ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣೆಗಾಗಿ ಪಾದಯಾತ್ರೆ; ಪ್ರಧಾನಿಗೆ ಮನವಿ ಸಲ್ಲಿಸಲಿರುವ ಕಾರ್ಯಕರ್ತ
ಜಕ್ಕಳ್ಳಿ ಎಂಬ ಯುವಕ, ಹೊಸತೊಂದು ಕ್ರಾಂತಿಗೆ ಮುಂದಾಗಿದ್ದು, ಹೆಣ್ಣು ಭ್ರೂಣ ಹತ್ಯೆ ಹಾಗೂ ಅದನ್ನು ಪತ್ತೆ ಹಚ್ಚುವುದನ್ನು ತಪ್ಪಿಸಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾನೆ. ತಾಯಿಯ ಹೊಟ್ಟೆಯಲ್ಲಿರುವ ಭ್ರೂಣಕ್ಕೂ ಡಿಜಿಟಲ್ ಕೋಡ್ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.
ಗದಗ , ಅ.24: ಹೆಣ್ಣು ಭ್ರೂಣ ಹತ್ಯೆ(Fetusicide) ನಿಯಂತ್ರಣೆಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಸಾಮಾಜಿಕ ಕಾರ್ಯಕರ್ತ ಸಿಎಂ ಜಕ್ಕಲಿ ಎನ್ನುವವರು ಕನ್ಯಾಕುಮಾರಿಯಿಂದ ದೆಹಲಿಯವರಿಗೆ ಪಾದಯಾತ್ರೆ ಮೂಲಕ ಜಾಗೃತಿ ನಡೆಸಿ, ಭ್ರೂಣ ಹತ್ಯೆ ಡಿಜಿಟಲ್ ಕೋಡ್ ಅಳವಡಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಿದ್ದಾರೆ. ಇನ್ನು ಇಂದು(ಅ.24) ಗದಗ ನಗರಕ್ಕೆ ಈ ಪಾದಯಾತ್ರೆ ಆಗಮಿಸಿದ್ದು, ಗದಗ ಮಾರ್ಗವಾಗಿ ದೆಹಲಿಗೆ ಜನವರಿ 4 ಅಥವಾ 5 ರಂದು ತಲುಪಲಿದ್ದಾರೆ.
ಭ್ರೂಣಕ್ಕೂ ಡಿಜಿಟಲ್ ಕೋಡ್;ಕೇಂದ್ರ ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ
ಹೌದು, ಜಕ್ಕಳ್ಳಿ ಎಂಬ ಯುವಕ, ಹೊಸತೊಂದು ಕ್ರಾಂತಿಗೆ ಮುಂದಾಗಿದ್ದು, ಹೆಣ್ಣು ಭ್ರೂಣ ಹತ್ಯೆ ಹಾಗೂ ಅದನ್ನು ಪತ್ತೆ ಹಚ್ಚುವುದನ್ನು ತಪ್ಪಿಸಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾನೆ. ತಾಯಿಯ ಹೊಟ್ಟೆಯಲ್ಲಿರುವ ಭ್ರೂಣಕ್ಕೂ ಡಿಜಿಟಲ್ ಕೋಡ್ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.
ಇನ್ನು ಪಕ್ಕದ ರಾಜ್ಯ ಕೇರಳಕ್ಕೆ ಹೊಲಿಕೆ ಮಾಡಿಕೊಂಡು ನಮ್ಮ ರಾಜ್ಯದ ಗಂಡು-ಹೆಣ್ಣು ಸಮಪಾತವನ್ನು ಕಲೆ ಹಾಕಿದರೆ, 100 ಜನಕ್ಕೆ ಶೇಕಡ 92 ರಷ್ಟು ಮಾತ್ರ ಹೆಣ್ಣು ಮಕ್ಕಳ ಸಂಖ್ಯೆಯಿದೆ. ಈ ಮಧ್ಯೆ ಹೆಣ್ಣು ಭ್ರೂಣವನ್ನು ಪತ್ತೆ ಹಚ್ಚುವುದು ತಾಯಿಯ ಹೊಟ್ಟೆಯಲ್ಲೇ ಹತ್ಯೆ ಮಾಡುವ ಪ್ರಕರಣಗಳು ಕೂಡ ಹೆಚ್ಚಾಗಿವೆ. ಈ ಹಿನ್ನಲೆ ಗರ್ಭಧಾರಣೆ ಮಾಡಿದ ತಾಯಿಯ ಹೊಟ್ಟೆಯಲ್ಲಿರುವ ಭ್ರೂಣಕ್ಕೂ ಒಂದು ಡಿಜಿಟಲ್ ಕೋಡ್ ನೀಡಿದ್ರೆ, ಹೆಣ್ಣು ಭ್ರೂಣ ಹತ್ಯೆ ತಡೆಯಬಹುದಾಗಿದೆ ಎಂದು ಪ್ರಧಾನಿ ಮೋದಿಯವರ ಬಳಿ ಡಿಜಿಟಲ್ ಕೋಡ್ ವಿಚಾರವನ್ನು ಪ್ರಸ್ಥಾಪಿಸಲು ಕನ್ಯಾಕುಮಾರಿಯಿಂದ ದೆಹಲಿಯವರೆಗೂ ಜಕ್ಕಳ್ಳಿಯವರು ಪಾದಯಾತ್ರೆ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ಸೆಳೆಯಲು ಮುಂದಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:02 pm, Tue, 24 October 23