ಕಲಬುರಗಿ: ಸನ್ನತಿ ಗ್ರಾಮದ ಸರ್ಕಾರಿ ಶಾಲೆಯ ಬಿಸಿ ಊಟದಲ್ಲಿ ಹುಳಗಳು ಪತ್ತೆ; ವಿದ್ಯಾರ್ಥಿಗಳಿಂದ ಆಕ್ರೋಶ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗಾಗಿ ತಯಾರಿಸಿದ ಬಿಸಿ ಊಟದಲ್ಲಿ ಅಪಾರ ಪ್ರಮಾಣದ ಹುಳುಗಳು ಪತ್ತೆಯಾಗಿವೆ.
ಕಲಬುರಗಿ: ಮಕ್ಕಳಿಗಾಗಿ ತಯಾರಿಸಿದ ಬಿಸಿ ಊಟದಲ್ಲಿ ಅಪಾರ ಪ್ರಮಾಣದ ಹುಳುಗಳು (Worms in meals) ಕಂಡು ಬಂದ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸೇವಿಸಲು ತೆಗೆದುಕೊಂಡ ಅನ್ನ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿ ಗ್ರಾಮದಲ್ಲಿ ನಿನ್ನೆ (ನ.21) ಮಧ್ಯಾಹ್ನ ನಡೆದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಹುಳುಗಳು ತುಂಬಿದ್ದ ಬಿಸಿ ಊಟ ಸೇವಿಸಿದ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಆತಂಕ ಶುರುವಾಗಿದೆ. ಮಧ್ಯಾಹ್ನದ ವೇಳೆ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದಾಗ ಕೆಲವರ ತಟ್ಟೆಯಲ್ಲಿ ಹುಳಗಳು ಪತ್ತೆಯಾಗಿವೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಅನ್ನ ಚೆಲ್ಲುವುದರ ಮೂಲಕ ಬಿಸಿ ಊಟ ತಯಾರಿಸುವ ಸಿಬ್ಬಂದಿಯ ನಿರ್ಲಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ದತ್ತು ಮಕ್ಕಳೂ ಅನುಕಂಪದ ನೌಕರಿ ಪಡೆಯಬಹುದು; ಹೈಕೋರ್ಟ್ ಮಹತ್ವದ ಆದೇಶ
ಬಿಸಿ ಊಟ ತಯಾರಿಕೆಗೂ ಮುನ್ನ ಅಕ್ಕಿ ಅನ್ನ ಮಾಡಲು ಯೋಗ್ಯವೇ ಎಂದು ಪರಿಶೀಲನೆ ಮಾಡಬೇಕು. ಅಲ್ಲದೆ, ಚೆನ್ನಾಗಿ ತೊಳೆದು ಅಕ್ಕಿಯನ್ನು ಶುಚಿಗೊಳಿ ನಂತರವೇ ಅಕ್ಕಿ ಬೇಯಲು ಇಡಬೇಕು. ಆದರೆ ಸಿಬ್ಬಂದಿಗಳು ಈ ಕೆಲಸ ಮಾಡದೆ ನೇರವಾಗಿ ಅಕ್ಕಿ ಬೇಯಿಸಿ ಅನ್ನ ಸಿದ್ಧಪಡಿಸಿದ್ದಾರೆ. ಬಹಳ ದಿನಗಳ ಹಿಂದೆ ಬಂದ ಅಕ್ಕಿಯನ್ನು ಮೂಲೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಅದೇ ಅಕ್ಕಿ ನೇರವಾಗಿ ಅಡುಗೆ ಮಾಡಲು ಬಳಸಲಾಗಿದೆ. ಹುಳಗಳೇ ತುಂಬಿದ್ದ ಹಳೆಯ ಅಕ್ಕಿಯನ್ನು ಬೇರ್ಪಡಿಸದೆ ನೇರವಾಗಿ ಅಡುಗೆ ಮಾಡಿರುವುದರಿಂದ ಅನ್ನದ ಜೊತೆಗೆ ಹುಳುಗಳು ಬೆಂದು ಹೋಗಿವೆ. ಅನ್ನದ ಜೊತೆ ಬೆಂದ ಹುಳುಗಳು ಈಗ ವಿದ್ಯಾರ್ಥಿಗಳ ಹೊಟ್ಟೆ ಸೇರಿದ್ದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬೀದರ್: 2 ವರ್ಷದ ಮಗುವಿಗೆ ಕಚ್ಚಿದ ಹುಚ್ಚು ನಾಯಿ: ಮಗುವಿನ ಮುಖಕ್ಕೆ 32 ಹೊಲಿಗೆ ಹಾಕಿದ ವೈದ್ಯರು
ಮತ್ತಷ್ಟು ರಾಜ್ಯ ಸುದ್ದಿಗಳನ್ಹು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:58 pm, Tue, 22 November 22