ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಅವರ 4 ವರ್ಷಗಳ ಅವಧಿಯು ನವೆಂಬರ್ 2021 ರಲ್ಲಿ ಕೊನೆಗೊಂಡಿತು. ಈ ಸಮಯದಲ್ಲಿ, ಟೀಮ್ ಇಂಡಿಯಾ ದೇಶ ಮತ್ತು ವಿದೇಶಗಳಲ್ಲಿ ಟೆಸ್ಟ್‌ನಿಂದ ODI ವರೆಗೆ ಸಾಕಷ್ಟು ಯಶಸ್ಸನ್ನು ಗಳಿಸಿತು. ಆದರೆ, ಶಾಸ್ತ್ರಿ ಅವರ ಅವಧಿಯಲ್ಲಿ ಇಂತಹ ಕೆಲವು ನಿರ್ಧಾರಗಳು ನಡೆದಿದ್ದು, ಈ ಬಗ್ಗೆ ಸಾಕಷ್ಟು ವಿವಾದಗಳು ಎದ್ದಿದ್ದವು. ಅದರಲ್ಲೂ ತಂಡದ ಆಯ್ಕೆಗೆ ಸಂಬಂಧಿಸಿದಂತೆ. ಇಂತಹ ಕೆಲವು ವಿವಾದಾತ್ಮಕ ನಿರ್ಧಾರಗಳ ಬಗ್ಗೆ, ಭಾರತದ ಮಾಜಿ ಕೋಚ್ ಆಂಗ್ಲ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಮ್ಮ ವಿವರಣೆಯನ್ನು ನೀಡಿದ್ದಾರೆ.