ಬದ್ಮಾಶ್ ಹ್ಯಾಂಗೋವರ್ ಪಬ್ನಲ್ಲಿ ಕನ್ನಡ ಭಾಷೆ ಕಡೆಗಣನೆ ಆರೋಪ; ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಪಬ್‌ನ ಡಿಜೆ ಸಿದ್ಧಾರ್ಥ್
ಪಬ್‌ನ ಡಿಜೆ ಸಿದ್ಧಾರ್ಥ್ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ. ನಿನ್ನೆ ಕಾರಣಾಂತರಗಳಿಂದ ಕನ್ನಡ ಹಾಡು ಪ್ಲೇ ಮಾಡಿಲ್ಲ. ರಾತ್ರಿ 12.30ಕ್ಕೆ ಪಬ್ ಕ್ಲೋಸ್ ಮಾಡುವಂತೆ ಸೂಚಿಸಿದ್ರು. ಆ ಸಮಯದಲ್ಲಿ ಕನ್ನಡ ಹಾಡು ಪ್ಲೇ ಮಾಡಲು ಆಗಿರಲಿಲ್ಲ.
ಬೆಂಗಳೂರು: ನಗರದ ಪಬ್‌ನಲ್ಲಿ ಕನ್ನಡ ಭಾಷೆ ಕಡೆಗಣನೆ ಆರೋಪ ಕೇಳಿ ಬಂದಿದೆ. ಫೆಬ್ರವರಿ 05ರಂದು ಕೋರಮಂಗಲದ ಬದ್ಮಾಶ್ ಹ್ಯಾಂಗೋವರ್ ಪಬ್ನಲ್ಲಿ ನಡೆದ ಘಟನೆ ಸಂಬಂಧ ಸದ್ಯ ಡಿಜೆ ಸಿದ್ದಾರ್ಥ್ ಘಟನೆಗೆ ಕ್ಷಮೆಯಾಚಿಸಿದ್ದಾರೆ. ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ಡಿಜೆಯಿಂದ ಯುವತಿ, ಸೋದರನ ಮೇಲೆ ಹಲ್ಲೆಗೆ ಯತ್ನ ನಡೆದಿರುವ ಘಟನೆ ನಡೆದಿತ್ತು. ಸದ್ಯ ತಾನು ಮಾಡಿದ್ದು ತಪ್ಪು ಎಂದು ಡಿಜೆ ಸಿದ್ದಾರ್ಥ್ ಕ್ಷಮೆ ಕೇಳಿದ್ದಾರೆ.
ನಾನು ಕನ್ನಡಿಗ, ಪ್ರತಿದಿನ ಕನ್ನಡ ಹಾಡು ಪ್ಲೇ ಮಾಡುತ್ತೇನೆ ಪಬ್‌ನ ಡಿಜೆ ಸಿದ್ಧಾರ್ಥ್ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ. ನಿನ್ನೆ ಕಾರಣಾಂತರಗಳಿಂದ ಕನ್ನಡ ಹಾಡು ಪ್ಲೇ ಮಾಡಿಲ್ಲ. ರಾತ್ರಿ 12.30ಕ್ಕೆ ಪಬ್ ಕ್ಲೋಸ್ ಮಾಡುವಂತೆ ಸೂಚಿಸಿದ್ರು. ಆ ಸಮಯದಲ್ಲಿ ಕನ್ನಡ ಹಾಡು ಪ್ಲೇ ಮಾಡಲು ಆಗಿರಲಿಲ್ಲ. ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿಯೇ. ಕಾವೇರಿ ನೀರು ಕುಡಿದು ಬೆಳೆದಿದ್ದೇನೆ. ನನಗೆ ಅತಿ ಹೆಚ್ಚು ಇಷ್ಟವಾಗುವ ಭಾಷೆ ಅಂದರೆ ಕನ್ನಡ. ನಾನು ಪ್ರತಿ ಬಾರಿಯೂ ಕನ್ನಡ ಹಾಡನ್ನು ಪ್ಲೇ ಮಾಡ್ತೇನೆ.
ಪುನೀತ್ ರಾಜ್ ಕುಮಾರ್ ಎಂದರೆ ನನಗೆ ತುಂಬಾ ಇಷ್ಟ. ಬೊಂಬೆ ಹೇಳುತೈತೆ ಹಾಡನ್ನು ಪ್ರತಿ ಬಾರಿಯೂ ಪ್ಲೇ ಮಾಡ್ತೇನೆ. ನಿನ್ನೆ ತಡವಾಗಿದ್ದರಿಂದ ಕನ್ನಡ ಹಾಡು ಹಾಕಲು ಸಾಧ್ಯವಾಗಿಲ್ಲ. ಕನ್ನಡ ಹಾಡು ಪ್ಲೇ ಮಾಡದಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಆದರೆ ಸುಮಿತಾ ಹಾಗೂ ಸ್ನೇಹಿತರು ಮಾಡ್ತಿರೊ ಆರೋಪ ಸುಳ್ಳು. ಮ್ಯೂಸಿಕ್ ಸಿಸ್ಟಂ ಆಫ್ ಮಾಡಿದ ಮೇಲೆ ಕನ್ನಡ ಹಾಡು ಯಾಕೆ ಹಾಕಿಲ್ಲ ಅಂದ್ರು ಮೊದಲು ಅವರು ಕನ್ನಡ ಹಾಡು ಹಾಕಲು ಕೇಳಿಲ್ಲ. ಸಿಸ್ಟಂ ಆಫ್ ಆಗಿದ್ರಿಂದ ಮತ್ತೆ ಪ್ಲೇ ಮಾಡಲು ಕಷ್ಟ ಎಂದೆ. ಅವರು 10 ಜನ ನಿರಂತರವಾಗಿ ಬೈಯುತ್ತಲೇ ಇದ್ರು. ಕೆಟ್ಟದಾಗಿ ಬೈದಾಗ ನಾನು ಒಂದೆರಡು ಮಾತು ಬೈದಿದ್ದೇನೆ. ಡಿಜೆಗೆ ಕನ್ನಡ ಬರಲ್ಲ ಎಂದು ಅವರು ಹೇಳಿದ್ದಾರೆ. ನಾನು ಕನ್ನಡದಲ್ಲೇ ಅವರ ಹತ್ತಿರ ಮಾತಾಡಿದ್ದೇನೆ. ಸಮಯ ಬಂದಾಗ ನಾನು ಮಾಧ್ಯಮಕ್ಕೆ ಬಂದು ಮಾತಾಡ್ತೇನೆ ಎಂದು ಡಿಜೆ ಸಿದ್ದಾರ್ಥ್ ವಿಡಿಯೋ ಮಾಡಿ ತಮ್ಮ ಫೇಸ್ಬುಕ್ ಖಾತೆಯ ಮೂಲಕ ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ.
ಘಟನೆ ವಿವರ ಬರ್ತ್ ಡೇ ಸಂಭ್ರಮದಲ್ಲಿದ್ದ ಸಮಿತಾ, ಸಹೋದರ ನಂದಕಿಶೋರ್ ಮತ್ತು ಸ್ನೇಹಿತರು ಫೆಬ್ರವರಿ 05ರ ರಾತ್ರಿ ಕೋರಮಂಗಲದ ಬದ್ಮಾಶ್ ಹ್ಯಾಂಗೋವರ್ ಪಬ್ಗೆ ತೆರಳಿದ್ರು. ಆಗ ಪಬ್ ಒಳಗೆ ಡಿಜೆ ಸಿದ್ಧಾರ್ಥ್ ಬೇರೆ ಬೇರೆ ಭಾಷೆಯ ಸಾಂಗ್ ಹಾಕಿದ್ದಾನೆ. ಹೀಗಾಗಿ ಸಮಿತಾ ಮತ್ತು ಸ್ನೇಹಿತರು ಕನ್ನಡ ಹಾಡು ಹಾಕಿ ಅಂತಾ ಮನವಿ ಮಾಡಿದ್ದಾರೆ. ಆದ್ರೆ ರಾತ್ರಿ 9 ರಿಂದ 12:30ರವರೆಗೂ ಒಂದೇ ಒಂದು ಕನ್ನಡ ಸಾಂಗ್ ಪ್ಲೇ ಮಾಡಿಲ್ಲ. ‘ಯಾಕೀಗೆ ಮಾಡ್ತಿದ್ದೀರಾ’ ಕೇಳಿದ್ರೆ ಇಷ್ಟವಿಲ್ಲದಿದ್ರೆ ಹೊರಗೆ ಹೋಗಿ ಅಂತಾ ಡಿಜೆ ದರ್ಪ ಮೆರೆದಿದ್ದಾನೆ. ಅಲ್ಲದೆ, ನಂದಕಿಶೋರ್ ಸಹೋದರನ ಕಾಲರ್ ಹಿಡಿದು ಆವಾಜ್ ಹಾಕಿದ್ದಾನೆ. ಪಬ್ನಲ್ಲಿ ಕನ್ನಡ ಕಡೆಗಣನೆ ವಿಷಯ ಗೊತ್ತಾಗ್ತಿದ್ದಂತೆ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು. ‘ಬದ್ಮಾಶ್ ಹ್ಯಾಂಗೋವರ್’ ಪಬ್ ಬಳಿ ಮುಂದೆ ಕುಳಿತು ಧಿಕ್ಕಾರ ಕೂಗಿದ್ರು. ಈ ವೇಳೆ ಸ್ಥಳಕ್ಕೆ ಬಂದ ಪಬ್ ಮ್ಯಾನೇಜರ್ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ರು. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳೋದಾಗಿ ಭರವಸೆ ನೀಡಿದ್ರು.
ಇದನ್ನೂ ಓದಿ: ಕನ್ನಡ ಹಾಡು ಪ್ಲೇ ಮಾಡಿ ಎಂದಿದ್ದಕ್ಕೆ ಹಲ್ಲೆಗೆ ಮುಂದಾದ ಡಿಜೆ; ಕೋರಮಂಗಲದ ಬದ್ಮಾಶ್ ಪಬ್‌ನಲ್ಲಿ ತಡರಾತ್ರಿ ಘಟನೆ
ಏಕ್ ಪ್ಯಾರ್ ಕ ನಗ್ಮಾ ಹೈ… ಬದುಕಿನ ಹೆಜ್ಜೆಗಳಲ್ಲಿ ಕಾಡಿದ ಲತಾ ದೀದಿಯ ಹಾಡು