ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎನ್​. ಆರ್​. ಸಂತೋಷ್ ಹೇಳಿದ್ದೇನು?

12 ನಿದ್ರೆ ಮಾತ್ರೆ ನುಂಗಿ ಆಸ್ಪತ್ರೆ ಸೇರಿದ್ದ ಸಿ.ಎಂ ಬಿಎಸ್ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎನ್​.ಆರ್​.ಸಂತೋಷ್ ರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎನ್​. ಆರ್​. ಸಂತೋಷ್ ಹೇಳಿದ್ದೇನು?
ಎನ್​.ಆರ್​.ಸಂತೋಷ್
Updated By: ಸಾಧು ಶ್ರೀನಾಥ್​

Updated on: Nov 30, 2020 | 12:58 PM

ಬೆಂಗಳೂರು: 12 ನಿದ್ರೆ ಮಾತ್ರೆ ನುಂಗಿ ಆಸ್ಪತ್ರೆ ಸೇರಿದ್ದ ಸಿ.ಎಂ ಬಿಎಸ್ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎನ್​.ಆರ್​.ಸಂತೋಷ್ ಎಮ್.ಎಸ್. ರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ನಿನ್ನೆ ಏಕಾಏಕಿ 12 ನಿದ್ರೆ ಮಾತ್ರೆಗಳನ್ನು ನುಂಗಿ ಆಸ್ಪತ್ರೆ ಸೇರಿದ್ದ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರ. ಈ ಘಟನೆಗೆ ಕಾರಣವೇನು ಎಂದು ಪೊಲೀಸರು ತಲೆ ಕೆಡಿಸಿಕೊಂಡಿದ್ದರು. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಂತೋಷ್ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಅಜೀರ್ಣವಾಗಿದ್ದ ಹಿನ್ನೆಲೆ ಮಾತ್ರೆ ನುಂಗಿದ್ದೆ:
ಇದೊಂದು ಅಚಾತುರ್ಯದ, ಆಕಸ್ಮಿಕ ಘಟನೆ. ನನಗೆ ಯಾವುದೇ ಒತ್ತಡವಿರಲಿಲ್ಲ. ನಾನು ಆತ್ಮಹತ್ಯೆಗೆ ಯತ್ನಿಸುವಂತಹ ವ್ಯಕ್ತಿಯೂ ಅಲ್ಲ. ಉಪಚುನಾವಣೆಯ ಸೋಲಿನಿಂದ ಡಿಕೆಶಿಗೆ ಮತಿಗೆಟ್ಟಿರಬೇಕು. ಅವರು ಈ ಮೊದಲೂ ಈ ರೀತಿಯ ಹೇಳಿಕೆಗಳನ್ನ ಕೊಟ್ಟಿದ್ದರು. ನನಗೆ ಸ್ವಲ್ಪ ಅಜೀರ್ಣವಾಗಿದ್ದ ಹಿನ್ನೆಲೆ ಮಾತ್ರೆ ನುಂಗಿದ್ದೆ.

ಮಾತ್ರೆ ಬದಲಾಗಿ ನಿದ್ದೆ ಮಾತ್ರೆ ಸೇವಿಸಿಬಿಟ್ಟಿದ್ದೆ. ನನಗೆ ನಿದ್ದೆ ಬರದಿದ್ದಾಗ ನಿದ್ದೆ ಮಾತ್ರೆ ಸೇವಿಸುವ ಅಭ್ಯಾಸವಿದೆ. ಅರ್ಧ ಮಾತ್ರೆ ಸೇವಿಸುತ್ತಿದ್ದೆ, ಮೊನ್ನೆ ಇಡೀ ಮಾತ್ರೆ ಸೇವಿಸಿದ್ದೆ. ಒಂದೆರಡು ದಿನ ವಿಶ್ರಾಂತಿ ಪಡೆದು ಸಿಎಂ ಭೇಟಿಯಾಗುತ್ತೇನೆ ಎಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ N.R.ಸಂತೋಷ್ ಹೇಳಿಕೆ ನೀಡಿದ್ದಾರೆ.

Published On - 12:43 pm, Mon, 30 November 20