220 ಕೋಟಿ ವೆಚ್ಚದ ಏರ್ಪೋರ್ಟ್ ಕಾಮಗಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಶಂಕುಸ್ಥಾಪನೆ
ಶಿವಮೊಗ್ಗ: ಸೋಗಾನೆಯಲ್ಲಿ 220 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಏರ್ಪೋರ್ಟ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಸಂಸದ ಬಿವೈ ರಾಘವೇಂದ್ರ ಇದಕ್ಕೆ ಚಾಲನೆ ನೀಡಿದ್ರು. ಹಾಗೂ ಬೆಂಗಳೂರಿನಿಂದ ಸಿಎಂ ಬಿಎಸ್ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ರು. ಬೆಂಗಳೂರಿನಿಂದಲೇ ಸಿಎಂ ಶಂಕುಸ್ಥಾಪನೆ ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದ್ದಾರೆ. ಏರ್ಪೋರ್ಟ್ ಕನಸು ನನಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಏರ್ಪೋರ್ಟ್ ಕಾಮಗಾರಿ ಮುಗಿದು ಮಲೆನಾಡಿನಲ್ಲಿ ವಿಮಾನ ಹಾರಾಟ ಶುರುವಾಗುತ್ತೆ. […]
ಶಿವಮೊಗ್ಗ: ಸೋಗಾನೆಯಲ್ಲಿ 220 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಏರ್ಪೋರ್ಟ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಸಂಸದ ಬಿವೈ ರಾಘವೇಂದ್ರ ಇದಕ್ಕೆ ಚಾಲನೆ ನೀಡಿದ್ರು. ಹಾಗೂ ಬೆಂಗಳೂರಿನಿಂದ ಸಿಎಂ ಬಿಎಸ್ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ರು.
ಬೆಂಗಳೂರಿನಿಂದಲೇ ಸಿಎಂ ಶಂಕುಸ್ಥಾಪನೆ ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದ್ದಾರೆ. ಏರ್ಪೋರ್ಟ್ ಕನಸು ನನಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಏರ್ಪೋರ್ಟ್ ಕಾಮಗಾರಿ ಮುಗಿದು ಮಲೆನಾಡಿನಲ್ಲಿ ವಿಮಾನ ಹಾರಾಟ ಶುರುವಾಗುತ್ತೆ. ಎರಡು ಹಂತದಲ್ಲಿ ಏರ್ಪೋರ್ಟ್ ಕಾಮಗಾರಿ ನಡೆಯುತ್ತೆ.
ಒಂದು ವರ್ಷದಲ್ಲಿ ಏರ್ಪೋರ್ಟ್ ಕಾಮಗಾರಿಯನ್ನ ಮುಗಿಸುವ ಗುರಿ ಹೊಂದಿದ್ದೇವೆ. ಉಡಾನ್ ಯೋಜನೆ ಅಡಿಯಲ್ಲಿ ಸೇವೆ ಆರಂಭವಾಗಲಿದೆ. ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣ ನಿಗಧಿಯಾಗುತ್ತೆ. ಮಲೆನಾಡಿನ ಪ್ರವಾಸೋದ್ಯಮ ಮತ್ತು ಕೈಗಾರಿಕೋದ್ಯಮದ ಅಭಿವೃದ್ಧಿಗೆ ಅನೂಕೂಲವಾಗಲಿದೆ ಎಂದು ಮಾತನಾಡುದ್ರು.
Published On - 11:53 am, Mon, 15 June 20