ನಂಜನಗೂಡು: 2 ಗುಂಪುಗಳ ನಡುವೆ ಘರ್ಷಣೆ; 10ಕ್ಕೂ ಹೆಚ್ಚು ಜನರಿಗೆ ಗಾಯ

ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ 2 ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ದ್ವಿಚಕ್ರ ವಾಹನದ ವಿಚಾರವಾಗಿ ಎರಡು ಸಮುದಾಯದ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬರಿಗೊಬ್ಬರು ಚಾಕುವಿಂದ ಇರಿದುಕೊಂಡಿದ್ದಾರೆ.

ನಂಜನಗೂಡು: 2 ಗುಂಪುಗಳ ನಡುವೆ ಘರ್ಷಣೆ; 10ಕ್ಕೂ ಹೆಚ್ಚು ಜನರಿಗೆ ಗಾಯ
ಎರಡು ಸಮುದಾಯದ ನಡುವೆ ನಡೆದ ಸಂಘರ್ಷದಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯ
Edited By:

Updated on: Feb 28, 2021 | 4:27 PM

ಮೈಸೂರು: ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ 2 ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ದ್ವಿಚಕ್ರ ವಾಹನದ ವಿಚಾರವಾಗಿ ಎರಡು ಸಮುದಾಯದ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬರಿಗೊಬ್ಬರು ಚಾಕುವಿಂದ ಇರಿದುಕೊಂಡಿದ್ದಾರೆ. ಸಂಘರ್ಷದಲ್ಲಿ ಭಾಗಿಯಾಗಿದ್ದ 10 ಜನರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿನ್ನೆ ತಡರಾತ್ರಿ ಎರಡು ಸಮುದಾಯದ ನಡುವೆ ಘರ್ಷಣೆ ಉಂಟಾಗಿದೆ. ಸಂಘರ್ಷದ ಆರ್ಭಟ ಜೋರಾಗಿದ್ದು, ಗ್ರಾಮದ ಮುಂಭಾಗದ ಬಾಳೆ ತೋಟ ಸೇರಿ ಎರಡು ರಾಗಿ ಮೆದೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಘರ್ಷದ ತೀವ್ರತೆಯಿಂದ ಒಬ್ಬರಿಗೊಬ್ಬರು ಚಾಕುವಿನಿಂದ ಇರಿದು ಕೊಂಡಿದ್ದಾರೆ. 10 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಕೆ.ಆರ್.ಆಸ್ಪತ್ರೆ ತುರ್ತು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಲ್ಲಿ ರೈತ ಬಾಲು ಅವರ ಹುಲ್ಲಿನ ಮೆದೆ ಭಸ್ಮಗೊಂಡಿದೆ. ಇನ್ನೋರ್ವ ರೈತ ರೇವಣ್ಣನವರ ಜಮೀನಿನಲ್ಲಿ ಬೆಳೆದಿದ್ದ ಬಾಳೆಗಿಡಗಳು ನಾಶವಾಗಿದೆ. ಗ್ರಾಮದಲ್ಲಿ ನಂಜನಗೂಡು ಡಿವೈಎಸ್​ಪಿ ಗೋವಿಂದರಾಜು, ಇನ್ಸ್​ಪೆಕ್ಟರ್​ ಲಕ್ಷ್ಮೀಕಾಂತ ತಳವಾರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ.

ಇದನ್ನೂ ಓದಿ: ಮೈಸೂರಿನ ಹೆಬ್ಬಲಗುಪ್ಪೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಹೆಣ್ಣು ಚಿರತೆ ಕೊನೆಗೂ ಸೆರೆ..

ಇದನ್ನೂ ಓದಿ: ಮೈಸೂರು: ಗುಡಿಸಿಲಿಗೆ ಬೆಂಕಿ ತಗುಲಿ ದವಸ ಧಾನ್ಯ ಸುಟ್ಟು ಭಸ್ಮ