ಶಾಸಕ ರಾಜ್​ಕುಮಾರ್ ಪಾಟೀಲ್ ವಿರುದ್ಧ ಮಹಿಳೆ ಆರೋಪ ಪ್ರಕರಣ; ದೂರಿನ ಪ್ರತಿಯಲ್ಲಿನ ಅಂಶಗಳೇನು?

14 ವರ್ಷದ ಮಗನನ್ನು ತಮ್ಮ ಮಗನೆಂದು ಒಪ್ಪಿಕೊಳ್ಳಬೇಕು. ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಒಪ್ಪಿಕೊಳ್ಳಬೇಕು. ತನಿಖೆ ನಡೆಸಿ ಕಾನೂನು ಪ್ರಕಾರ ನ್ಯಾಯಕೊಡಿಸಿ ಎಂದು ಮಹಿಳೆ ಮನವಿ ಮಾಡಿದ್ದಾರೆ.

ಶಾಸಕ ರಾಜ್​ಕುಮಾರ್ ಪಾಟೀಲ್ ವಿರುದ್ಧ ಮಹಿಳೆ ಆರೋಪ ಪ್ರಕರಣ; ದೂರಿನ ಪ್ರತಿಯಲ್ಲಿನ ಅಂಶಗಳೇನು?
ಬಿಜೆಪಿ ಶಾಸಕ ರಾಜ್​ಕುಮಾರ್ ಪಾಟೀಲ್ ಹಾಗೂ ಮಹಿಳೆ
Follow us
TV9 Web
| Updated By: ganapathi bhat

Updated on:Feb 07, 2022 | 6:57 PM

ಬೆಂಗಳೂರು: ಕಲಬುರಗಿ ಜಿಲ್ಲೆ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ವಿರುದ್ಧ ದೂರು ದಾಖಲು ಮಾಡಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಮಹಿಳೆ ದೂರು ನೀಡಿದ್ದಾರೆ. ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್​ಗೆ ದೂರು ನೀಡಲಾಗಿದೆ. ಶಾಸಕ ತೇಲ್ಕೂರ್ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ತೇಲ್ಕೂರ್ ಜತೆ ಸಂಪರ್ಕದಿಂದ ನನಗೆ ಗಂಡು ಮಗು ಜನಿಸಿದೆ. 14 ವರ್ಷದ ಮಗನನ್ನು ತಮ್ಮ ಮಗನೆಂದು ಒಪ್ಪಿಕೊಳ್ಳಬೇಕು. ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಒಪ್ಪಿಕೊಳ್ಳಬೇಕು. ತನಿಖೆ ನಡೆಸಿ ಕಾನೂನು ಪ್ರಕಾರ ನ್ಯಾಯಕೊಡಿಸಿ ಎಂದು ಈ ಮೂಲಕ ಮನವಿ ಮಾಡಿದ್ದಾರೆ.

ಮಹಿಳೆ ವಿರುದ್ಧ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ದೂರಿನ ವಿಚಾರವಾಗಿ ಮಹಿಳೆ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಪೆಬ್ರವರಿ 5 ರಂದು ಶಾಸಕ ತೇಲ್ಕೂರ್ ದೂರು ನೀಡಿದ್ದಾರೆ. ವನಜಾ ವೀರಭದ್ರಯ್ಯ ಮತ್ತು ಇನ್ನಿತರರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಮಹಿಳೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿರೋದಾಗಿ ಆರೋಪ ಮಾಡಲಾಗಿದೆ. ಈ ಆರೋಪ ಮಾಡಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ದೂರು ನೀಡಿದ್ದಾರೆ.

ಮಹಿಳೆ ನೀಡಿರುವ ದೂರಿನ ಪ್ರತಿಯಲ್ಲಿರುವ ಅಂಶಗಳು ಹೀಗಿದೆ:

ಶಾಸಕ ರಾಜಕುಮಾರ್ ಪಾಟೀಲ್​ಗೆ ಬ್ಲ್ಯಾಕ್​ಮೇಲ್ ಪ್ರಕರಣ ಸಂಬಂಧಿಸಿ ವಿಚಾರಣೆಯಲ್ಲಿ ಶಾಸಕ ತೇಲ್ಕೂರ್ ವಿರುದ್ಧ ಮಹಿಳೆ ಆರೋಪ ಮಾಡಿದ್ದಾರೆ. ರಾಜಕುಮಾರ್ ಪಾಟೀಲ್​ ಹಾಗೂ ನಾನು ಒಂದೇ ಹಳ್ಳಿಯವರು. 16 ವರ್ಷವಿದ್ದಾಗಲೇ ನನ್ನ ಮತ್ತು ಅವರ ಮಧ್ಯೆ ಸಂಬಂಧವಿತ್ತು. ನನ್ನ ತಂದೆಗೆ ಗೊತ್ತಾಗಿ ಬೇರೆ ಮದುವೆ ಮಾಡಲು ನಿರ್ಧರಿಸಿದ್ರು. ಮದುವೆ ನಂತರ ನಾನು ಬೆಂಗಳೂರಿನಲ್ಲಿಯೇ ಸೆಟ್ಲ್ ಆಗಿದ್ದೆ. ಬಳಿಕ ಮತ್ತೆ ಶಾಸಕರು ನನ್ನ ಮನೆಗೆ ಬರಲು ಆರಂಭಿಸಿದರು. ಮನಗೆ ಬಂದು ಲೈಂಗಿಕವಾಗಿ ಸಹಕರಿಸುವಂತೆ ನನಗೆ ಒತ್ತಡ ಹೇರಿದ್ದರು. ಸಹಕರಿಸದಿದ್ರೆ ನನ್ನ ಗಂಡನಿಗೆ ಹೇಳುವುದಾಗಿ ಬೆದರಿಸುತ್ತಿದ್ದರು. ಬ್ಲ್ಯಾಕ್​ಮೇಲ್ ಮಾಡಿ ನನ್ನ ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆನಂತರದಲ್ಲಿ ಶಾಸಕ ಪಾಟೀಲ್​ನಿಂದ ನನಗೆ ಮಗು ಆಯ್ತು. ಈ ವಿಚಾರ ಗೊತ್ತಾಗಿ ನನ್ನ ಗಂಡ ನನಗೆ ವಿಚ್ಛೇಧನ ನೀಡಿದ್ರು. ರೈತರಿಗೆ ಮೋಸ ಮಾಡಿದ ವಿಚಾರದಲ್ಲಿ ಜೈಲು ಸೇರಿದ್ದರು. ಶಾಸಕ ಪಾಟೀಲ್ ಜೈಲು ಸೇರಿದ್ದ ವಿಚಾರವೂ ತಿಳಿಯಿತು. ಫೆ.6ರಂದು ವಿಧಾನಸೌಧ ಪೊಲೀಸರು ನನ್ನ ಕರೆದೊಯ್ದರು. ಪೊಲೀಸರು ನನ್ನನ್ನು ಬಲವಂತವಾಗಿ ಠಾಣೆಗೆ ಕರೆದೊಯ್ದರು. ನೋಟಿಸ್, ವಾರಂಟ್ ಏನೂ ನೀಡದೇ ನನ್ನ ಕರೆದೊಯ್ದರು. ಠಾಣೆಯಲ್ಲಿ ಕೂರಿಸಿ ನನಗೆ ಬೆದರಿಕೆ ಹಾಕಿ ಒತ್ತಡ ಹಾಕಿದ್ರು. ಯಾವ ಕಾರಣಕ್ಕೂ ಮಾಧ್ಯಮದ ಮುಂದೆ ಹೋಗಬಾರದು. ಕೇಸ್ ವಿಚಾರ ಇಲ್ಲಿಗೆ ಬಿಡಬೇಕು ಎಂದು ಎಚ್ಚರಿಕೆ ನೀಡಿದ್ರು ಎಂದು ಹೇಳಿದ್ದಾರೆ.

ಕಾಂಗ್ರೆಸ್​ನಿಂದ ಒತ್ತಡ ಇತ್ತೆಂದು ಪತ್ರ ಬರೆಯಲು ಹೇಳಿದ್ರು. ಅ ಬಳಿಕ ಜಗದೀಶ್​ರಿಂದ ಸಹಾಯ ಪಡೆದು ದೂರು ನೀಡಿದ್ದೇನೆ. ನನಗೆ 14 ವರ್ಷದ ಮಗನಿದ್ದು, ಅವರೇ ತಂದೆಯಾಗಿದ್ದಾರೆ. ಅವನಿಗೆ ನ್ಯಾಯ ಬೇಕೆಂದು ಹೆಚ್ಚುವರಿ ಆಯುಕ್ತರಿಗೆ ದೂರು ನೀಡಿದ್ದೇನೆ. ದಯವಿಟ್ಟು FIR ದಾಖಲಿಸಿ ನ್ಯಾಯ ಒದಗಿಸಿ ಎಂದು ಮನವಿ ಮಾಡಿದ್ದಾರೆ.

ಇತರ ಅಪರಾಧ ಸುದ್ದಿಗಳು

ಮಂಡ್ಯ: ಒಂದೇ ಕುಟುಂಬದ ಐವರ ಬರ್ಬರ ಹತ್ಯೆ ಪ್ರಕರಣದಲ್ಲಿ ಮೃತಪಟ್ಟವರನ್ನು ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗಿದೆ. ವ್ಯಾಪಾರಕ್ಕಾಗಿ ಹೊರ ರಾಜ್ಯಕ್ಕೆ ತೆರಳಿದ್ದ ಲಕ್ಷ್ಮೀ ಪತಿ ಗಂಗಾರಾಮ್​ರಿಂದ ಮೃತರ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಗಿದೆ.

ಮಡಿಕೇರಿ: ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಕತ್ತಿಯಿಂದ ಕಡಿದು ಪ್ರೇಮಾ (45) ಎಂಬವರ ಕೊಲೆ ಮಾಡಲಾಗಿದೆ. ಕೊಲೆಗೈದು ಆರೋಪಿ ಪರಾರಿ ಆಗಿದ್ದಾನೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ನನ್ನ ಮಗನಿಗೂ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜ್​ಕುಮಾರ್ ಪಾಟೀಲ್​ಗೂ ಸಂಬಂಧವಿದೆ; ಸಂತ್ರಸ್ತ ಮಹಿಳೆಯಿಂದ ಗಂಭೀರ ಆರೋಪ

ಇದನ್ನೂ ಓದಿ: ಸೇಡಂ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್‌ಗೆ ಸೋಂಕು?

Published On - 6:55 pm, Mon, 7 February 22

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್