ನನ್ನ ಮಗನಿಗೂ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜ್​ಕುಮಾರ್ ಪಾಟೀಲ್​ಗೂ ಸಂಬಂಧವಿದೆ; ಸಂತ್ರಸ್ತ ಮಹಿಳೆಯಿಂದ ಗಂಭೀರ ಆರೋಪ

ಪೊಲೀಸರು ನನ್ನನ್ನ ಠಾಣೆಯಲ್ಲಿ ಕೂಡಿಹಾಕಿದ್ದರು, ಗುಹೆ ರೀತಿ ಇತ್ತು. ವಿಧಾನಸೌದ ಠಾಣೆ ಪೊಲೀಸರು ನನ್ನನ್ನ ಕೂಡಿ ಹಾಕಿದ್ದಾರೆ. ನನ್ನ ಜೀವನವನ್ನೆಲ್ಲಾ ಹಾಳು ಮಾಡಿದ. ನನಗೆ ಜೀವನ ಕೊಡುವಂತೆ ನಾನು ಶಾಸಕರನ್ನ ಕೇಳಿದೆ.

ನನ್ನ ಮಗನಿಗೂ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜ್​ಕುಮಾರ್ ಪಾಟೀಲ್​ಗೂ ಸಂಬಂಧವಿದೆ; ಸಂತ್ರಸ್ತ ಮಹಿಳೆಯಿಂದ ಗಂಭೀರ ಆರೋಪ
ಬಿಜೆಪಿ ಶಾಸಕ ರಾಜ್​ಕುಮಾರ್ ಪಾಟೀಲ್ ಹಾಗೂ ಮಹಿಳೆ
Follow us
TV9 Web
| Updated By: sandhya thejappa

Updated on:Feb 07, 2022 | 2:00 PM

ಬೆಂಗಳೂರು: ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜ್​ಕುಮಾರ್ ಪಾಟೀಲ್ ತೇಲ್ಕೂರು (MLA Rajkumar Patel) ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ (BJP) ಶಾಸಕ ರಾಜ್​ಕುಮಾರ್ ಒಬ್ಬ ದೊಡ್ಡ ಫ್ರಾಡ್. ನನ್ನ ಮಗನಿಗೂ ಸೇಡಂ ಶಾಸಕನಿಗೂ ಸಂಬಂಧವಿದೆ ಎಂದು ಹೇಳಿಕೆ ನೀಡಿದ ಸಂತ್ರಸ್ತ ಮಹಿಳೆ, ನನ್ನ ಮಗನಿಗೆ 14 ವರ್ಷ, ಮಗ ಅಂತ ಶಾಸಕ ರಾಜ್ಕುಮಾರ್ ಒಪ್ಪಿಕೊಳ್ಳಲಿ ಎಂದು ಒತ್ತಾಯಿಸಿದ್ದಾಳೆ. ಅಲ್ಲದೇ ಶಾಸಕರಿಂದ ನನಗೆ ಅನ್ಯಾಯವಾಗಿದೆ ಎಂದಿರುವ ಮಹಿಳೆ, ವಕೀಲ ಜಗದೀಶ್ ಸಂಪರ್ಕಿಸಿ ನ್ಯಾಯ ಕೊಡಿಸಲು ಮನವಿ ಮಾಡಿದ್ದಾಳೆ.

ಪೊಲೀಸರು ನನ್ನನ್ನ ಠಾಣೆಯಲ್ಲಿ ಕೂಡಿಹಾಕಿದ್ದರು, ಗುಹೆ ರೀತಿ ಇತ್ತು. ವಿಧಾನಸೌದ ಠಾಣೆ ಪೊಲೀಸರು ನನ್ನನ್ನ ಕೂಡಿ ಹಾಕಿದ್ದಾರೆ. ನನ್ನ ಜೀವನವನ್ನೆಲ್ಲಾ ಹಾಳು ಮಾಡಿದ. ನನಗೆ ಜೀವನ ಕೊಡುವಂತೆ ನಾನು ಶಾಸಕರನ್ನ ಕೇಳಿದೆ. ರಾತ್ರಿ 9 ಗಂಟೆ ತನಕ ಪೊಲೀಸ್ ಠಾಣೆಯಲ್ಲೇ ಇದ್ದೆ. 9 ಗಂಟೆಯಾದ ಮೇಲೆ ನನ್ನನ್ನ ಠಾಣೆಯಿಂದ ಬಿಟ್ಟಿದ್ದಾರೆ ಎಂದು ತಿಳಿಸಿದ ಸಂತ್ರಸ್ತ ಮಹಿಳೆ, ಬಿಜೆಪಿ ಶಾಸಕ ರಾಜ್​ಕುಮಾರ್ ಒಬ್ಬ ದೊಡ್ಡ ಫ್ರಾಡ್ ಎಂದು ಹೇಳಿದ್ದಾರೆ.

ನನ್ನ ಮಗನಿಗೂ ಸೇಡಂ ಶಾಸಕನಿಗೂ ಸಂಬಂಧವಿದೆ ಎಂದು ಹೇಳಿರುವ ಮಹಿಳೆ, ನನ್ನ ಮಗನಿಗೆ 14 ವರ್ಷ, ಮಗ ಅಂತ ಒಪ್ಪಿಕೊಳ್ಳಲಿ. ಠಾಣೆಯಲ್ಲಿ ವಿಜಯ್ ಅನ್ನುವವರು ನನಗೆ ಹೇಳಿದ್ರು. ಮಾಧ್ಯಮಗಳ ಮುಂದೆ ಹೋಗದಂತೆ ನನಗೆ ಹೇಳಿದ್ರು. ಸಾಹೇಬ್ರು ಹೇಳಿದ್ದಾರೆ ಎಂದು ವಿಜಯ್ ಹೇಳಿದ್ರು. ಸೆಟಲ್ಮೆಂಟ್ ಮಾಡಿಕೊಂಡಿಲ್ಲ ಅಂದರೆ ಸುಮ್ಮನೆ ಬಿಡಲ್ಲ. ಕಾಂಗ್ರೆಸ್​ನವರು ಹೀಗೆ ಮಾಡುವಂತೆ ಹೇಳಿದ್ದಾರೆ ಎಂದು ಬರೆದುಕೊಡು ಅಂತ ಪೊಲೀಸ್ ಠಾಣೆಯಲ್ಲಿ ವಿಜಯ್ ಒತ್ತಡ ಹಾಕಿದ್ರು. ನನ್ನ ಮೊಬೈಲ್​ನ ಕೂಡ ಕಸಿದುಕೊಂಡಿದ್ದಾರೆ. ನನ್ನ ಮಗುವಿಗೆ ಒಂದು ನ್ಯಾಯ ಸಿಗಲಿ ಎಂದು ಅನ್ನೋದು ಉದ್ದೇಶ ಅಂತ ಬಿಜೆಪಿ ಶಾಸಕನ ವಿರುದ್ಧ ಸಂತ್ರಸ್ತ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ವಕೀಲ ಜಗದೀಶ್, ಶಾಸಕ ರಾಜಕುಮಾರ್‌ರಿಂದ ಅನ್ಯಾಯವಾಗಿದೆ ಎಂದಿದ್ದಾಳೆ. 14 ವರ್ಷದ ಹಿಂದೆ ಅನ್ಯಾಯ ಆಗಿರುವುದಾಗಿ ಹೇಳಿದ್ದಾಳೆ. ತನ್ನ ಮಗುವಿಗೆ ನ್ಯಾಯ ಕೊಡಿಸಬೇಕು ಎಂದು ಹೇಳಿದ್ದಾಳೆ. ವಿಧಾನಸೌಧ ಪೊಲೀಸರು ಆಕೆ ಕರೆದುಕೊಂಡು ಬಂದಿದ್ದಾರೆ.  ನೈತಿಕತೆ ಇಲ್ಲದೆ ಗೂಂಡಾ ರೀತಿ ಹೋಗಿ ಕರೆತಂದಿದ್ದಾರೆ. ನಂತರ ರಾತ್ರಿ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ ಅಂತ ತಿಳಿಸಿದರು.

2 ಕೋಟಿಗೆ ಬ್ಲ್ಯಾಕ್‌ಮೇಲ್ ಆರೋಪ: ಈ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ರಾಜ್​ಕುಮಾರ್ ಪಾಟೀಲ್, ವಿಧಾನಸೌದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ 2 ಕೋಟಿ ರೂ.ಗೆ ಬ್ಲ್ಯಾಕ್‌ಮೇಲ್ ಮಾಡಿರುವ ಬಗ್ಗೆ ದೂರಿದ್ದಾರೆ. ಶಾಸಕರ ದೂರಿನ ಮೇರೆಗೆ ಮಹಿಳೆ ಮತ್ತು ಆಕೆಯ ಪತಿಯನ್ನು ವಿಚಾರಣೆ ಮಾಡಲಾಗಿದೆ.

ಕಣ್ಣೀರು ಹಾಕಿದ ಶಾಸಕ ತೇಲ್ಕೂರ್: ನನಗೆ ಬ್ಲ್ಯಾಕ್‌ಮೇಲ್ ಮಾಡಿದವರ ಬಗ್ಗೆ ಈಗ ಹೇಳುವುದಿಲ್ಲ. ಈ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದೇನೆ. ನನ್ನ ವಿರುದ್ಧ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಆ ಮಹಿಳೆ ಕೂಡ ನ್ಯಾಯಕ್ಕಾಗಿ ಹೋರಾಟವನ್ನು ಮಾಡಲಿ. ಸಾಮಾಜಿಕ ಜಾಲತಾಮದಲ್ಲಿ ಹೋರಾಟ ಮಾಡೋದು ಬಿಟ್ಟು, ಕಾನೂನು ಪ್ರಕಾರ ಹೋರಾಟ ಮಾಡಲಿ. ಇದರ ಹಿಂದೆ ವಿಪಕ್ಷದ ಕೈವಾಡದ ಬಗ್ಗೆ ಏನೂ ಹೇಳೋದಿಲ್ಲ ಅಂತ ಕಲಬುರಗಿಯಲ್ಲಿ ರಾಜ್​ಕುಮಾರ ಪಾಟೀಲ್ ತೇಲ್ಕೂರ್ ಕಣ್ಣೀರು ಹಾಕಿದ್ದಾರೆ.

ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕಂಪ್ಲೆಂಟ್ ರಿಜಿಸ್ಟರ್ ಆಗಿದೆ. ತನಿಖೆ‌ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಹೇಳಿದರು.

ಜಮೀನು ವ್ಯಾಜ್ಯದ ಇತ್ಯರ್ಥಕ್ಕಾಗಿ ಪರಿಚಯ: 2009 ರಲ್ಲಿ ರಾಜ್​ಕುಮಾರ್ ಪಾಟೀಲ್​ಗೆ ಮಹಿಳೆ ಮತ್ತು ಆಕೆಯ ಪತಿ ಪರಿಚಯ ಆಗುತ್ತಾರೆ. ಮಹಿಳೆ ಗುಲ್ಬರ್ಗದಲ್ಲಿ ಶಾಸಕರಿಗೆ ಪರಿಚಯವಾಗಿದ್ದರು. ‌ಜಮೀನು ವ್ಯಾಜ್ಯದ ಇತ್ಯರ್ಥಕ್ಕಾಗಿ ಪರಿಚಯವಾಗಿದ್ದರು. ತಮ್ಮ ಸಹಾಯ ಕೇಳಿ ಜಮೀನು ವ್ಯಾಜ್ಯ ಇತ್ಯರ್ಥಪಡಿಸಿ ಕೊಂಡಿರುತ್ತಾರೆ. ಮಹಿಳೆಯ ಮಗನಿಗೆ ಶಾಲಾ ದಾಖಲಾತಿಗೆ ಸಹಾಯ ಪಡೆದುಕೊಂಡಿರುತ್ತಾರೆ. 2018 ನಲ್ಲಿ ಫೇಸ್​ಬುಕ್ ಮೂಲಕ ಅಪರಾಧಿಕ ಉದ್ದೇಶದಿಂದ ಮಹಿಳೆ ಮಾರ್ಯದೆಗೆ ದಕ್ಕೆ ತರುವಂತ ಬೆದರಿಕೆ ಹಾಕಿರುತ್ತಾರೆ. ಮತ್ತೆ 2018 ಮಾರ್ಚ್​ನಲ್ಲಿ ಪತ್ರ ಬರೆದು ಇಲ್ಲಸಲ್ಲದ ಆರೋಪ ಮಾಡಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಕೊಡುವುದಾಗಿ ಬೆದರಿಸಿದ್ದಾರೆ ಎಂದು ತಿಳಿದುಬಂದಿದೆ.

ನನ್ನ ಮೊದಲ ಮಗು ಶಾಸಕ ತೇಲ್ಕೂರ್​ಗೆ ಜನಿಸಿದ್ದು- ಮಹಿಳೆ ಹೇಳಿಕೆ: ನನ್ನ ಮೊದಲ ಮಗು ಶಾಸಕ ತೇಲ್ಕೂರ್​ಗೆ ಜನಿಸಿದ್ದು. ನನಗೆ ಇಬ್ಬರು ಮಕ್ಕಳಿದ್ದು ಮೊದಲನೆ ಮಗು ಶಾಸಕರದ್ದು. ಆ ಮಗುವಿಗೆ ಶಾಸಕ ರಾಜಕುಮಾರ್ ಪಾಟೀಲ್ ಕಾರಣ. ಮಗುವಿಗೆ ಜೀವನಾಂಶವನ್ನ ಕೊಡಿ ಎಂದು ಕೇಳಿದ್ದೇವೆ ಅಂತ ವಿಧಾನಸೌಧ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಮೊದಲನೆಯ ಗಂಡನಿಗೆ ಡಿವೋರ್ಸ್ ನೀಡಿರುವ ಮಹಿಳೆ, 6 ವರ್ಷಗಳ ಹಿಂದೆ 2ನೇ ಮದುವೆಯಾಗಿದ್ದಾರೆ ಎನ್ನುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ

Ratha Saptami 2022: ಈ ದಿನದಂದು ಸೂರ್ಯ ದೇವನ ಪೂಜೆ ಮಾಡುವುದರಿಂದ ಏಳು ಜನ್ಮಗಳ ಪಾಪದಿಂದ ಮುಕ್ತಿ ಸಿಗುತ್ತದೆ

ಪಾಕ್ ಪರ ಟ್ವೀಟ್ ಮಾಡಿದ ಹುಂಡೈ: ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡ ನೆಟ್ಟಿಗರು

Published On - 10:32 am, Mon, 7 February 22

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್