
ತುಮಕೂರು: ಇಂದು ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಸಿಎಂ ಬಿಎಸ್‌ವೈ ಕುಟುಂಬಸ್ಥರು ಮನೆ ದೇವರ ಮೊರೆಹೋಗಿದ್ದಾರೆ. ಬಿ.ಎಸ್ ಯಡಿಯೂರಪ್ಪರ ಪುತ್ರ ವಿಜಯೇಂದ್ರ ಹಾಗೂ ಪುತ್ರಿ ಅರುಣಾದೇವಿ ಕುಟುಂಬಸ್ಥರು ಸೇರಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಯಡಿಯೂರಪ್ಪನವರ ಆಡಳಿತಕ್ಕೆ ಯಾವುದೇ ಗ್ರಹಣ ದೋಷ ಉಂಟಾಗಬಾರದು ಹಾಗೂ ಗ್ರಹಣ ದೋಷ ನಿವಾರಣೆಗಾಗಿ BSY ಪುತ್ರ ವಿಜಯೇಂದ್ರ, ಪುತ್ರಿ ಅರುಣಾದೇವಿ ವಿಶೇಷ ಹೋಮ ಹವನ ಸಲ್ಲಿಸಿದ್ದಾರೆ.