- Kannada News Photo gallery Mix these things in water while taking bath these helps to over come skin problems
ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಸೇರಿಸಿ; ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ
ಸ್ನಾನದ ಮೂಲಕ ನಿಮ್ಮ ತ್ವಚೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸಬಹುದು ಎಂಬುವುದು ನಿಮಗೆ ತಿಳಿದಿದೆಯೇ? ಇದಕ್ಕಾಗಿ ನೀವು ಸ್ನಾನದ ನೀರಿನಲ್ಲಿ ಕೆಲವು ವಸ್ತುಗಳನ್ನು ಮಿಶ್ರಣ ಮಾಡಬೇಕು.
Updated on: Dec 11, 2021 | 8:05 AM

ತ್ವಚೆಯನ್ನು ಸ್ವಚ್ಛವಾಗಿಡಲು ಪ್ರತಿಯೊಬ್ಬರೂ ಪ್ರತಿದಿನ ಸ್ನಾನ ಮಾಡುತ್ತಾರೆ. ಆದರೆ ಸ್ನಾನದ ಮೂಲಕ ನಿಮ್ಮ ತ್ವಚೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸಬಹುದು ಎಂಬುವುದು ನಿಮಗೆ ತಿಳಿದಿದೆಯೇ? ಇದಕ್ಕಾಗಿ ನೀವು ಸ್ನಾನದ ನೀರಿನಲ್ಲಿ ಕೆಲವು ವಸ್ತುಗಳನ್ನು ಮಿಶ್ರಣ ಮಾಡಬೇಕು.

ಶುಂಠಿ: ನಿಮಗೆ ಸ್ನಾಯುಗಳಲ್ಲಿ ನೋವು ಇದ್ದರೆ, ನೀರನ್ನು ಬಿಸಿ ಮಾಡಿ ಮತ್ತು ಒಂದು ಚಮಚ ತಾಜಾ ಶುಂಠಿಯನ್ನು ಕತ್ತರಿಸಿ ಅದಕ್ಕೆ ಸೇರಿಸಿ. ಸ್ವಲ್ಪ ಸಮಯದವರೆಗೆ ಇದನ್ನು ಹಾಗೆಯೇ ಬಿಡಿ. ನಂತರ ಈ ನೀರಿನಿಂದ ಸ್ನಾನ ಮಾಡಿ. ಇದು ಸ್ನಾಯು ನೋವಿನಿಂದ ಉತ್ತಮ ಪರಿಹಾರವನ್ನು ನೀಡುತ್ತದೆ.

ಲ್ಯಾವೆಂಡರ್ ಆಯಿಲ್: ಒತ್ತಡ ಹೆಚ್ಚಿದ್ದರೆ ನೀರಿಗೆ ಕೆಲವು ಹನಿ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ ಸ್ನಾನ ಮಾಡಬೇಕು. ಲ್ಯಾವೆಂಡರ್ ಎಣ್ಣೆಯ ಸುವಾಸನೆಯು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಇದು ಚರ್ಮವನ್ನು ನಿರ್ವಿಷಗೊಳಿಸಲು ಸಹ ಕೆಲಸ ಮಾಡುತ್ತದೆ.

ಆಲಿವ್ ಎಣ್ಣೆ: ನಿಮ್ಮ ಚರ್ಮವು ಶುಷ್ಕವಾಗಿದ್ದರೆ ಮತ್ತು ನಿರ್ಜೀವವಾಗಿ ಕಾಣುತ್ತಿದ್ದರೆ, ನೀವು ಸ್ನಾನದ ನೀರಿಗೆ ಅರ್ಧದಿಂದ ಒಂದು ಕಪ್ ಆಲಿವ್ ಎಣ್ಣೆಯನ್ನು ಬೆರೆಸಿ ಸ್ನಾನ ಮಾಡಬೇಕು. ಚಳಿಗಾಲದಲ್ಲಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಬಾತ್ ಟಬ್ ಬಳಸದೇ ಇದ್ದರೆ ಸಾಮಾನ್ಯ ಟಬ್ನಲ್ಲಿ ಎರಡರಿಂದ ಮೂರು ಚಮಚ ಆಲಿವ್ ಎಣ್ಣೆ ಹಾಕಿ ಸ್ನಾನ ಮಾಡಿ. ಇದು ನಿಮ್ಮ ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸುತ್ತದೆ ಮತ್ತು ತ್ವಚೆಗೆ ಹೊಳಪನ್ನು ತರುತ್ತದೆ.

ಓಟ್ಸ್ : ಚರ್ಮದಲ್ಲಿ ತುರಿಕೆ ಅನಿಸಿದರೆ ಓಟ್ಸ್ ಅನ್ನು ಬಟ್ಟೆಯಲ್ಲಿ ಹಾಕಿ ಕಟ್ಟಿ ನೀರಿನಲ್ಲಿ ಮುಳುಗಿಸಿ. ಸ್ವಲ್ಪ ಸಮಯದವರೆಗೆ ಅದನ್ನು ನೀರಿನಲ್ಲಿ ಬಿಡಿ. ನಂತರ ಈ ನೀರಿನಿಂದ ಸ್ನಾನ ಮಾಡಿ. ತುರಿಕೆ ಸಮಸ್ಯೆಯಿಂದ ನಿಮಗೆ ಸಾಕಷ್ಟು ಪರಿಹಾರ ದೊರೆಯುತ್ತದೆ, ಜೊತೆಗೆ ತ್ವಚೆಯ ಶುಷ್ಕತೆಯೂ ದೂರವಾಗುತ್ತದೆ.




