ಹಿರಿಯೂರಿನಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ; ಮೂವರು ಆಸ್ಪತ್ರೆಗೆ ದಾಖಲು, ಮೂವರ ವಿರುದ್ಧ ಪ್ರಕರಣ

ಹಿರಿಯೂರಿನಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ; ಮೂವರು ಆಸ್ಪತ್ರೆಗೆ ದಾಖಲು, ಮೂವರ ವಿರುದ್ಧ ಪ್ರಕರಣ
ಹಿರಿಯೂರಿನಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ; ಮೂವರು ಆಸ್ಪತ್ರೆಗೆ ದಾಖಲು, ಮೂವರ ವಿರುದ್ಧ ಪ್ರಕರಣ

ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಡಿ.ಸುಧಾಕರ್ ಹಾಗೂ ವಿಧಾನ ಪರಿಷತ್ ಪರಾಜಿತ ಅಭ್ಯರ್ಥಿ, ಕಾಂಗ್ರೆಸ್ ಮುಖಂಡ ಬಿ ಸೋಮಶೇಖರ್ ಬೆಂಬಲಿಗರ ನಡುವೆ ವಾಗ್ವಾದ ನಡೆದಿತ್ತು.

TV9kannada Web Team

| Edited By: Ayesha Banu

Apr 05, 2022 | 8:07 AM

ಚಿತ್ರದುರ್ಗ: ಹಿರಿಯೂರಿನಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ಆದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಡಿ.ಸುಧಾಕರ್ ಬೆಂಬಲಿಗರಾದ ಖಾದಿ ರಮೇಶ್, ಅಶೋಕ್, ಕಂದಿಕೇರಿ ಸುರೇಶ ಬಾಬು ವಿರುದ್ಧ ಹಿರಿಯೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್‌ನ ಡಿ.ಸುಧಾಕರ್ ಹಾಗೂ ಬಿ.ಸೋಮಶೇಖರ್ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿತ್ತು.

ಘಟನೆ ಹಿನ್ನೆಲೆ ಏಪ್ರಿಲ್ 4ರ ಸಂಜೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಉಳಿಯಾರ್ ರಸ್ತೆ ಬಳಿ ಗಲಾಟೆ ನಡೆದಿತ್ತು. ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಡಿ.ಸುಧಾಕರ್ ಹಾಗೂ ವಿಧಾನ ಪರಿಷತ್ ಪರಾಜಿತ ಅಭ್ಯರ್ಥಿ, ಕಾಂಗ್ರೆಸ್ ಮುಖಂಡ ಬಿ ಸೋಮಶೇಖರ್ ಬೆಂಬಲಿಗರ ನಡುವೆ ವಾಗ್ವಾದ ನಡೆದಿತ್ತು. ಹಿರಿಯೂರಿನಲ್ಲಿ ಬಾಬು ಜಗಜೀವನರಾಮ್ ಜಯಂತಿ ಹಿನ್ನೆಲೆ ಉಳಿಯಾರ್ ರಸ್ತೆ ಬಳಿ ಕೆಪಿಸಿಸಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗಮನ ಹಿನ್ನಲೆ ಫ್ಲೆಕ್ಸ್ ಅಳವಡಿಸುವ ವೇಳೆ ಕೈ ಕಾರ್ಯಕರ್ತರ ನಡುವೆ ವಾಗ್ವಾದ ಶುರುವಾಗಿತ್ತು. ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಚಿವ ಡಿ.ಸುಧಾಕರ್, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಎದುರೇ ಮಾತಿನ ಚಕಮಕಿ ನಡೆದಿತ್ತು. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಸದ್ಯ ಈ ಗಲಾಟೆ ಸಂಬಂಧ ಮೂರು ಕಾಂಗ್ರೆಸ್ ಮುಖಂಡರ ವಿರುದ್ಧ ದೂರು ದಾಖಲಾಗಿದೆ.

ಇನ್ನು ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು ಬಿ.ಸೋಮಶೇಖರ್ ಬೆಂಬಲಿಗ ಮೂವರು ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸ್ಲಾಂ ಭಾಷಾ, ಅಬುಜರ್ ಗಫರ್, ಸೈಯದ್ ಅಕ್ರಮ್ ಭಾಷಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಂಗ್ರೆಸ್ ಮುಖಂಡರಾದ ಖಾದಿ ರಮೇಶ, ಅಶೋಕ, ಕಂದಿಕೇರಿ ಸುರೇಶ ಬಾಬು ವಿರುದ್ಧ ದೂರು ದಾಖಲಾಗಿದೆ. ಫ್ಲೆಕ್ಸ್ ಕಟ್ಟುವ ವೇಳೆ ಹಲ್ಲೆ, ಜೀವ ಬೆದರಿಕೆ ಆರೋಪ ಸಂಬಂಧ ಹಿರಿಯೂರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಧ್ವನಿವರ್ಧಕ, ಡಿಜೆಗೆ ಬ್ರೇಕ್; ಆದೇಶ ಹೊರಡಿಸಿದ ಪೊಲೀಸ್ ಆಯುಕ್ತ ದೀಪಕ್ ಪಾಂಡೆ

ರಿಯಲ್ ಎಸ್ಟೇಟ್ ವಲದ ಬಗ್ಗೆ ನಿಮಗೆಷ್ಟು ಗೊತ್ತು..! ಇಲ್ಲಿದೆ ನೋಡಿ ಮಾಹಿತಿ

Follow us on

Related Stories

Most Read Stories

Click on your DTH Provider to Add TV9 Kannada