ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ನಡೆದ ತೇರುಮಲ್ಲೇಶ್ವರ ರಥೋತ್ಸವದಲ್ಲಿ RCB ಫ್ಯಾನ್ಸ್ RCB ಗೆಲುವಿಗಾಗಿ ರಥದ ಮೇಲೆ ಬಾಳೆಹಣ್ಣು ತೂರಿದ್ದಾರೆ. ಆದ್ರೆ ವಿಶೇಷ ಅಂದ್ರೆ ಬಾಳೆ ಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ, ಜೈ RCB’ ಎಂದು ಬರೆಯಲಾಗಿದೆ. ಈ ರೀತಿ ಬರೆದ ಬಾಳೆಹಣ್ಣಿನ ಜೊತೆಗೆ ಹತ್ತು ರೂಪಾಯಿ ಹಣ ಇಟ್ಟು ಎರಡೂ ಕೈಗಳಿಂದ ತೇರಿಗೆ ನಮಿಸಿ, RCB ಗೆಲುವಿಗೆ ಪ್ರಾರ್ಥಿಸಿ ಬಾಳೆಹಣ್ಣನ್ನು ತೇರಿನ ಮೇಲೆ ಎಸೆದಿದ್ದಾರೆ. ಇದೀಗ RCB ಫ್ಯಾನ್ಸ್ ಪ್ರಾರ್ಥನೆ ಸಲ್ಲಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಬಾಳೆಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ರಥದ ಮೇಲೆ ತೂರಿದ ಅಭಿಮಾನಿ
ಬಾಳೆಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ರಥದ ಮೇಲೆ ತೂರಿದ ಅಭಿಮಾನಿ
ಇದನ್ನೂ ಓದಿ: IPL Auction 2021: ಚೆಂಡಿರೋದೆ ಚಚ್ಚುವುದಕ್ಕೆ ಧೋರಣೆಯ ಅಜರುದ್ದೀನ್ 2021 ಐಪಿಎಲ್ ಸೀಸನ್ನಲ್ಲಿ ಆರ್ಸಿಬಿಗೆ ಆಡುತ್ತಾರೆ!