ಮಹಾಲಿಂಗಪುರ ಪುರಸಭೆ ನೂಕಾಟ ಪ್ರಕರಣ: BJP ಸದಸ್ಯೆ ಚಾಂದಿನಿ ನಾಯಕ್ಗೆ ಗರ್ಭಪಾತ
ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪುರಸಭೆ ಕಚೇರಿಯಲ್ಲಿ ನಡೆದಿದ್ದ ಎಳೆದಾಟ ಪ್ರಕರಣದಲ್ಲಿ ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದ ಪುರಸಭೆ ಬಿಜೆಪಿ ಸದಸ್ಯೆ ಚಾಂದಿನಿ ನಾಯಕ್ಗೆ ಗರ್ಭಪಾತವಾಗಿದೆ.
ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪುರಸಭೆ ಕಚೇರಿಯಲ್ಲಿ ನಡೆದಿದ್ದ ಎಳೆದಾಟ ಪ್ರಕರಣದಲ್ಲಿ ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದ ಪುರಸಭೆ ಬಿಜೆಪಿ ಸದಸ್ಯೆ ಚಾಂದಿನಿ ನಾಯಕ್ಗೆ ಗರ್ಭಪಾತವಾಗಿದೆ.
ಏನಿದು ಪ್ರಕರಣ? ನ.9ರಂದು ಮಹಾಲಿಂಗಪುರದ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಚಾಂದಿನಿ ಅಧ್ಯಕ್ಷರ ಆಯ್ಕೆ ವೇಳೆ ಕಾಂಗ್ರೆಸ್ನ್ನು ಬೆಂಬಲಿಸಲು ನಿರ್ಧರಿಸಿದ್ರು. ಈ ವೇಳೆ, ಚಾಂದಿನಿಯನ್ನು ಗೈರಾಗಿಸಲು ತೇರದಾಳದ ಬಿಜೆಪಿ ಶಾಸಕ ಸಿದ್ದು ಸವದಿ ಪುರಸಭೆಯಿಂದ ಹೊರ ಹೋಗುವಂತೆ ಅವರನ್ನು ನೂಕಾಡಿದ್ದರು ಎಂದು ಹೇಳಲಾಗಿದೆ. ತಳ್ಳಾಟ ನೂಕಾಟದಲ್ಲಿ ಶಾಸಕ ಸಿದ್ದು ಸವದಿ ತನ್ನನ್ನು ಮೆಟ್ಟಿಲಿನಿಂದ ಕೆಳಗೆ ತಳ್ಳಿದ್ದರು ಎಂದು ಚಾಂದಿನಿ ನಾಯಕ್ ಆರೋಪಿಸಿದ್ದಾರೆ. ಜೊತೆಗೆ, ಚಾಂದಿನಿ ಕೆಳಗೆ ಬೀಳುತ್ತಿದ್ದಂತೆ ಆಕೆಯನ್ನು ಇತರೆ ಕಾರ್ಯಕರ್ತರು ಎಳೆದಾಡಿದ್ದರು ಎಂದು ಆರೋಪಿಸಿದ್ದಾರೆ.
3 ತಿಂಗಳ ಗರ್ಭಿಣಿಯಾಗಿದ್ದ ಚಾಂದಿನಿ ಶಾಸಕರು ದೂಡಿದ್ದರಿಂದ ಕೆಳಗೆ ಬಿದ್ದಳು. ಘಟನೆಯಲ್ಲಿ ಆಕೆ ಹೊಟ್ಟೆಗೆ ಏಟು ಬಿದ್ದ ಪರಿಣಾಮ ಮಗುವಿನ ಬೆಳವಣಿಗೆ ಕುಂಠಿತವಾಯ್ತು. ಈ ಹಿನ್ನೆಲೆಯಲ್ಲಿ ಚಾಂದಿನಿ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಬಾರ್ಷನ್ ಮಾಡಿಸಿಕೊಳ್ಳಬೇಕಾಯಿತು ಎಂದು ಸದಸ್ಯೆ ಪತಿ ನಾಗೇಶ್ ನಾಯಕ್ ಟಿವಿ 9ಗೆ ಮಾಹಿತಿ ನೀಡಿದ್ದಾರೆ. ಗರ್ಭಪಾತವೇ ಸುಳ್ಳು! ಆಕೆಗೆ 6 ವರ್ಷಗಳ ಹಿಂದೆಯೇ ‘ಆಪರೇಷನ್’ ಆಗಿದೆ -ಶಾಸಕ ಸಿದ್ದು ಸವದಿ
Published On - 1:25 pm, Mon, 30 November 20