ದೆಹಲಿ: ಕರ್ನಾಟಕ ರಾಜ್ಯದ ಸಂಸದರ ಜೊತೆ ಸಭೆ ಮಾಡಿದ್ದೇನೆ. ರಾಜ್ಯದ ಯೋಜನೆಗಳ ಸಂಬಂಧ ಚರ್ಚೆ ನಡೆಸಲಾಗಿದೆ. ನೀರಾವರಿ, ನಗರಾಭಿವೃದ್ಧಿ, ಹೆದ್ದಾರಿ ಯೋಜನೆ ಬಗ್ಗೆ ಚರ್ಚೆ ಮಾಡಲಾಗಿದೆ. ಸೌಹಾರ್ದಯುತ ಚರ್ಚೆ ನಡೆದಿದೆ. ಕೇಂದ್ರದ ಬಜೆಟ್ ನಲ್ಲಿ ಘೋಷಣೆಯಾಗಿರುವ ಯೋಜನೆ ಅನುಷ್ಠಾನದ ಬಗ್ಗೆ ಮಾತುಕತೆ ನಡೆಸಲಾಗಿದೆ. ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ್ ಭೇಟಿಯಾಗಿದ್ದೇನೆ. ಕಲ್ಲಿದ್ದಲು ಸಾಗಾಣಿಕೆಗೆ ರೇಕ್ ಬೇಕಾಗಿದೆ. ಮನ್ಸುಖ್ ಮಾಂಡವೀಯ ಆರೋಗ್ಯ ಸಚಿವರನ್ನು ಭೇಟಿ ಮಾಡಿದ್ದೇನೆ. ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಚರ್ಚೆ ಮಾಡಿದ್ದೇನೆ. ಇಂಧನ ಸಚಿವ ಆರ್.ಕೆ ಸಿಂಗ್ ಭೇಟಿಯಾಗಿದ್ದೇನೆ. ಹೆಸ್ಕಾಂ ಸಂಬಂಧ ಚರ್ಚೆ ನಡೆಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ (ಫೆಬ್ರವರಿ 7) ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.
ಅಮಿತ್ ಶಾ ಅವರನ್ನು ಭೇಟಿ ಸಾಧ್ಯವಾಗಿಲ್ಲ. ನಾಳೆ ಜೆ.ಪಿ ನಡ್ಡಾ ಅವರು ದೆಹಲಿಗೆ ಬರಲಿದ್ದಾರೆ. ಭೇಟಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ನಡ್ಡಾ ಭೇಟಿ ವೇಳೆ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜತೆ ನಾಳೆ ಚರ್ಚೆ ನಡೆಸುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ನಾಳೆ ರಾಜಕೀಯ ಚರ್ಚೆಗೆ ಸಿಎಂ ಸಜ್ಜಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ನಡ್ಡಾ ನಾಳೆ ದೆಹಲಿಗೆ ಬರ್ತಾರೆ, ಭೇಟಿಗೆ ಅವಕಾಶ ಸಾಧ್ಯತೆ ಇದೆ ಎಂದು ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ನಡ್ಡಾ ಭೇಟಿ ವೇಳೆ ರಾಜಕೀಯ ವಿಷಯಗಳ ಕುರಿತಾಗಿ ಚರ್ಚೆ. ಈವರೆಗೂ ಅಮಿತ್ ಶಾ ಭೇಟಿ ಸಾಧ್ಯವಾಗಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.
ಇದಕ್ಕೂ ಮೊದಲು, ಸಿಎಂ ಬೊಮ್ಮಾಯಿ ಸಂಸತ್ ಭವನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗಿದ್ದಾರೆ. GST ಪರಿಹಾರ ಸೇರಿದಂತೆ ಹಣಕಾಸು ನೆರವು ಕುರಿತು ಚರ್ಚೆ ನಡೆಸಲಾಗಿದೆ. ಕರ್ನಾಟಕಕ್ಕೆ ನೀಡಬೇಕಾದ ನೆರವಿನ ಬಗ್ಗೆ ಸಿಎಂ ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ, ಕರ್ನಾಟಕ ರಾಜ್ಯ ಭೊವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಲಾಗಿದೆ. ಅಖಿಲ ಭಾರತೀಯ ಭೊವಿ ಸಮಾಜ ಅಧ್ಯಕ್ಷ ಡಾ. ವೆಂಕಟೇಶ್ ಮೌರ್ಯ ಮನವಿ ಮಾಡಿದ್ದಾರೆ. ರಾಷ್ಟ್ರೀಯ ಪದಾಧಿಕಾರಿಗಳ ನಿಯೋಗದೊಂದಿಗೆ ಮನವಿ ಮಾಡಲಾಗಿದೆ. ನಾಲ್ಕು ವರ್ಷದಿಂದ ಅಧ್ಯಕ್ಷರ ನೇಮಕ ಆಗಿಲ್ಲ. ಅಧ್ಯಕ್ಷರ ನೇಮಕವಾಗದ ಹಿನ್ನಲೆ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಹಗರಣವಾಗಿದೆ. ಈ ಸಂಬಂಧ ಅಧಿಕಾರಿಗಳು ಅಮಾನತು ಕೂಡಾ ಆಗಿದ್ದರು. ಈ ಹಿನ್ನಲೆ ಕೂಡಲೇ ಅಧ್ಯಕ್ಷರ ನೇಮಕ ಮಾಡುವಂತೆ ವೆಂಕಟೇಶ ಮೌರ್ಯ ಮನವಿ ಮಾಡಿದ್ದಾರೆ.
ಗೃಹ ಖಾತೆ ಕೊಟ್ಟರೆ ಹಿಜಾಬ್, ಕೇಸರಿ ಶಾಲು ವಿವಾದ ಅಂತ್ಯ: ಬಸನಗೌಡ ಪಾಟೀಲ್ ಯತ್ನಾಳ್
ಸಚಿವ ಸಂಪುಟ ವಿಸ್ತರಣೆ ಎಂದಾದರೂ ಮಾಡಲಿ ಅವಸರವಿಲ್ಲ. ಸಚಿವ ಸ್ಥಾನ ನೀಡುವಂತೆ ಯಾರ ಬಳಿಯೂ ಕೇಳಿಕೊಂಡಿಲ್ಲ. ಸಿಎಂ ಬಳಿ ಏಕಾಂಗಿಯಾಗಿ ಅರ್ಧ ಗಂಟೆ ಚರ್ಚೆ ಮಾಡಿದ್ದೇನೆ. ನಗರದ ಅಭಿವೃದ್ಧಿ, ಮುಂದಿನ ಚುನಾವಣೆ ಬಗ್ಗೆ ಚರ್ಚಿಸಿದ್ದೇವೆ. ಸಚಿವ ಸ್ಥಾನ, ಯಾವುದೇ ಖಾತೆಯನ್ನು ನಾನು ಕೇಳಿಲ್ಲ. ಗೃಹ ಖಾತೆ ಕೊಟ್ಟರೆ ಹಿಜಾಬ್, ಕೇಸರಿ ಶಾಲು ವಿವಾದ ಅಂತ್ಯ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ನಾನು ಸಚಿವನಾಗುತ್ತೇನೆ ಎಂದು ಹೇಳಲು ಭವಿಷ್ಯಕಾರನಲ್ಲ: ಎಂ.ಪಿ. ರೇಣುಕಾಚಾರ್ಯ
ನಾನು ಸಚಿವನಾಗುತ್ತೇನೆ ಎಂದು ಹೇಳಲು ಭವಿಷ್ಯಕಾರನಲ್ಲ. ರಾತ್ರಿ 9 ಗಂಟೆಗೆ ದೆಹಲಿಗೆ ತೆರಳುತ್ತೇನೆ. ನಾನು ಶಾಸಕನಾಗಿ ಕ್ಷೇತ್ರಕ್ಕೆ ನನ್ನನ್ನ ಸಮರ್ಪಿಸಿಕೊಂಡಿದ್ದೇನೆ. ಸಚಿವ ಸ್ಥಾನ ಕೊಟ್ಟರೆ ನಾನು ರಾಜ್ಯಕ್ಕೆ ಸಮರ್ಪಿಸಿಕೊಳ್ಳುತ್ತೇನೆ. ಯಾವುದೇ ಖಾತೆ ಕೊಟ್ಟರೂ ನಾನು ನಿಭಾಯಿಸಬಲ್ಲೆ ಎಂದು ಹೊನ್ನಾಳಿಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ರಾಜಕಾರಣಕ್ಕೆ ಬರುವವರು ಆಸೆ ಇಟ್ಕೊಂಡೇ ಬಂದಿರುತ್ತಾರೆ: ಸಚಿವ ಮಾಧುಸ್ವಾಮಿ
ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ವಿಚಾರವಾಗಿ ಚಿಕ್ಕಮಗಳೂರಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ. ಸಿಎಂ ಬೊಮ್ಮಾಯಿ ದೆಹಲಿ ಭೇಟಿ, ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆ ವಿಚಾರಕ್ಕೂ ಸಂಬಂಧ ಇಲ್ಲ. ನಮ್ಮ ಅಧ್ಯಕ್ಷರು ದೆಹಲಿಯಲ್ಲಿಲ್ಲ ಜಾರ್ಖಂಡ್ನಲ್ಲಿದ್ದಾರೆ. ದೆಹಲಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಯಲ್ಲ. ಸಿಎಂ ದೆಹಲಿ ಭೇಟಿ ಬಳಿಕ ನಿಗಮ ಮಂಡಳಿಗೆ ನೇಮಕವಾಗುತ್ತೆ ಎಂದು ಚಿಕ್ಕಮಗಳೂರಿನಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.
ಕೆಲವು ಶಾಸಕರು ದೆಹಲಿಗೆ ಹೋಗಿರುವುದರಲ್ಲಿ ತಪ್ಪೇನಿದೆ? ರಾಜಕಾರಣಕ್ಕೆ ಬರುವವರು ಆಸೆ ಇಟ್ಕೊಂಡೇ ಬಂದಿರುತ್ತಾರೆ. ಇಬ್ಬರು ಮೂವರು ಸನ್ಯಾಸಿ ಇರಬಹುದು, ಆಸೆ ಇದ್ದೇ ಇರುತ್ತೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಲತಾ ಮಂಗ್ಲೇಶ್ಕರ್ ನಿಧನ: ಆಶಾ ಭೋಸ್ಲೆಗೆ ಸಾಂತ್ವನ ಹೇಳಿದ ಸಿಎಂ ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ‘ಲತಾ ಮಂಗೇಶ್ಕರ್ ಅವರ ಆ ಹಾಡು ಕೇಳಿದ್ರೆ ಈಗಲೂ ಕಣ್ಣೀರು ಬರುತ್ತೆ’: ಬಸವರಾಜ ಬೊಮ್ಮಾಯಿ
Published On - 6:30 pm, Mon, 7 February 22