂದು ಲೂಫಾವನ್ನು ಬಳಸುತ್ತಿದ್ದರೆ ಅದರ ಅವಶ್ಯಕತೆ ಇಲ್ಲ ಎನ್ನುತ್ತಾರೆ ವೈದ್ಯರು. ಹೌದು. ಕೈಯಿಂದ ಉಜ್ಜಿದರೆ ನಿಮ್ಮ ಬಾತ್​ಟಬ್​ನಲ್ಲಿ ಬೇಕಾದಷ್ಟು ನೊರೆ ತಂದುಕೊಳ್ಳಬಹುದು. ಅದಕ್ಕಾಗಿ ಲೂಫಾಗಳನ್ನು ಬಳಸಿದರೆ ನೊರೆ ಸಿಗುತ್ತದೆ. ಅದೇ ರೀತಿ ನಿಮ್ಮ ಚರ್ಮಕ್ಕೂ ಅತಿಯಾದ ಹಾನಿಯುಂಟಾಗುತ್ತದೆ. ಹೀಗಾಗಿ ಲೂಫಾಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಅಥವಾ ಅಗತ್ಯವಿಲ್ಲ ಎನಿಸಿದರೆ ಬಳಕೆಯನ್ನು ನಿಲ್ಲಿಸಿ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಇದನ್ನೂ ಓದಿ:

Weight Loss: ಗಟ್ಟಿ ಆಹಾರದ ಬದಲು ಜ್ಯೂಸ್​ ಕುಡಿಯೋದ್ರಿಂದ ತೂಕ ಕಡಿಮೆಯಾಗುತ್ತಾ?

Green Tea Benefits: ಗ್ರೀನ್​ ಟೀ ನಿಮ್ಮ ದೇಹಕ್ಕೆ ಎಷ್ಟು ಒಳಿತು? ಇಲ್ಲಿದೆ ಗ್ರೀನ್​ ಟೀ ಮಹತ್ವ

ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್