ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸೃಷ್ಟಿಗೆ ಕರ್ನಾಟಕದಿಂದ ಒಂದು ಟ್ರಿಲಿಯನ್ ಡಾಲರ್ ಭರವಸೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

| Updated By: Rakesh Nayak Manchi

Updated on: Aug 04, 2022 | 2:57 PM

ಆರ್ಥಿಕತೆ ಸುಧಾರಣೆಗೆ ಮೋದಿ ಸರ್ಕಾರ ಹಲವು ಕ್ರಮ ಕೈಗೊಂಡಿದ್ದು, ರಾಜ್ಯದಲ್ಲಿ ಉದ್ಯೋಗ ನೀತಿ, ವಿದ್ಯುತ್ ಚಾಲಿತ ವಾಹನ ನೀತಿ, ಕೈಗಾರಿಕಾ ನೀತಿ, ಸೆಮಿಕಂಡಕ್ಟರ್ ನೀತಿ ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸೃಷ್ಟಿಗೆ ಕರ್ನಾಟಕದಿಂದ ಒಂದು ಟ್ರಿಲಿಯನ್ ಡಾಲರ್ ಭರವಸೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಆರ್ಥಿಕತೆ ಸುಧಾರಣೆಗೆ ಮೋದಿ ಸರ್ಕಾರ ಹಲವು ಕ್ರಮ ಕೈಗೊಂಡಿದ್ದು, ರಾಜ್ಯದಲ್ಲಿ ಉದ್ಯೋಗ ನೀತಿ, ವಿದ್ಯುತ್ ಚಾಲಿತ ವಾಹನ ನೀತಿ, ಕೈಗಾರಿಕಾ ನೀತಿ, ಸೆಮಿಕಂಡಕ್ಟರ್ ನೀತಿ ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹೇಳಿದ್ದಾರೆ. ನರೇಂದ್ರ ಮೋದಿ ನೃತೃತ್ವದ ಕೇಂದ್ರ ಸರ್ಕಾರ 5 ಟ್ರಿಲಿಯನ್ ಆರ್ಥಿಕತೆ ಸೃಷ್ಟಿಯ ಗುರಿ ಹೊಂದಿದೆ. ಮೋದಿ ಅವರ ಕನಸು ನನಸು ಮಾಡಲು ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಈ ನಿಟ್ಟಿನಲ್ಲಿ ರಾಜ್ಯದಿಂದ ಒಂದು ಟ್ರಿಲಿಯನ್​ ಆರ್ಥಿಕತೆ ಸೃಷ್ಟಿಸುವ ವಿಶ್ವಾಸವಿದೆ ಎಂದರು.

ಭಾರತ ಕೈಗಾರಿಕೆಗಳ ಒಕ್ಕೂಟ (Confederation of Indian Industry – CII)ದ ಸಂಕಲ್ಪ್​ ಸೆ ಸಿದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಯಾವುದೇ ದೇಶ ಅಭಿವೃದ್ಧಿ ಆಗಲು ದೂರದೃಷ್ಟಿಯುಳ್ಳ, ದಕ್ಷತೆ, ಗಟ್ಟಿ ನಾಯಕತ್ವ ಬೇಕು. ನಮ್ಮ‌ ದೇಶಕ್ಕೆ ದೂರದೃಷ್ಟಿಯುಳ್ಳ ನಾಯಕ ಪ್ರಧಾನಿ ರೂಪದಲ್ಲಿ ಸಿಕ್ಕಿದ್ದಾರೆ. ದಕ್ಷ ನಾಯಕ ಅಮಿತ್ ಶಾ ರೂಪದಲ್ಲಿ ಸಿಕ್ಕಿದ್ದಾರೆ ಎಂದರು.

ಕೊವಿಡ್​ಗೆ ಅಂಜದೆ ಆರ್ಥಿಕ ಪ್ರಗತಿ

ಬಿಜೆಪಿ ನಾಯಕರು ಮತ್ತು ಸಚಿವ ಭೇಟಿಯ ನಂತರ ಭಾರತೀಯ ಕೈಗಾರಿಕೆಗಳ ಒಕ್ಕೂಟ ಆಯೋಜಿಸಿದ್ದ ‘ಸಂಕಲ್ಪ್​ ಸೆ ಸಿದ್ಧಿ’ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಾಲ್ಗೊಂಡು ಭಾಷಣ ಮಾಡಿ ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಕೊವಿಡ್ ಸಂಕಷ್ಟ ಪರಿಸ್ಥಿತಿ ಆವರಿಸಿದ್ದಾಗ ಲಸಿಕೆಗಳನ್ನು ಉಚಿತವಾಗಿ ಕೊಟ್ಟೆವು. ಲಸಿಕೆ ಪಡೆದವರು ಪ್ರಮಾಣ ಪತ್ರಕ್ಕಾಗಿ ಕಷ್ಟಪಡಬೇಕಾದ ಪರಿಸ್ಥಿತಿ ಇರಲಿಲ್ಲ. ಆರ್ಥಿಕ ಅಭಿವೃದ್ಧಿಗಾಗಿಯೂ ಇದೇ ಸಂದರ್ಭದಲ್ಲಿ ಹಲವು ಯೋಜನೆಗಳನ್ನು ಜಾರಿ ಮಾಡಿದೆವು. ಸ್ವಚ್ಛ ಭಾರತ್ ಮತ್ತು ಸ್ವಸ್ಥ್ ಭಾರತ್ ಅಭಿಯಾನಗಳಲ್ಲಿ ನಿರೀಕ್ಷಿತ ಫಲಿತಾಂಶ ನೀಡಿದವು. ನೇರ ನಗದು ವರ್ಗಾವಣೆ, ಜಿಎಸ್​ಟಿ, ಉಜ್ವಲಾ, ಡಿಸ್ಕಾಂ ಸೇರಿದಂತೆ ಆರ್ಥಿಕ ವ್ಯವಸ್ಥೆ ಸದೃಢಗೊಳಿಸಲು ಹಲವು ರೀತಿಯಲ್ಲಿ ಯತ್ನಿಸಿದೆವು ಎಂದು ಅಮಿತ್ ಶಾ ಹೇಳಿದರು.

ನಾವು ಎಂತಹ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತೇವೆ ಎಂಬುದನ್ನು ಕೈಗಾರಿಕೋದ್ಯಮಗಳು ಗುರುತಿಸಬೇಕು. ಸಪ್ಲೈ ಚೈನ್​ನಲ್ಲಿ ನಾಪತ್ತೆಯಾಗಿರುವ ವಸ್ತುಗಳನ್ನು ಗುರುತಿಸಿ, ಅದು ಭಾರತದಲ್ಲಿಯೇ ತಯಾರಾಗುವಂತೆ ಮಾಡುವ ಕಡೆಗೆ ಗಮನ ನೀಡಬೇಕು ಎಂದು ಶಾ ಅವರು ಸಲಹೆ ನೀಡಿದರು. ಅಲ್ಲದೆ, ಕೈಗಾರಿಕೆಗಳು ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ. ದೇಶದ ಆಶೋತ್ತರಗಳನ್ನು ಅರಿತುಕೊಂಡು ಸ್ಪಂದಿಸಬೇಕು. ದೇಶವನ್ನು ಸ್ವಾವಲಂಬಿಯಾಗಿಸಲು ಉದ್ಯಮಿಗಳು ಮುಂದೆ ಬರಬೇಕು. ರಕ್ಷಣೆ ಸೇರಿದಂತೆ ಅಗತ್ಯ ಕ್ಷೇತ್ರಗಳಿಗೆ ಆದ್ಯತೆ ಸಿಗಬೇಕು ಎಂದು ಹೇಳಿದರು.

Published On - 2:56 pm, Thu, 4 August 22