ಬೆಳಗಾವಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ; 4.9 ಕೆಜಿ ಚಿನ್ನ ನಾಪತ್ತೆ, ಐಜಿಪಿ ರಾಘವೇಂದ್ರರನ್ನು ವಿಚಾರಣೆ ನಡೆಸಿದ ಸಿಐಡಿ
ಕಳೆದ ಜನವರಿಯಲ್ಲಿ ಬೆಳಗಾವಿಯ ಯಮಕನಮರಡಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಪೊಲೀಸರು ವಶಕ್ಕೆ ಪಡೆದ ಕಾರಿನಲ್ಲಿದ್ದ 4.9 ಕೆಜಿ ಚಿನ್ನ ನಾಪತ್ತೆ ಆಗಿತ್ತು. ಈ ಬಗ್ಗೆ ಮಾಲೀಕ ದೂರು ನೀಡಿದ್ದ. ನಂತರ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ವಿಚಾರಣೆಗೆ ಹಾಜರಾಗಲು ಐಜಿಪಿ ರಾಘವೇಂದ್ರ ಸುಹಾಸ್ಗೆ ನೋಟಿಸ್ ನೀಡಲಾಗಿತ್ತು. ಸದ್ಯ ವಿಚಾರಣೆ ನಡೆಯುತ್ತಿದೆ.
ಬೆಂಗಳೂರು: ಬೆಳಗಾವಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಈ ಪ್ರಕರಣ ಸಂಬಂಧಿಸಿ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಐಜಿಪಿ ರಾಘವೇಂದ್ರ ಸುಹಾಸ್ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ಕಿರಣ್ ಜೊತೆ ಫೋನ್ ಸಂಪರ್ಕ ಆರೋಪ ಹಿನ್ನೆಲೆಯಲ್ಲಿ ರಾಘವೇಂದ್ರ ಸುಹಾಸ್ ವಿಚಾರಣೆ ಮಾಡಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ.
ಕಳೆದ ಜನವರಿಯಲ್ಲಿ ಬೆಳಗಾವಿಯ ಯಮಕನಮರಡಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಪೊಲೀಸರು ವಶಕ್ಕೆ ಪಡೆದ ಕಾರಿನಲ್ಲಿದ್ದ 4.9 ಕೆಜಿ ಚಿನ್ನ ನಾಪತ್ತೆ ಆಗಿತ್ತು. ಈ ಬಗ್ಗೆ ಮಾಲೀಕ ದೂರು ನೀಡಿದ್ದ. ನಂತರ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ವಿಚಾರಣೆಗೆ ಹಾಜರಾಗಲು ಐಜಿಪಿ ರಾಘವೇಂದ್ರ ಸುಹಾಸ್ಗೆ ನೋಟಿಸ್ ನೀಡಲಾಗಿತ್ತು. ಸದ್ಯ ವಿಚಾರಣೆ ನಡೆಯುತ್ತಿದೆ.
ಕೇಸ್ನಲ್ಲಿ ಇದುವರೆಗೆ 20ಕ್ಕೂ ಹೆಚ್ಚು ಜನರ ವಿಚಾರಣೆ ನಡೆದಿದೆ. ಯಮಕನಮರಡಿ ಪಿಎಸ್ಐ ಪಾಟೀಲ್, ಸರ್ಕಲ್ ಇನ್ಸ್ಪೆಕ್ಟರ್ ಗುರುರಾಜ್ ಕಲ್ಯಾಣ್, ಗೋಕಾಕ್ ಡಿವೈಎಸ್ಪಿ ಜಾವೆದ್ ಇಮಾನ್ದಾರ್ ಜೊತೆಗೆ ಯಮಕನಮರಡಿ ಠಾಣೆಯ ಹದಿನೇಳು ಸಿಬ್ಬಂದಿಯ ವಿಚಾರಣೆಯನ್ನು ಸಿಐಡಿ ನಡೆಸಿದೆ. ವಿಚಾರಣೆಗೆ ಹಾಜರಾಗುವಂತೆ ಐಜಿಪಿ ರಾಘವೇಂದ್ರ ಸುಹಾಸ್ಗೆ ನೋಟಿಸ್ ನೀಡಿದ್ದು ನೋಟಿಸ್ ಹಿನ್ನೆಲೆ ನಿನ್ನೆ ಸಿಐಡಿ ಎದುರು ರಾಘವೇಂದ್ರ ಸುಹಾಸ್ ವಿಚಾರಣೆ ಎದುರಿಸಿದ್ದಾರೆ.
ಏನಿದು ಬೆಳಗಾವಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ? ಜನವರಿ 9 ರಂದು ಬೆಳಗಾವಿ ಮಾರ್ಗವಾಗಿ ಮಂಗಳೂರಿನಿಂದ ಮುಂಬೈಗೆ ಚಿನ್ನ ಸಾಗಿಸಲಾಗುತ್ತಿತ್ತು. ಈ ಮಾಹಿತಿ ಹಿರಿಯ ಪೊಲೀಸ್ ಅಧಿಕಾರಿಗೆ ಸಿಕ್ಕಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಯಮಕನಮರಡಿ ಠಾಣೆ ಪಿಎಸ್ಐ ರಮೇಶ್ ಪಾಟೀಲ ನೇತೃತ್ವದ ತಂಡಕ್ಕೆ ಸೂಚಿಸಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಯಮಕನಮರಡಿ ಪೊಲೀಸರು ವಾಹನ ಪರಿಶೀಲಿಸಿದ್ದಾರೆ. ವಾಹನದಲ್ಲಿ ಚಿನ್ನ ಸಿಗದಿದ್ದಾಗ ವಾಹನ ವಶಕ್ಕೆ ಪಡೆದು ಠಾಣೆಗೆ ತಂದು ನಿಲ್ಲಿಸಿದ್ದಾರೆ. ಬಳಿಕ ಈ ಪ್ರಕರಣ ಇಷ್ಟಕ್ಕೆ ಮುಗಿಯದೇ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡಿದೆ.
ಕಳ್ಳಸಾಗಣೆ ಮಾಡುತ್ತಿದ್ದ ಈ ವಾಹನ ಮಂಗಳೂರು ಮೂಲದ ತಿಲಕ್ ಪೂಜಾರಿ ಎಂಬುವವರಿಗೆ ಸೇರಿದ್ದು ಈತ ಹುಬ್ಬಳ್ಳಿಯ ತನ್ನ ಸ್ನೇಹಿತ ಕಿರಣ್ ವೀರಣಗೌಡನಿಗೆ ಕಾರು ಬಿಡಿಸಿಕೊಡುವಂತೆ ಹೇಳಿದ್ದ. ಕಾರು ಬಿಡಿಸಿಕೊಡಲು ಕಿರಣ್ 60 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಎಂಬ ಆರೋಪ ಕೇಳಿ ಬಂದಿದೆ. ಕೊನೆಗೆ ಈ ಡೀಲ್ 30 ಲಕ್ಷಗೆ ಫೈನಲ್ ಆಗಿದೆ ಎಂದು ಹೇಳಲಾಗ್ತಿದೆ. ಕಿರಣ್ಗೆ ತಿಲಕ್ 25 ಲಕ್ಷ ರೂ. ಮುಂಗಡ ಹಣ ನೀಡಿದ್ದ. ಕಿರಣ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಫೋನ್ ಮಾಡಿ ಸೀಜ್ ಆದ ಕಾರು ಬಿಡಿಸಿಕೊಡುವಂತೆ ಮನವಿ ಮಾಡಿದ್ದ. ಆದರೆ ಪ್ರಕರಣ ದಾಖಲಾಗಿದ್ದರಿಂದ ಕಾರನ್ನು ಕೋರ್ಟ್ ನಿಂದ ಬಿಡಿಸಿಕೊಳ್ಳಬೇಕು ಎಂದು ಯಮಕನಮರಡಿ ಪಿಎಸ್ಐ ರಮೇಶ ಪಾಟೀಲ್ ಹೇಳಿದ್ದಾರೆ.
ಕಾರಿನಲ್ಲಿ ಇತ್ತಂತೆ ಎರಡೂವರೆ ಕೋಟಿ ಮೌಲ್ಯದ 4.9 ಕೆಜಿ ಚಿನ್ನ ಇನ್ನು ಕಿರಣ್ ಹಾಗೂ ಪೊಲೀಸರು ಸೇರಿ ಚಿನ್ನ ಲಪಟಾಯಿಸಿರುವ ಶಂಕೆ ವ್ಯಕ್ತವಾಗಿದೆ. ಚಿನ್ನ ಕದ್ದು ಹುಬ್ಬಳ್ಳಿ ಚಿನ್ನದ ವ್ಯಾಪಾರಿಗೆ ಮಾರಾಟ ಮಾಡಿರುವ ಅನುಮಾನ ಉಂಟಾಗಿದೆ. ತಿಲಕ್ ಪೂಜಾರಿ, ಏಪ್ರಿಲ್ 16 ರಂದು ಕೋರ್ಟ್ ಮೂಲಕ ಕಾರು ಬಿಡಿಸಿಕೊಂಡಿದ್ದಾನೆ. ಆದರೆ ಕಾರಿನಲ್ಲಿದ್ದ ಚಿನ್ನ ನಾಪತ್ತೆಯಾಗಿರೋದು ಬೆಳಕಿಗೆ ಬಂದಿದೆ. ತಕ್ಷಣ ತಿಲಕ್ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ಗೆ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಕಿರಣ್ ಡಿವೈಎಸ್ಪಿ ಜಾವೇದ್ ಹಾಗೂ ಪಿಎಸ್ಐ ರಮೇಶ್ ಪಾಟೀಲ್ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ನಡೆಸುತ್ತಿರುವ ಸಿಐಡಿ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದೆ.
ಇದನ್ನೂ ಓದಿ: Horoscope Today – ದಿನ ಭವಿಷ್ಯ; ಈ ರಾಶಿಯವರ ಪರಿವಾರದಲ್ಲಿ ಹೊಸಕಳೆ ಬರುವುದು, ಸುಖ ಇರುವುದು