AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CAA: ಭಾರತೀಯ ಪೌರತ್ವಕ್ಕಾಗಿ ಕರ್ನಾಟಕದಿಂದ 145 ಮಂದಿ ಅರ್ಜಿ, ಯಾವ ಜಿಲ್ಲೆಯಿಂದ ಎಷ್ಟು? ಇಲ್ಲಿದೆ ಮಾಹಿತಿ

Citizenship Amendment Act: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸಿಎಎ ಅಡಿ ಪೌರತ್ವಕ್ಕೆ ದೇಶಾದ್ಯಂತ ಸುಮಾರು 12,000 ಮಂದಿ ಈವರೆಗೆ ಅರ್ಜಿ ಸಲ್ಲಿಸಿದ್ದು, ಕರ್ನಾಟಕದಿಂದ 143 ಅರ್ಜಿಗಳು ಸಲ್ಲಿಕೆಯಾಗಿವೆ. ವಿಶೇಷ ಎಂದರೆ, ಕೇವಲ 2 ಜಿಲ್ಲೆಗಳಿಂದ ಮಾತ್ರವೇ ಇಷ್ಟೊಂದು ಅರ್ಜಿ ಸಲ್ಲಿಕೆಯಾಗಿವೆ. ಆ ಜಿಲ್ಲೆಗಳು ಯಾವುವು? ಅರ್ಜಿ ಸಲ್ಲಿಸಿದವರು ಯಾರು? ಇಲ್ಲಿದೆ ಮಾಹಿತಿ.

CAA: ಭಾರತೀಯ ಪೌರತ್ವಕ್ಕಾಗಿ ಕರ್ನಾಟಕದಿಂದ 145 ಮಂದಿ ಅರ್ಜಿ, ಯಾವ ಜಿಲ್ಲೆಯಿಂದ ಎಷ್ಟು? ಇಲ್ಲಿದೆ ಮಾಹಿತಿ
ಭಾರತೀಯ ಪೌರತ್ವಕ್ಕಾಗಿ ಕರ್ನಾಟಕದಿಂದ 145 ಮಂದಿ ಅರ್ಜಿ
ಗಣಪತಿ ಶರ್ಮಾ
|

Updated on: May 22, 2024 | 12:51 PM

Share

ಬೆಂಗಳೂರು, ಮೇ 22: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಡಿಯಲ್ಲಿ ಕರ್ನಾಟಕದಿಂದ (Karnataka) ಒಟ್ಟು 145 ಮಂದಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರು ತಮ್ಮ ಅರ್ಜಿಗಳನ್ನು ಅಂಚೆ ಇಲಾಖೆಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಯಚೂರಿನಿಂದ 143 ಮತ್ತು ದಕ್ಷಿಣ ಕನ್ನಡದಿಂದ ಎರಡು ಅರ್ಜಿಗಳು ಬಂದಿವೆ. ಅವರಲ್ಲಿ ಹೆಚ್ಚಿನವರು ಪಾಕಿಸ್ತಾನದಿಂದ ಬಂದ ಹಿಂದೂಗಳು. ಇದು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಅರ್ಜಿಗಳನ್ನು ಕಳುಹಿಸಲು ಯಾವುದೇ ಗಡುವು ಇಲ್ಲ ಎಂದು ಮೂಲಗಳು ತಿಳಿಸಿವೆ.

ಅರ್ಜಿ ಸಲ್ಲಿಸಿರುವ ವ್ಯಕ್ತಿಗಳು ರಾಯಚೂರಿಗೆ ಸ್ಥಳಾಂತರಗೊಂಡದ್ದು ಯಾವಾಗ ಎಂಬುದು ತಿಳಿದಿಲ್ಲ. ಆದರೆ ನಮ್ಮ ವಿಭಾಗೀಯ ಕಚೇರಿಗೆ 143 ಅರ್ಜಿಗಳು ಬಂದಿವೆ. ಬೆಂಗಳೂರಿನಲ್ಲಿ ನಾಲ್ಕು ವಿಭಾಗೀಯ ಕಚೇರಿಗಳಿದ್ದು, ಅಲ್ಲಿ ಒಂದು ಅರ್ಜಿಯನ್ನೂ ಸ್ವೀಕರಿಸಿಲ್ಲ ಎಂದು ಅಂಚೆ ಇಲಾಖೆ ಮೂಲಗಳು ಹೇಳಿವೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014 ರ ಡಿಸೆಂಬರ್ 31 ರ ಮೊದಲು ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಸಿಎಎ ಅಡಿ ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ. ಈ ವರ್ಷದ ಮಾರ್ಚ್ 11 ರಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಜಾರಿಗೊಳಿಸಿದ ನಂತರ, ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅಂಚೆ ಮತ್ತು ರೈಲ್ವೆ ನೌಕರರಿಗೆ ಪ್ರಮಾಣಪತ್ರಗಳನ್ನು ಪರಿಶೀಲಿಸಲು ಮತ್ತು ವಿತರಿಸಲು ಹೊಣೆಗಾರಿಕೆ ನೀಡಲಾಗಿದೆ.

ಸಿಎಎ ಅಡಿ ಪೌರತ್ವಕ್ಕೆ ದೇಶಾದ್ಯಂತ ಸುಮಾರು 12,000 ಮಂದಿ ಈವರೆಗೆ ಅರ್ಜಿ ಸಲ್ಲಿಸಿದ್ದು, ಇತ್ತೀಚೆಗೆ 300 ಮಂದಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಲಾಗಿದೆ. ಅರ್ಜಿದಾರರು ಎಲ್ಲಾ ಅಗತ್ಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಇವರಿಗೆ ಅಪಾಯಿಂಟ್​ಮೆಂಟ್​ಗಳನ್ನೂ ಆನ್‌ಲೈನ್‌ನಲ್ಲಿ ನಿಗದಿಪಡಿಸಲಾಗುತ್ತದೆ. ಮೊದಲ ಅಪಾಯಿಂಟ್​ಮೆಂಟ್ ಮೇ 25 ರಂದು ರಾಯಚೂರಿನಲ್ಲಿ ನಿಗದಿಯಾಗಿದೆ. ಅರ್ಜಿದಾರರು ಎಲ್ಲಾ ಮೂಲ ದಾಖಲೆಗಳನ್ನು ಒದಗಿಸುವ ನಿರೀಕ್ಷೆಯಿದೆ. ಒಂದು ದಿನದಲ್ಲಿ 28 ಅಪಾಯಿಂಟ್​ಮೆಂಟ್ ನೀಡಿರುವುದರಿಂದ ಎಲ್ಲಾ ಅರ್ಜಿಗಳನ್ನು ಮೇ 31 ರೊಳಗೆ ಪೂರ್ಣಗೊಳಿಸಲು ಅಂಚೆ ಸಿಬ್ಬಂದಿ ಯೋಜಿಸಿದ್ದಾರೆ. ದಕ್ಷಿಣ ಕನ್ನಡ ಅಧಿಕಾರಿಗಳು ಜೂನ್ 5 ರಂದು ಇಬ್ಬರು ಅರ್ಜಿದಾರರಿಗೆ ಅಪಾಯಿಂಟ್​ಮೆಂಟ್ ನೀಡಿದ್ದಾರೆ, ಜೂನ್ 5 ರೊಳಗೆ ಅಂಚೆ ಇಲಾಖೆಯ ಕೆಲಸ ಮುಗಿಯುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಹೆಚ್ಚು ಮಳೆ ಬರಲಿ, ತಮಿಳುನಾಡಿಗೂ ನೀರು ಹರಿಯಲಿ: ಡಿಸಿಎಂ ಡಿಕೆ ಶಿವಕುಮಾರ್

ಆರಂಭಿಕ ಪ್ರಕ್ರಿಯೆಗಳು ಮುಗಿದ ನಂತರ ಅಂಚೆ ಇಲಾಖೆಯು ಅರ್ಜಿಗಳನ್ನು ರಾಜ್ಯ ಮಟ್ಟದ ಅಧಿಕಾರ ಸಮಿತಿಗೆ ಕಳುಹಿಸಲಿದೆ. ಅವರು ಅದನ್ನು ಮತ್ತೊಮ್ಮೆ ಪರಿಶೀಲಿಸುತ್ತಾರೆ ಮತ್ತು ಪರಿಶೀಲನೆಯ ವಿವರಗಳು ಮತ್ತು ದಾಖಲೆಗಳನ್ನು ಸಿಎಎ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಗೃಹ ಸಚಿವಾಲಯವು ಅರ್ಜಿಗಳ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು