ಮೈಸೂರಿನ ಹೆಬ್ಬಲಗುಪ್ಪೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಹೆಣ್ಣು ಚಿರತೆ ಕೊನೆಗೂ ಸೆರೆ..
ಸಾಮಾನ್ಯವಾಗಿ ಹಾವನ್ನು ಕಂಡು ಭಯದಿಂದ ಕಿರುಚಿ ಮಾರುದ್ದ ಓಡುವವರೆ ಹೆಚ್ಚು. ಇನ್ನು ಕೆಲವರು ಹಾವನ್ನು ನೋಡುತ್ತಿದ್ದಂತೆ ತಲೆ ಸುತ್ತು ಬೀಳುತ್ತಾರೆ. ಆದರೆ ಇಲ್ಲೊಂದು ಮಹಿಳೆ ಮನೆಯೊಳಗೆ ಇದ್ದ ಹಾವನ್ನು ಹಿಡಿಯದಂತೆ ತಡೆಹಿಡಿದಿದ್ದಾರೆ.
ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಹೊಸ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಕಾಡಿನಿಂದ ನಾಡಿಗೆ ಬಂದಿದ್ದ ಹೆಣ್ಣು ಚಿರತೆಯೊಂದು ಗ್ರಾಮದಲ್ಲಿ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ತಡರಾತ್ರಿ ತನಕ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಚಿರತೆಯನ್ನು ಸೆರೆಹಿಡಿದಿದ್ದಾರೆ.
ಹುತ್ತ ಕೀಳುವಾಗ ಎಳೆ ನಾಗರ ಹಾವು ಪ್ರತ್ಯಕ್ಷ; ಹಾವನ್ನ ಹಿಡಿಯದಂತೆ ಮಹಿಳೆಯ ರಂಪಾಟ ಸಾಮಾನ್ಯವಾಗಿ ಹಾವನ್ನು ಕಂಡು ಭಯದಿಂದ ಕಿರುಚಿ ಮಾರುದ್ದ ಓಡುವವರೆ ಹೆಚ್ಚು. ಇನ್ನು ಕೆಲವರು ಹಾವನ್ನು ನೋಡುತ್ತಿದ್ದಂತೆ ತಲೆ ಸುತ್ತು ಬಂದು ಬೀಳುತ್ತಾರೆ. ಆದರೆ ಇಲ್ಲೊಂದು ಮಹಿಳೆ ಮನೆಯೊಳಗೆ ಇದ್ದ ಹಾವನ್ನು ಹಿಡಿಯದಂತೆ ತಡೆಹಿಡಿದಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಬೈರೆಗೌಡನಹಳ್ಳಿ ಗ್ರಾಮದಲ್ಲಿ ಪಾಳು ಬಿದ್ದ ಮನೆಯೊಳಗಿನ ಹುತ್ತ ಕೀಳುವಾಗ ಎಳೆ ನಾಗರ ಹಾವು ಪ್ರತ್ಯಕ್ಷವಾಗಿತ್ತು. ಗ್ರಾಮದ ಮುನಿರಾಜು ಮತ್ತು ಚಿನ್ನಮ್ಮ ಎಂಬ ದಂಪತಿಗೆ ಸೇರಿದ ಜಾಗದಲ್ಲಿ ನಾಗರ ಹಾವು ಕಾಣಿಸಿಕೊಂಡಿತ್ತು.
ಮಣ್ಣಿನಲ್ಲಿ ಸಿಲುಕಿ ಗಾಯಗೊಂಡಿದ್ದ ನಾಗರಾಜನನ್ನು ರಕ್ಷಣೆ ಮಾಡಲು ಉರಗ ತಜ್ಞ ರಾಜು ಪ್ರಯತ್ನ ಮಾಡಿದ್ದರು. ಆದರೆ ಹಾವನ್ನ ಹಿಡಿಯದಂತೆ ಮಹಿಳೆ ರಂಪಾಟ ಮಾಡಿದರು. ಆದರೆ ವಿರೋಧದ ನಡುವೆಯೂ ಉರಗ ತಜ್ಞ ಹಾವನ್ನ ಹಿಡಿದರು. ಆ ನಂತರ ಗಾಯಗೊಂಡಿದ್ದ ಹಾವಿಗೆ ಚಿಕಿತ್ಸೆ ನೀಡಿ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಉರಗ ತಜ್ಞ ರಾಜು ಮಾನವೀಯತೆ ಮೆರೆದರು.
ಇದನ್ನೂ ಓದಿ
ವನ್ಯ ಜೀವಿ-ಮಾನವ ಸಂಘರ್ಷ; ಕರ್ನಾಟಕ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಹುಲಿ, ಚಿರತೆ ದಾಳಿ
ಕೆಆರ್ಎಸ್ ಬಳಿ ಓಡಾಡುತ್ತಿದ್ದ ಒಂದು ಚಿರತೆ ಬೋನಿಗೆ, ಇನ್ನೊಂದು ಚಿರತೆಗಾಗಿ ಮುಂದುವರಿದ ಹುಡುಕಾಟ