ವಿಶೇಷ ಚೇತನನಾದರೂ ಕೃಷಿಯಲ್ಲಿ ಸಾಧನೆ, ಕುದುರೆ ಹತ್ತಿ ಜಮೀನಿಗೆ ಭೇಟಿ ಕೊಡುವ ಚಿತ್ರದುರ್ಗದ ಮಾದರಿ ಕೃಷಿಕ

ಬೋರಯ್ಯ ತಮ್ಮಲ್ಲಿರುವ ಜಮೀನಿನಲ್ಲೇ ಮೆಕ್ಕೆಜೋಳ, ಸಜ್ಜೆ, ಹುರುಳಿ ವಿವಿಧ ಮಿಶ್ರ ಬೆಳೆ ಬೆಳೆದು ಗ್ರಾಮಸ್ಥರಿಂದ ಭೇಷ್ ಅನಿಸಿಕೊಂಡಿದ್ದಾರೆ. ಅಲ್ಲದೇ ಈ ಮಿಶ್ರ ಕೃಷಿಯಿಂದ ಬೋರಯ್ಯಗೆ ಸರಿ ಸುಮಾರು ವರ್ಷಕ್ಕೆ 5 ಲಕ್ಷ ಆದಾಯ ಬರ್ತಿದ್ಯಂತೆ.

ವಿಶೇಷ ಚೇತನನಾದರೂ ಕೃಷಿಯಲ್ಲಿ ಸಾಧನೆ, ಕುದುರೆ ಹತ್ತಿ ಜಮೀನಿಗೆ ಭೇಟಿ ಕೊಡುವ ಚಿತ್ರದುರ್ಗದ ಮಾದರಿ ಕೃಷಿಕ
ಪಿ. ಬೋರಯ್ಯ
Follow us
TV9 Web
| Updated By: ಆಯೇಷಾ ಬಾನು

Updated on:Nov 08, 2021 | 10:24 AM

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಅಂದಾಕ್ಷಣ ನೆನಪಿಗೆ ಬರೋದು ಬರದ ನಾಡು ಅಂತ. ಅಕಾಲಿಕ ಮಳೆಯಿಂದಾಗಿ ಎಷ್ಟೋ ಮಂದಿ ಕೃಷಿ ಕಾಯಕದಿಂದಲೇ ದೂರು ಹೋಗ್ತಾರೆ. ಆದ್ರೆ ಇಲ್ಲೋರ್ವ ವಿಶೇಷ ಚೇತನ, ತನ್ನ ಅಂಗವೀಕಲತೆಯನ್ನ ಮೆಟ್ಟಿ ನಿಂತು, ಮಾದರಿ ಕೃಷಿಕನಾಗಿದ್ದಾನೆ. ಈ ಕುರಿತ ಇಂಟ್ರಸ್ಟಿಂಗ್ ವರದಿ ಇಲ್ಲಿದೆ ಓದಿ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ನಿವಾಸಿಯಾಗಿರುವ ಪಿ. ಬೋರಯ್ಯ ವಿಶೇಷ ಚೇತನನಾದ್ರೂ ಕೃಷಿಯಲ್ಲಿ ಮಹತ್ತರ ಸಾಧನೆ ಮಾಡಿದ್ದಾನೆ. ಪಿಯುಸಿ ಓದಿರುವ ಬೋರಯ್ಯ ತಮ್ಮಲ್ಲಿರುವ ಜಮೀನಿನಲ್ಲೇ ಮೆಕ್ಕೆಜೋಳ, ಸಜ್ಜೆ, ಹುರುಳಿ ವಿವಿಧ ಮಿಶ್ರ ಬೆಳೆ ಬೆಳೆದು ಗ್ರಾಮಸ್ಥರಿಂದ ಭೇಷ್ ಅನಿಸಿಕೊಂಡಿದ್ದಾರೆ. ಅಲ್ಲದೇ ಈ ಮಿಶ್ರ ಕೃಷಿಯಿಂದ ಬೋರಯ್ಯಗೆ ಸರಿ ಸುಮಾರು ವರ್ಷಕ್ಕೆ 5 ಲಕ್ಷ ಆದಾಯ ಬರ್ತಿದ್ಯಂತೆ.

ctr farming

ವಿಶೇಷ ಚೇತನನಾದರೂ ಕೃಷಿಯಲ್ಲಿ ಸಾಧನೆ ಮಾಡಿರುವ ಬೋರಯ್ಯ

ಇನ್ನು ಬೋರಯ್ಯಗೆ ಸಾಕು ಪ್ರಾಣಿಗಳೆಂದರೇ ಪ್ರಾಣ. ಹೀಗಾಗಿ ತಮ್ಮ ಮನೆಯಲ್ಲಿ ದನ, ಕರು, ಮೇಕೆ, ಕುರಿ, ನಾಯಿ ಕೂಡ ಸಾಕಿದ್ದಾರಂತೆ. ಅಲ್ಲದೇ ಜಮೀನಿಗೆ ಓಡಾಡುವುದಕ್ಕಾಗಿ ಬೋರಯ್ಯ ಕುದುರೆ ಸಾಕಿದ್ದಾರಂತೆ. ಒಮ್ಮೊಮ್ಮೆ ಊರುಗೋಲಿನ ಸಹಾಯದಿಂದ ಹೊಲಕ್ಕೆ ತೆರಳಿ ಕೆಲಸ ಮಾಡ್ತಿದ್ದಾರೆ.

ಇನ್ನು ಬೋರಯ್ಯನ ಸಾಧನೆ ಕಂಡು ಈ ಭಾಗದ ಅನೇಕ ರೈತರು ಜಮೀನಿಗೆ ಭೇಟಿ ನೀಡಿ, ಮಿಶ್ರ ಕೃಷಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಯಾರ ಹಂಗಿಲ್ಲದೇ ಬೆಳೆಯಬೇಕು ಅಂತ ಪಣ ತೊಟ್ಟಿರುವ ಬೋರಯ್ಯ ರೈತಾಪಿ ವರ್ಗಕ್ಕೆ ಮಾದರಿ. ಈ ಮೂಲಕ ಅಂಗವೀಕಲತೆ ದೇಹಕ್ಕೆ ಹೊರತು. ಸಾಧನೆಗೆ ಅಲ್ಲ ಅನ್ನೋದನ್ನ ಸಾಬೀತು ಮಾಡಿದ್ದಾರೆ.

ವರದಿ: ಬಸವರಾಜ ಮುದನೂರ್, ಟಿವಿ9 ಚಿತ್ರದುರ್ಗ

ಇದನ್ನೂ ಓದಿ: ಕೃಷಿ ಸಮಸ್ಯೆಗಳ ಬಗ್ಗೆ ನಾನು ಏನಾದರೂ ಹೇಳಿದರೆ ಅದು ವಿವಾದವಾಗುತ್ತದೆ: ಸತ್ಯಪಾಲ್ ಮಲಿಕ್

Published On - 10:20 am, Mon, 8 November 21

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ