AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nathan Lyon: ಬರೋಬ್ಬರಿ 208 ಎಸೆತಗಳ ಬಳಿಕ ಕೊನೆಗೂ ದಾಖಲೆ ಬರೆದ ನಾಥನ್ ಲಿಯಾನ್

Highest Test Wickets: ಟೆಸ್ಟ್​ ಕ್ರಿಕೆಟ್​ನಲ್ಲಿ ಅತೀ ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಶ್ರೀಲಂಕಾ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನಲ್ಲಿದ್ದು, ಒಟ್ಟು 800 ವಿಕೆಟ್ ಉರುಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

TV9 Web
| Edited By: |

Updated on: Dec 11, 2021 | 3:22 PM

Share
399ನೇ ಟೆಸ್ಟ್​ ವಿಕೆಟ್ ಪಡೆದ ಬಳಿಕ ಆಸ್ಟ್ರೇಲಿಯನ್ ಸ್ಪಿನ್ನರ್ ನಾಥನ್ ಲಿಯಾನ್ ಒಂದು ವಿಕೆಟ್​ಗಾಗಿ ಹಲವು ತಿಂಗಳುಗಳೇ ಕಾಯಬೇಕಾಯಿತು. ಅದರಲ್ಲೂ ಬರೋಬ್ಬರಿ 208 ಎಸೆತಗಳ ಬಳಿಕ ಕೊನೆಗೂ ಒಂದು ವಿಕೆಟ್ ಉರುಳಿಸಿ 400 ವಿಕೆಟ್​ಗಳ ಸಾಧನೆ ಮಾಡಿದರು.

1 / 6
 ಇಂಗ್ಲೆಂಡ್ ವಿರುದ್ದದ ನಡೆ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಡೇವಿಡ್ ಮಲಾನ್ ವಿಕೆಟ್ ಪಡೆಯುವ ಮೂಲಕ ನಾಥನ್ ಲಿಯಾನ್ ಟೆಸ್ಟ್​ ಕ್ರಿಕೆಟ್​ನಲ್ಲಿ 400 ವಿಕೆಟ್​ಗಳನ್ನು ಪೂರೈಸಿದರು. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 17ನೇ ಬೌಲರ್ ಎನಿಸಿಕೊಂಡರು.

2 / 6
ಅದರಲ್ಲೂ 400 ವಿಕೆಟ್​ ಪಡೆದ ಆಸ್ಟ್ರೇಲಿಯಾದ 3ನೇ ಬೌಲರ್ ಎಂಬ ದಾಖಲೆ ಬರೆದರು. ಜೊತೆಗೆ ಈ ಸಾಧನೆ ಮಾಡಿದ ನಾನ್-ಏಷ್ಯಾದ 2ನೇ ಸ್ಪಿನ್ನರ್ ಎನಿಸಿಕೊಂಡರು. ಇದಕ್ಕೂ ಮುನ್ನ ಶೇನ್ ವಾರ್ನ್​ 400 ಕ್ಕೂ ಅಧಿಕ ವಿಕೆಟ್​ ಪಡೆದ ಏಷ್ಯಾದಲ್ಲದ ಮೊದಲ ಸ್ಪಿನ್ನರ್​ ಆಗಿ ದಾಖಲೆ ಬರೆದಿದ್ದರು.

3 / 6
ಇನ್ನು ಆಸ್ಟ್ರೇಲಿಯಾ ಪರ ಸ್ಪಿನ್ನರ್​ ಶೇನ್ ವಾರ್ನ್ ಹಾಗೂ ವೇಗಿ ಗ್ಲೆನ್ ಮೆಕ್​ಗ್ರಾಥ್ 400 ವಿಕೆಟ್ ಪಡೆದ ಸಾಧನೆ ಮಾಡಿದ ಮೊದಲ ಎರಡು ಬೌಲರುಗಳಾಗಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ಪಟ್ಟಿಗೆ ನಾಥನ್ ಲಿಯಾನ್ ಕೂಡ ಸೇರ್ಪಡೆಯಾಗಿದ್ದಾರೆ.

4 / 6
101 ಟೆಸ್ಟ್​ ಪಂದ್ಯಗಳನ್ನಾಡಿರುವ ನಾಥನ್ ಲಿಯಾನ್ ಒಟ್ಟು 25948 ಎಸೆತಗಳನ್ನು ಎಸೆದಿದ್ದಾರೆ. ಇದರಲ್ಲಿ ಒಟ್ಟು 12928 ರನ್ ನೀಡಿ	403 ವಿಕೆಟ್ ಪಡೆದಿದ್ದಾರೆ. ಇನ್ನು ಈ ಸಾಧನೆಯಲ್ಲಿ 18 ಬಾರಿ 5 ವಿಕೆಟ್​ ಗುಚ್ಛ ಪಡೆದಿದ್ದರೆ, 3 ಬಾರಿ 10 ಕ್ಕೂ (ಎರಡೂ ಇನಿಂಗ್ಸ್​ ಸೇರಿ) ಅಧಿಕ ವಿಕೆಟ್ ಉರುಳಿಸಿದ್ದಾರೆ.

5 / 6
ಇನ್ನು ಟೆಸ್ಟ್​ ಕ್ರಿಕೆಟ್​ನಲ್ಲಿ ಅತೀ ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಶ್ರೀಲಂಕಾ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನಲ್ಲಿದ್ದು, ಒಟ್ಟು 800 ವಿಕೆಟ್ ಉರುಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಹಾಗೆಯೇ ದ್ವಿತೀಯ ಸ್ಥಾನದಲ್ಲಿ ಶೇನ್ ವಾರ್ನ್ (708), ತೃತೀಯ ಸ್ಥಾನದಲ್ಲಿ ಜೇಮ್ಸ್ ಅಂಡರ್ಸನ್ (632), ನಾಲ್ಕನೇ ಸ್ಥಾನದಲ್ಲಿ ಅನಿಲ್ ಕುಂಬ್ಳೆ (619) ಹಾಗೂ ಐದನೇ ಸ್ಥಾನದಲ್ಲಿ ಗ್ಲೆನ್ ಮೆಕ್​​ಗ್ರಾಥ್ (563) ಇದ್ದಾರೆ. ಇದೀಗ ಈ ಪಟ್ಟಿಯಲ್ಲಿ 17ನೇ ಸ್ಥಾನಕ್ಕೇರಿದ್ದಾರೆ ನಾಥನ್ ಲಿಯಾನ್.

6 / 6