ಕೂಸಿಗೆ ವರ್ಷ ತುಂಬುವ ಮುನ್ನವೇ ಅಪ್ಪನ ಮೈಮೇಲೆ ವರದಕ್ಷಿಣೆ ಭೂತ ಹೊಕ್ಕಿತ್ತು, ಲೆಕ್ಕ ಚುಕ್ತಾಗಾಗಿ ಪತ್ನಿಯನ್ನೇ ಹತ್ಯೆಗೈದನಾ ಪತಿರಾಯ?

ಮುದ್ದಿನ ಕೂಸಿಗೆ ವರ್ಷ ತುಂಬುವ ಮುನ್ನವೇ ಚಂದ್ರಶೇಖರನಿಗೆ ವರದಕ್ಷಿಣೆ ಎಂಬ ಭೂತ ಮೈಹೊಕ್ಕಿತ್ತು. ಪತ್ನಿ ಮತ್ತು ಮಾವನಿಗೆ ವರದಕ್ಷಿಣೆ ಹಣ ನೀಡುವಂತೆ ಪೀಡಿಸತೊಡಗಿದ್ದನು. ಪತ್ನಿ ಬಾಣಂತಿ ಎಂಬುವುದನ್ನೂ ಮರೆತ ಭೂಪ ಗಲಾಟೆ ಶುರು ಮಾಡಿದ್ದನು.

ಕೂಸಿಗೆ ವರ್ಷ ತುಂಬುವ ಮುನ್ನವೇ ಅಪ್ಪನ ಮೈಮೇಲೆ ವರದಕ್ಷಿಣೆ ಭೂತ ಹೊಕ್ಕಿತ್ತು, ಲೆಕ್ಕ ಚುಕ್ತಾಗಾಗಿ ಪತ್ನಿಯನ್ನೇ ಹತ್ಯೆಗೈದನಾ ಪತಿರಾಯ?
ಲೆಕ್ಕ ಚುಕ್ತಾಗಾಗಿ ಪತ್ನಿಯನ್ನೇ ಹತ್ಯೆಗೈದನಾ ಪತಿರಾಯ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 13, 2023 | 6:13 PM

ಮೂರು ವರ್ಷಗಳ ಹಿಂದಷ್ಟೇ ಆ ಜೋಡಿಯ ಮದುವೆ ಆಗಿತ್ತು. ಸುಂದರ ಸಂಸಾರಕ್ಕೆ ನವ ಮಾಸದ ಮುದ್ದಾದ ಮಗುವು ಸಾಕ್ಷಿ ಆಗಿತ್ತು. ಆದ್ರೆ, ವರದಕ್ಷಿಣೆ (dowry harassment) ಎಂಬ ಭೂತ ಮೈತುಂಬಿಕೊಂಡಿದ್ದ ಪತಿರಾಯ (husband), ಪ್ರೀತಿಯ ಪತ್ನಿಯ (woman) ಜೀವವನ್ನೇ ಬಲಿ ಪಡೆದ ದಾರುಣ ಘಟನೆ ಕೋಟೆನಾಡಿನಲ್ಲಿ ನಡೆದಿದೆ. ಪೊಲೀಸ್ರು ಪ್ರಕರಣದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮೃತಳ ಸಂಬಂಧಿಕರು ರೊಚ್ಚಿಗೆದ್ದಿದ್ದಾರೆ. ಅಸಲಿಗೆ ಅಲ್ಲಿ ನಡೆದದ್ದೇನು? ಇದು ಕೋಟೆನಾಡು ಚಿತ್ರದುರ್ಗ (chitradurga) ತಾಲೂಕಿನ ಬೊಗಳೇರಹಟ್ಟಿ ಗ್ರಾಮದಲ್ಲಿ ನಡೆದಿರುವ ಘಟನೆ. ಕೃಷಿಯೇ ಈ ಭಾಗದ ಜನರ ಮುಖ್ಯ ಕಸುಬು. ಕೂಲಿ ನಾಲಿ ಮಾಡಿಕೊಂಡು ಸುಂದರ ಬದುಕು ಕಟ್ಟಿಕೊಂಡಿರುವ ಜನರು ತಾವಾಯ್ತು ತಮ್ಮ ಜೀವನವಾಯ್ತು ಎಂದು ಬದುಕು ಸಾಗಿಸುತ್ತಾರೆ. ಹೀಗಾಗಿ, ಈ ಗ್ರಾಮದ ಖಾಸಗಿ ವಾಹನ ಚಾಲಕ ಚಂದ್ರಶೇಖರ್ ಗೆ ಗೂಳಯ್ಯನಹಟ್ಟಿಯ ಗೋವಿಂದಪ್ಪ 3 ವರ್ಷದ ಹಿಂದೆ ತನ್ನ ಮಗಳು ಗೌತಮಿಯನ್ನು ಕೊಟ್ಟು ಮದುವೆ ಮಾಡಿದ್ದರು. ತಾಯಿ ಇಲ್ಲದ ಮಗಳೆಂದು ಪ್ರೀತಿಯಿಂದ ಸಾಕಿದ್ದೇವೆ. ಅವಳ ಮನಸ್ಸಿಗೆ ನೋವಾಗದಂತೆ ಹೂವಿನಂತೆ ಸಾಕಪ್ಪ ಎಂದು ಅಳಿಯನ ಬಳಿ ಕೇಳಿಕೊಂಡಿದ್ದರು. ಮದುವೆ ವೇಳೆ ಕೇಳಿದ್ದೆಲ್ಲವನ್ನೂ ನೀಡಿ ಸಾಂಪ್ರದಾಯಿಕ ಮದುವೆ ಮಾಡಿದ್ದರು.

ಅಂತೆಯೇ ಸುಮಾರು ಎರಡು ವರ್ಷ ಕಾಲ ಚಂದ್ರಶೇಖರ್ ಖಾಸಗಿ ವಾಹನಗಳನ್ನು ಚಾಲನೆ ಮಾಡಿಕೊಂಡು ಚಂದದ ಬದುಕು ನಡೆಸಿದ್ದನು. ಪತ್ನಿ ಗೌತಮಿಯನ್ನು ಸಹ ಚೆನ್ನಾಗಿಯೇ ನಡೆಸಿಕೊಂಡಿದ್ದನು. ಪ್ರೀತಿಯಿಂದ ಕಾವ್ಯಾ ಎಂದು ಮಡದಿಯನ್ನು ಕರೆಯುತ್ತಿದ್ದನು. ಅಂತೆಯೇ ಗೌತಮಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ಜನಿಸಿದ ಬಳಿಕ ಬದುಕು ಮತ್ತಷ್ಟು ಸುಂದರಗೊಳ್ಳುತ್ತದೆ. ಪ್ರೀತಿಯ ಸಾಗರವೇ ಹರಿಯುತ್ತದೆ ಎಂದೆಲ್ಲಾ ಗೌತಮಿ ಕನಸು ಕಟ್ಟಿಕೊಂಡಿದ್ದಳು.

ಆದ್ರೆ, ಮುದ್ದಿನ ಕೂಸಿಗೆ ವರ್ಷ ತುಂಬುವ ಮುನ್ನವೇ ಚಂದ್ರಶೇಖರನಿಗೆ ವರದಕ್ಷಿಣೆ ಎಂಬ ಭೂತ ಮೈಹೊಕ್ಕಿತ್ತು. ಪತ್ನಿ ಮತ್ತು ಮಾವನಿಗೆ ವರದಕ್ಷಿಣೆ ಹಣ ನೀಡುವಂತೆ ಪೀಡಿಸತೊಡಗಿದ್ದನು. ಪತ್ನಿ ಬಾಣಂತಿ ಎಂಬುವುದನ್ನೂ ಮರೆತ ಭೂಪ ಗಲಾಟೆ ಶುರು ಮಾಡಿದ್ದನು. ಮಾವ ಗೋವಿಂದಪ್ಪನ ಬಳಿಯೂ ಹಣಕ್ಕೆ ಬೇಡಿಕೆ ಇಟ್ಟಿದ್ದನು. ಮೊದಲೇ ನಾನಾ ಖಾಯಿಲೆಯಿಂದ ಬಳಲುತ್ತಿರುವ ವೃದ್ಧ ಗೋವಿಂದಪ್ಪ ಅಳಿಯನನ್ನು ಸಮಾಧಾನ ಮಾಡಲಾಗದೆ ಹೈರಾಣಾಗಿದ್ದನು.

ತವರು ಮನೆಗೆ ಕರೆದುಕೊಂಡು ಹೋಗಿ ಕೆಲ ದಿನ ಮಗಳನ್ನು ಮನೆಯಲ್ಲಿರಿಸಿಕೊಂಡಿದ್ದನು. ತಂದೆ ಮತ್ತು ಸಂಬಂಧಿಕರು ಅಳಿಯ-ಮಗಳಿಗೆ ಬುದ್ಧಿ ಹೇಳಿದರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ಗೋವಿಂದಪ್ಪ ನಾನು ಚೀಟಿ ಹಾಕಿದ್ದೇನೆ. ಚೀಟಿ ನನಗೇ ಆದರೆ, ಎರಡು ಲಕ್ಷ ರೂಪಾಯಿ ಬರುತ್ತದೆ. ಆ ಹಣ ನಿನಗೆ ಕೊಡುತ್ತೇನೆ ಎಂದೆಲ್ಲಾ ಹೇಳಿ ಅಳಿಯನಿಗೆ ಸಮಾಧಾನ ಹೇಳಿದರು. ಆದ್ರೆ ಚೀಟಿ ಹಣ ಬಾರದಾದಾಗ ಅಳಿಯ ಕೆರಳಿ ಬಿಟ್ಟಿದ್ದನು.

ಪತ್ನಿಯನ್ನು ಮತ್ತೆ ತನ್ನ ಮನೆಗೆ ಕರೆದುಕೊಂಡು ಬಂದು ಮತ್ತೆ ಗಲಾಟೆ ಶುರು ಮಾಡಿದ್ದನು. ಚೀಟಿ ಹಣ ಬರದಿದ್ದರೇನಂತೆ ನಿಮ್ಮ ಅಪ್ಪನಿಗೆ ಮನೆ, ಆಸ್ತಿ ಇದೆಯಲ್ಲ. ಅದೆಲ್ಲ ಮಾರಾಟ ಮಾಡಿ ಕೊಡಲು ಹೇಳು ಎಂದು ಪತ್ನಿ ಮೇಲೆರಗಿದ್ದನು. ಯಾವಾಗ ಪತ್ನಿ ಇದೆಲ್ಲಾ ಆಗದ ಮಾತು ಎಂದಳೋ ಆಗ ಪತಿ ತನ್ನ ಪತ್ನಿಗೆ ಇಲ್ಲದ ಕಿರುಕುಳ ನೀಡಿದ್ದಾನೆ. ತಾನೇ ಕತ್ತು ಮತ್ತು ಕೈಗೆಲ್ಲಾ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ ಎಂಬುದು ಮೃತಳ ತಂದೆ ಮತ್ತು ಸಂಬಂಧಿಕರ ಆರೋಪ.

ಇನ್ನು ಮಾರ್ಚ್ 11ರ ಬೆಳಗ್ಗೆ 10 ಶಗಂಟೆ ಸುಮಾರಿಗೆ ಮನೆಯಲ್ಲಿ ಗಲಾಟೆ ನಡೆದಿದೆ. ಬಳಿಕ ಗೌತಮಿಯ ಹತ್ಯೆ ಮಾಡಿ ನೇಣು ಬಿಗಿದ ಪತಿ ಚಂದ್ರಶೇಖರ್ ತುರುವನೂರು ಠಾಣೆಗೆ ತೆರಳಿದ್ದಾನೆ. ಪತ್ನಿ ನೇಣಿಗೆ ಶರಣಾಗಿದ್ದಾಳೆಂದು ದೂರು ನೀಡಲು ಮುಂದಾಗಿದ್ದಾನೆ. ಆದ್ರೆ, ಪೊಲೀಸ್ರು ಪ್ರಕರಣ ದಾಖಲಿಸಿಕೊಂಡಿಲ್ಲ. ಚಂದ್ರಶೇಖರ್ ನನ್ನು ವಶಕ್ಕೆ ಪಡೆಯುವ ಕೆಲಸವೂ ಮಾಡಿಲ್ಲ. ಮೃತಳ ಶವವನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಶಿಫ್ಟ್ ಮಾಡಿ ಹೋಗಿದ್ದಾರೆ.

ಅಷ್ಟೊತ್ತಿಗೆ ಮೃತ ಗೌತಮಿಯ ಸಂಬಂಧಕರಿಗೆ ವಿಷಯ ತಿಳಿದಿದೆ. ಬಸವೇಶ್ವರ ಆಸ್ಪತ್ರೆ ಬಳಿ ಸಂಭಂಧಿಕರು ಜಮಾಯಿಸಿದ್ದು ಕೂಡಲೇ ಚಂದ್ರಶೇಖರನನ್ನು ಬಂಧಿಸಬೇಕು. ಇದು ಆತ್ಮಹತ್ಯೆ ಅಲ್ಲ, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಮಾಡಲಾಗಿದೆ. ಚಂದ್ರಶೇಖರ ಮತ್ತು ಕುಟುಂಬಸ್ಥರೆಲ್ಲಾ ಸೇರಿ ಹತ್ಯೆ ಮಾಡಿದ್ದಾರೆ. ಆತ್ಮಹತ್ಯೆ ಎಂದು ಬಿಂಬಿಸಿ ಕೇಸ್ ಮುಚ್ಚಿ ಹಾಕಲು ಹೊರಟಿದ್ದಾ ಎಂದು ಆರೋಪಿಸಿದ್ದಾರೆ.

ಆದ್ರೆ, ಇಷ್ಟೆಲ್ಲಾ ಆಗಿದ್ದರೂ ಸಹ ತುರುವನೂರು ಠಾಣೆಯ ಪಿಐ ವೆಂಕಟೇಶ್ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಯಾವೊಬ್ಬ ಸಿಬ್ಬಂದಿಗೂ ಬಸವೇಶ್ವರ ಆಸ್ಪತ್ರೆಯ ಶವಾಗಾರ ಬಳಿಗೆ ಕಳುಹಿಸಿಲ್ಲ. ಮೃತ ಗೌತಮಿಯ ಪೋಷಕರಿಂದ ದೂರು ಕೇಳುವ ಪ್ರಯತ್ನವನ್ನೂ ಮಾಡಿಲ್ಲ. ಹೀಗಾಗಿ, ಪೊಲೀಸ್ರು ಆರೋಪಿಯ ರಕ್ಷಣೆಗೆ ನಿಂತಿದ್ದಾರೆಂಬ ಅನುಮಾನ ಮೃತಳ ಕುಟುಂಬಸ್ಥರಲ್ಲಿ ಮೂಡಿದೆ. ಹೀಗಾಗಿ, ಮೃತಳ ಸಂಬಂಧಿಕರು ಚಿತ್ರದುರ್ಗದ ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿದರು. ಸುಮಾರು 20 ನಿಮಿಷ ಕಾಲ ಎಸ್ಪಿ ಕಚೇರಿ ಎದುರು ಧರಣಿ ನಡೆಸಿದರು. ತುರುವನೂರು ಪಿಐ ವೆಂಕಟೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಡಿವೈಎಸ್ಪಿ ಅನಿಲ್ ಕುಮಾರ್ ಸ್ಥಳಕ್ಕೆ ಆಗಮಿಸಿ ದೂರು ಆಲಿಸಿದರು. ನೀವು ಯಾವುದೇ ದೂರು ನೀಡಿದರೂ ನಾವು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತೇವೆಂದು ಭರವಸೆ ನೀಡಿದರು. ಹೀಗಾಗಿ, ಮೃತರ ಕುಟುಂಬಸ್ಥರು ಧರಣಿಯನ್ನು ವಾಪಸ್ ಪಡೆದರು. ರಾತ್ರಿ 10 ಗಂಟೆ ಬಳಿಕ ಮೃತಳ ಕುಟುಂಬಸ್ಥರಿಂದ ತುರುವನೂರು ಠಾಣೆಯ ಪೊಲೀಸ್ರು ದೂರು ದಾಖಲಿಸಿಕೊಂಡು, ಆರೋಪಿ ಚಂದ್ರಶೇಖರನನ್ನು ಬಂಧಿಸಿದ್ದಾರೆ. ಅಂತೆಯೇ ಚಂದ್ರಶೇಖರ್ ಕುಟುಂಬಸ್ಥರ ವಿರುದ್ಧದ ಆರೋಪವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಕೆ.ಪರಶುರಾಮ್ ಹೇಳಿದ್ದಾರೆ.

ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ