ಮಂಡ್ಯದ ಹುನಗನಹಳ್ಳಿ ಗ್ರಾಮದಲ್ಲಿ ಪಡಿತರ ಅಕ್ರಮ; ಮೃತರ ಹೆಸರಲ್ಲಿಯೂ ನಡೆದಿದೆ ವಂಚನೆ!
Mandya: ಸರ್ಕಾರಕ್ಕೆ ಬದುಕಿದ್ದಾರೆಂಬ ಲೆಕ್ಕ ಕೊಟ್ಟು ಮೃತರ ಮನೆಯವರಿಗೆ ಹೆಸರು ರದ್ದು ಮಾಡಿದ್ದಾಗಿ ಸುಳ್ಳು ಹೇಳಿ ನ್ಯಾಯ ಬೆಲೆ ಅಂಗಡಿ ಮಾಲೀಕ ರಾಜು ಸುಮಾರು 750 ಕ್ವಿಂಟಾಲ್ ಅಕ್ಕಿ ಪಡೆದಿದ್ದಾರೆಂದು ಹೇಳಲಾಗುತ್ತಿದೆ.
ಮಂಡ್ಯ: ಬಡತನ ರೇಖೆ ಆಚೀಚೆ ಇರುವವವರಿಗೆ ನ್ಯಾಯಯುತವಾಗಿ ಹಂಚಿಕೆಯಾಗಬೇಕಿರುವ ರೇಷನ್ ವಿಚಾರದಲ್ಲಿ ಹೆಚ್ಚು ವಂಚನೆಗಳು ನಡೆಯುತ್ತಿದ್ದು, ಇಂತಹದೊಂದು ಪ್ರಕರಣ ತಾಲೂಕಿನ ಹುನಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರ ಹೆಸರಲ್ಲಿ 2 -3 ವರ್ಷದಿಂದ ರೇಷನ್ ಪಡೆದು ವಂಚನೆ ಮಾಡಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ರಾಜು ಎಂಬಾತ ನ್ಯಾಯ ಬೆಲೆ ಅಂಗಡಿಯೊಂದರಲ್ಲಿ ಬಡವರ ಹೆಸರಲ್ಲಿ ಸುಮಾರು 750 ಕ್ವಿಂಟಾಲ್ ಅಕ್ಕಿಯನ್ನು ಪಡೆದು ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜು ಎಂಬುವವರು ನ್ಯಾಯ ಬೆಲೆ ಅಂಗಡಿ ಮಾಲೀಕ. ಈತ ಸಾವನ್ನಪ್ಪಿರುವವರ ಹೆಸರಲ್ಲಿ ರೇಷನ್ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರಕ್ಕೆ ಬದುಕಿದ್ದಾರೆಂದು ಲೆಕ್ಕ ಕೊಟ್ಟು ಮೃತರ ಮನೆಯವರಿಗೆ ಹೆಸರು ರದ್ದು ಮಾಡಿದ್ದಾಗಿ ಸುಳ್ಳು ಹೇಳಿ ನ್ಯಾಯ ಬೆಲೆ ಅಂಗಡಿ ಮಾಲೀಕ ರಾಜು ಸುಮಾರು 750 ಕ್ವಿಂಟಾಲ್ ಅಕ್ಕಿ ಪಡೆದಿದ್ದಾರೆಂದು ಹೇಳಲಾಗುತ್ತಿದೆ.
2-3 ವರ್ಷಗಳಿಂದ ಅಕ್ರಮ ನಡೆಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ರಾಜು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಇತ್ತೀಚೆಗೆ ಗ್ರಾಮದ ಮಹಿಳೆಯೊಬ್ಬರ ಕಾರ್ಡ್ನ ಆನ್ಲೈನ್ನಲ್ಲಿ ಪರಿಶೀಲಿಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು, ಇದೇ ರೀತಿ ತನ್ನ ನ್ಯಾಯಬೆಲೆ ವ್ಯಾಪ್ತಿಯ ನಾಲ್ಕೈದು ಗ್ರಾಮಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಕಾರ್ಡ್ನ ಬಳಕೆ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ
Food Department website: ಆಹಾರ ಇಲಾಖೆಯ ವೆಬ್ಸೈಟ್ ಹ್ಯಾಕ್ ಮಾಡಿ ಪಡಿತರ ಲೂಟಿ; ನಾಲ್ವರು ಜೈಲಿಗೆ
ಒನ್ ನೇಷನ್ ಒನ್ ಕಮಿಷನ್ ನೀಡುವಂತೆ ಕಲಬುರಗಿ ಪಡಿತರ ವಿತರಕರಿಂದ ಸರ್ಕಾರಕ್ಕೆ ಆಗ್ರಹ