ನಂದಿಧ್ವಜ ಸ್ತಂಭಕ್ಕೆ ಪೂಜೆ ಸಲ್ಲಿಸಿ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್
ಗಣ್ಯರು ಪೂಜೆ ಸಲ್ಲಿಸುವಾಗ ನೆರದಿದ್ದ ಜನಕ್ಕೆ ಅವರೊಂದಿಗೆ ಕಾಣಿಸಿಕೊಳ್ಳುವ ತವಕ. ಹಾಗಾಗಿ, ಅಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ ಹೆಚ್ ಮುನಿಯಪ್ಪ ಮತ್ತು ಸಂಸದ ಪ್ರತಾಪ್ ಸಿಂಹಗೆ ನಂದಿಧ್ವಜ ಸ್ತಂಭದ ಬಳಿ ಹೋಗೋದು ಸಾಧ್ಯವಾಗಲ್ಲ. ಹಿರಿಯ ಮುನಿಯಪ್ಪ ಪಡುವ ಪಡಿಪಾಟಲು ಗಮನಿಸುವ ಪ್ರತಾಪ್ ಸಚಿವನಿಗೆ ಮುಂದೆ ಹೋಗಲು ದಾರಿ ಮಾಡಿಕೊಡುತ್ತಾರೆ.
ಮೈಸೂರು: ಸ್ವಲ್ಪ ಹೊತ್ತಿಗೆ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ (DK Shivakumar) ನಂದಿಧ್ವಜ ಸ್ತಂಭಕ್ಕೆ (Nandi Dhwaja Stambha) ಪೂಜೆ ಸಲ್ಲಿಸಿ ಕಾತುರದಿಂದ ನಿರೀಕ್ಷಿಸಲಾಗುತ್ತಿದ್ದ ಜಂಬೂ ಸವಾರಿಗೆ ಚಾಲನೆ ನೀಡಿದರು. ಅವರಿಬ್ಬರು ನಂದಿಧ್ಬಜ ಸ್ತಂಭದ ಬಳಿ ಆಗಮಿಸಿದಾಗ ಸಚಿವ ಸಂಪುಟದ ಕೆಲ ಸಚಿವರು ಮತ್ತು ಶಾಸಕರು ಜೊತೆಗಿದ್ದರು. ಶಿವಕುಮಾರ್ ತಲೆಯ ಮೇಲೆ ಮೈಸೂರು ಪೇಟ ಮತ್ತು ಹೆಗಲ ಮೇಲೆ ಶಾಲಿದ್ದರೆ ಸಿದ್ದರಾಮಯ್ಯ ಪೇಟ ಧರಿಸಿರಲಿಲ್ಲ ಮತ್ತು ಶಾಲನ್ನೂ ಹೊದ್ದಿರಲಿಲ್ಲ. ಗಣ್ಯರು ಪೂಜೆ ಸಲ್ಲಿಸುವಾಗ ನೆರದಿದ್ದ ಜನಕ್ಕೆ ಅವರೊಂದಿಗೆ ಕಾಣಿಸಿಕೊಳ್ಳುವ ತವಕ. ಹಾಗಾಗಿ, ಅಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ ಹೆಚ್ ಮುನಿಯಪ್ಪ ಮತ್ತು ಸಂಸದ ಪ್ರತಾಪ್ ಸಿಂಹಗೆ ನಂದಿಧ್ವಜ ಸ್ತಂಭದ ಬಳಿ ಹೋಗೋದು ಸಾಧ್ಯವಾಗಲ್ಲ. ಹಿರಿಯ ಮುನಿಯಪ್ಪ ಪಡುವ ಪಡಿಪಾಟಲು ಗಮನಿಸುವ ಪ್ರತಾಪ್ ಸಚಿವನಿಗೆ ಮುಂದೆ ಹೋಗಲು ದಾರಿ ಮಾಡಿಕೊಡುತ್ತಾರೆ. ಭೈರತಿ ಸುರೇಶ್, ಹೆಚ್ ಸಿ ಮಹಾದೇವಪ್ಪ, ತನ್ವೀರ್ ಸೇಟ್, ಶಿವರಾಜ್ ತಂಗಡಗಿ, ಪ್ರಕಾಶ್ ಹುಕ್ಕೇರಿ ಮೊದಲಾದವರನ್ನು ವಿಡಿಯೋದಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ