ಮುರುಘಾಶ್ರೀ ಕೈಗೆ ಮರಳಿದ ಮುರುಘಾಮಠದ ಅಧಿಕಾರ

ಡಾ.ಶಿವಮೂರ್ತಿ ಮುರುಘಾ ಶರಣರ ಕೈಗೆ ಮುರುಘಾಮಠದ ಅಧಿಕಾರ ದೊರೆತಿದೆ. ಇಷ್ಟು ದಿನ ಚಿತ್ರದುರ್ಗ ಪಿಡಿಜೆ, ಮಠದ ಆಡಳಿತಾಧಿಕಾರಿ ಆಗಿದ್ದರು. ನವೆಂಬರ್ 16ರಂದು ಜಾಮೀನಿನ ಮೇಲೆ ಮುರುಘಾಶ್ರೀ ಬಿಡುಗಡೆಯಾದ ಹಿನ್ನಲೆ ಮಠದ ಆಧಿಕಾರ ಹಿಂದಿರುಗಿಸುವಂತೆ ಮುರುಘಾಶ್ರೀ ಕೋರ್ಟ್ ಮೊರೆ ಹೋಗಿದ್ದರು.

ಮುರುಘಾಶ್ರೀ ಕೈಗೆ ಮರಳಿದ ಮುರುಘಾಮಠದ ಅಧಿಕಾರ
ಮುರುಘಾ ಶ್ರೀ
Edited By: ಕಿರಣ್ ಹನುಮಂತ್​ ಮಾದಾರ್

Updated on: Dec 08, 2023 | 5:27 PM

ಚಿತ್ರದುರ್ಗ, ಡಿ.07: ಡಾ.ಶಿವಮೂರ್ತಿ ಮುರುಘಾ ಶರಣರ ಕೈಗೆ ಮುರುಘಾಮಠದ ಅಧಿಕಾರ ದೊರೆತಿದೆ. 2022ರ ಸೆ.1ರಂದು ಪೋಕ್ಸೋ ಕೇಸ್​ನಲ್ಲಿ ಮುರುಘಾ ಶ್ರೀ(Muruga shree) ಬಂಧನವಾಗಿತ್ತು. ಈ ಹಿನ್ನಲೆ ಮುರುಘಾ ಮಠಕ್ಕೆ ಆಡಳಿತಾಧಿಕಾರಿಯನ್ನ ರಾಜ್ಯ ಸರ್ಕಾರವೇ ನೇಮಿಸಿತ್ತು. ಬಳಿಕ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಹೈಕೋರ್ಟ್ ಮೊರೆ ಹಿನ್ನೆಲೆ ಹೈಕೋರ್ಟ್ ಆಡಳಿತಾಧಿಕಾರಿ ನೇಮಕಾತಿ ರದ್ದು ಪಡಿಸಿತ್ತು. ಮುರುಘಾಶ್ರೀ ಜೈಲಿನಲ್ಲಿದ್ದ ಕಾರಣ ಪಿಡಿಜೆಗೆ ತಾತ್ಕಾಲಿಕ ಅಧಿಕಾರ ನೀಡಿತ್ತು.

ಲಕೋಟೆ ಮೂಲಕ ಮುರುಘಾಶ್ರೀಗೆ ಅಧಿಕಾರ ಹಸ್ತಾಂತರ ಪತ್ರ ರವಾನೆ

ಅದರಂತೆ ಚಿತ್ರದುರ್ಗ ಪಿಡಿಜೆ, ಮಠದ ಆಡಳಿತಾಧಿಕಾರಿ ಆಗಿದ್ದರು. ನವೆಂಬರ್ 16ರಂದು ಜಾಮೀನಿನ ಮೇಲೆ ಮುರುಘಾಶ್ರೀ ಬಿಡುಗಡೆಯಾದ ಹಿನ್ನಲೆ ಮಠದ ಆಧಿಕಾರ ಹಿಂದಿರುಗಿಸುವಂತೆ ಮುರುಘಾಶ್ರೀ ಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಚಿತ್ರದುರ್ಗ ಪಿಡಿಜೆಯಿಂದ ಮುರುಘಾಶ್ರೀಗೆ ಅಧಿಕಾರ ಹಸ್ತಾಂತರಿಸಿದ ಬೆನ್ನಲ್ಲೇ ಲಕೋಟೆ ಮೂಲಕ ಮುರುಘಾಶ್ರೀಗೆ ಅಧಿಕಾರ ಹಸ್ತಾಂತರ ಪತ್ರ ರವಾನಿಸಲಾಗಿದೆ.

ಇದನ್ನೂ ಓದಿ:ಚಿತ್ರದುರ್ಗ: ಮುರುಘಾ ಶ್ರೀ ವಿರುದ್ಧ ದಾಖಲಾದ ಒಂದನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಜಾ

ಹೊರಗಿದ್ದುಕೊಂಡೇ ಮಠದ ಆಡಳಿತ

ಚಿತ್ರದುರ್ಗ ಜಿಲ್ಲೆ ಪ್ರವೇಶಿಸದಂತೆ ಮುರುಘಾಶ್ರೀಗೆ ಹೈಕೋರ್ಟ್ ಷರತ್ತು ನೀಡಿದ ಹಿನ್ನಲೆ ಜಿಲ್ಲೆಯಿಂದ ಹೊರಗಿದ್ದುಕೊಂಡೇ ಮುರುಘಾ ಶ್ರೀಗಳು ಮಠದ ಆಡಳಿತವನ್ನು ನಡೆಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:40 pm, Thu, 7 December 23

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us