ಕೊಹ್ಲಿ ವಿಚಾರದಲ್ಲಿ ಬಿಸಿಸಿಐ ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಅನಿಸುತ್ತದೆಯೇ?, ನನಗಂತು ಇಲ್ಲ. ಕೊಹ್ಲಿಗೆ ಬಿಸಿಸಿಐ ಗೌರವ ಕೊಟ್ಟಿಲ್ಲ. ನಾಯಕನಾಗಿ ಅವರು 65 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಭಾರತ ಪರ ಈ ಸಾಧನೆ ಮಾಡಿದ 4ನೇ ನಾಯಕನಾಗಿದ್ದಾರೆ. ನಾಯಕನಾಗಿ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ವಿರಾಟ್. ನಾಯಕನಾಗಿ ಅವರ ದಾಖಲೆ ಕೆಟ್ಟದಾಗಿಲ್ಲ ಎಂದು ಯಾರೂ ಬಿಸಿಸಿಐಗೆ ಹೇಳಿಲ್ಲವೆ ಎಂದು ಕನೇರಿಯಾ ಬೇಸರ ಹೊರಹಾಕಿದ್ದಾರೆ.