AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ-ಮೇಲ್ ಮೂಲಕವೂ ವಿವಾಹ ನೋಂದಣಿ ಸೇರಿದಂತೆ ಇಂದಿನ ಸಚಿವ ಸಂಪುಟದ ತೀರ್ಮಾನಗಳು

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆ ಮುಕ್ತಾಯವಾಗಿದೆ. ಬಳಿಕ  ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಚ್​ಕೆ ಪಾಟೀಲ್​, ವಿಶೇಷ ವಿವಾಹ ಕರ್ನಾಟಕ ತಿದ್ದುಪಡಿ ನಿಯಮಗಳು 2024ಕ್ಕೆ ಅನುಮೋದನೆ ನೀಡಿದ್ದು, ಈ-ಮೇಲ್ ಮೂಲಕವೂ ಕೂಡ ವಿವಾಹ ನೊಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಇಂದಿನ ಸಚಿವ ಸಂಪುಟದ ತೀರ್ಮಾನಗಳು ಹೀಗಿವೆ.

ಈ-ಮೇಲ್ ಮೂಲಕವೂ ವಿವಾಹ ನೋಂದಣಿ ಸೇರಿದಂತೆ ಇಂದಿನ ಸಚಿವ ಸಂಪುಟದ ತೀರ್ಮಾನಗಳು
ಸಚಿವ ಎಚ್ ಕೆ ಪಾಟೀಲ್
ಪ್ರಸನ್ನ ಗಾಂವ್ಕರ್​
| Edited By: |

Updated on: Feb 08, 2024 | 9:52 PM

Share

ಬೆಂಗಳೂರು, ಫೆಬ್ರವರಿ 8: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಮುಕ್ತಾಯವಾಗಿದೆ. ಬಳಿಕ  ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಚ್​ಕೆ ಪಾಟೀಲ್​, ವಿಶೇಷ ವಿವಾಹ ಕರ್ನಾಟಕ ತಿದ್ದುಪಡಿ ನಿಯಮಗಳು 2024ಕ್ಕೆ ಅನುಮೋದನೆ ನೀಡಿದ್ದು, ಈ-ಮೇಲ್ ಮೂಲಕವೂ ಕೂಡ ವಿವಾಹ ನೊಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. 45% ನಷ್ಟು ಮೇಲ್ಮಟ್ಟದ ಹುದ್ದೆಗಳು ಇನ್ನೂ ಖಾಲಿ ಇವೆ. ಅದನ್ನು ಭರ್ತಿ ಮಾಡಲು ಕ್ಯಾಬಿನೆಟ್​ನಿಂದ ತೀರ್ಮಾನ ಮಾಡಲಾಗಿದೆ. ಕೆಎಎಸ್​ (ಸೂಪರ್ ಟೈಮ್ ಸ್ಕೇಲ್) ಮತ್ತು ಕೆಎಎಸ್ (ಆಯ್ಕೆ ಶ್ರೇಣಿ) ಮುಂಬಡ್ತಿಗೆ ನಿಗದಿಪಡಿಸಿರುವ ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಕಡಿಮೆಗೊಳಿಸುವ ಸಂಬಂಧ ಕರ್ನಾಟಕ ಆಡಳಿತ ಸೇವೆಗಳು ನೇಮಕಾತಿ ತಿದ್ದುಪಡಿ ನಿಯಮಗಳು 2024ಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಬೀದರ್ ಜಿಲ್ಲೆ ಬಸವಕಲ್ಯಾಣ ನಗರದಲ್ಲಿ ನೂತನ 4 ಕೋರ್ಟ್ ಹಾಲ್​ಗಳ ನ್ಯಾಯಾಲಯ ಸಂಕೀರ್ಣವನ್ನ 17.50 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದಿಸಲಾಗಿ ಎಂದು ತಿಳಿಸಿದ್ದಾರೆ.

ಇವತ್ತು ಸಿಎಂ ಜನಸ್ಪಂದನ ಮಾಡಿದರು. ಇದರಲ್ಲಿ 25 ಸಾವಿರಕ್ಕೂ ಹೆಚ್ಚು ಜನ ಬಂದಿದ್ದರು. 12,423 ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ 3250, ವಸತಿ ಇಲಾಖೆಗೆ 1500, ಸಮಾಜ ಕಲ್ಯಾಣ ಇಲಾಖೆಗೆ 1065, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ 509 ಅರ್ಜಿಗಳು ಬಂದಿದ್ದವು. ಜನಸ್ಪಂದನ ಅತ್ಯಂತ ಪರಿಣಾಮಕಾರಿಯಾಗಿ ಫಲಶೃತಿ ನೀಡುವ ಕಾರ್ಯಕ್ರಮ ಆಗಿದೆ.

2015 ರ ವಿಧೇಯಕ ವಾಪಸ್

ಕರ್ನಾಟಕ ಕುಲಾಂತರಿ ಮತ್ತು ತಳಿ ವಿಜ್ಞಾನದ ಪ್ರಕಾರ ಮಾರ್ಪಾಟಾದ ಹತ್ತಿ ಬೀಜಗಳ ಮಾರಾಟ ಬೆಲೆಯ ನಿಗದಿ ಮತ್ತು ಪರಿಹಾರದ ಸಂದಾಯ ವಿಧೇಯಕ 2015 ನ್ನು ಇಂದಿನ ಕ್ಯಾಬಿನೆಟ್​ನಲ್ಲಿ ಹಿಂಪಡೆಯಲಾಗಿದೆ. ಕೇಂದ್ರ ಕೂಡ ಇದೇ ಮಾದರಿಯ ವಿಧೇಯಕ ಮಂಡನೆ ಮಾಡಲು ತಯಾರಿ ನಡೆಸಿದೆ. ಹೀಗಾಗಿ ಕೇಂದ್ರದ ಕೋರಿಕೆ ಮೇರೆಗೆ 2015 ರ ವಿಧೇಯಕ ವಾಪಸ್ ಪಡೆಯಲು ಕ್ಯಾಬಿನೆಟ್ ತೀರ್ಮಾನ ಮಾಡಿದೆ.

6.5 ಎಕರೆ ಜಾಗದಲ್ಲಿ ಯುನಿಟಿ ಮಾಲ್ ನಿರ್ಮಾಣ

ಒಂದು ಜಿಲ್ಲೆ ಒಂದು ಉತ್ಪನ್ನ, ಜಿಐ ಉತ್ಪನ್ನಗಳು ಹಾಗೂ ಇತರೆ ಕರಕುಶಲ ಉತ್ಪನ್ನಗಳನ್ನು ಉತ್ತೇಜಿಸಲು ರಾಜ್ಯದಲ್ಲಿ ಯುನಿಟಿ ಮಾಲ್ ಅನ್ನು ಕೇಂದ್ರ ಸರ್ಕಾರವು ನೀಡುವ 193 ಕೋಟಿ ರೂ. ಬಡ್ಡಿರಹಿತ ಸಾಲದ ನೆರವಿನೊಂದಿಗೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮೈಸೂರಿನಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರ ವ್ಯಾಪ್ತಿಯಲ್ಲಿ 6.5 ಎಕರೆ ಜಾಗದಲ್ಲಿ ಯುನಿಟಿ ಮಾಲ್ ನಿರ್ಮಾಣ ಮಾಡುತ್ತೇವೆ ಎಂದರು.

ಇದನ್ನೂ ಓದಿ: CM Janaspandana: ಸಿಎಂ ಜನಸ್ಪಂದನದಲ್ಲಿ 12372 ಅರ್ಜಿ ಸ್ವೀಕಾರ: ಯಾವ ಇಲಾಖೆಗೆ ಎಷ್ಟೆಷ್ಟು ಅರ್ಜಿ? ಇಲ್ಲಿದೆ ವಿವರ

  1. ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ 2024 ಕ್ಕೆ ಅನುಮೋದನೆ ನೀಡಲಾಗಿದೆ. ಈ ತಿದ್ದುಪಡಿಯಲ್ಲಿ ಸಹಕಾರ ಸಂಘಗಳ ಚುನಾವಣೆ ಹಾಗೂ ನಾಮನಿರ್ದೇಶನಗಳಲ್ಲಿ ಮೀಸಲಾತಿ ನೀಡಲು ವಿಧೇಯಕಕ್ಕೆ ತಿದ್ದುಪಡಿ ತರಲು ಕ್ಯಾಬಿನೆಟ್ ತೀರ್ಮಾನಿಸಿದ್ದು, ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ 2024ಕ್ಕೆ ಅನುಮೋದಿಸಲಾಗಿದೆ.
  2. ರಾಮನಗರ ತಾಲೂಕು ಬಿಡದಿ ಹೋಬಳಿಯ ಬಿಡದಿಯಲ್ಲಿ ಮಹಿಳೆಯರಿಗಾಗಿ ಪ್ರಾದೇಶಿಕ ವಾಹನ ಚಾಲನ ತರಬೇತಿ ಕೇಂದ್ರವನ್ನ ಅವೇಕ್ ಸಂಸ್ಥೆ- ರಾಜಾಜಿನಗರ ಬೆಂಗಳೂರು ಮತ್ತು ಸಾರಿಗೆ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ 10.5 ಕೋಟಿ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
  3. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಅಮರಗೋಳ ಗ್ರಾಮದ ಬ್ಲಾಕ್ ನಂಬರ್ 89 ಭಾಗ ಸಂಖ್ಯೆ 32 ರಲ್ಲಿ 39 ಗುಂಟೆ ಜಮೀನನ್ನು ಆಡಳಿತ ಕಚೇರಿ,ವಿದ್ಯಾರ್ಥಿ ನಿಲಯ, ಆಟದ ಮೈದಾನಕ್ಕಾಗಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇವರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಅನುಮೋದನೆ.
  4. 2023 24ನೇ ಸಾಲಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಮೇಲ್ವಿಚಾರಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 75,938 ಸ್ಮಾರ್ಟ್ ಫೋನ್ ಗಳನ್ನು 89.61 ಕೋಟಿಗಳ ವೆಚ್ಚದಲ್ಲಿ ಖರೀದಿಸಿ ಒದಗಿಸಲು ಆಡಳಿತಾತ್ಮಕ ಅನುಮೋದನೆ.
  5. ಜಲ್ ಜೀವನ್ ಮಿಷನ್ ಯೋಜನೆಯಡಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ದಡ್ಡಿ ಹಾಗೂ ಇತರೆ 81 ಗ್ರಾಮಗಳಿಗೆ ಮತ್ತು ಬೆಳಗಾವಿ ತಾಲೂಕಿನ ಒಂದು ಗ್ರಾಮಕ್ಕೆ 285 ಕೋಟಿ ರೂ. ಅಂದಾಜು ಮೊತ್ತದಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯನ್ನು DBOT ಆಧಾರದ ಮೇಲೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  6. ಜಲ್ ಜೀವನ್ ಮಿಷನ್ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಚ್ಚಾಪುರ ಹಾಗೂ ಇತರೆ 18 ಗ್ರಾಮಗಳಿಗೆ ಹಾಗೂ ಗೋಕಾಕ ತಾಲೂಕಿನ ಕುಂದರಗಿ ಹಾಗೂ ಇತರೆ 21 ಗ್ರಾಮಗಳಿಗೆ 92 ಕೋಟಿ ಅಂದಾಜು ಮೊತ್ತದಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯನ್ನು DBOT ಆಧಾರದ ಮೇಲೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
  7. 2023- 24ನೇ ಸಾಲಿನ ಎಸ್ ಸಿ ಪಿ ಎಸ್ ಪಿ ಕ್ರಿಯಾಯೋಜನೆಯ ಅಡಿ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ 45.28 ಕೋಟಿಗಳ ವೆಚ್ಚದಲ್ಲಿ ಟೂಲ್ ಕಿಟ್ ಗಳನ್ನು ಖರೀದಿಸಿ ವಿತರಿಸಲು ಕ್ಯಾಬಿನೆಟ್ ಅನುಮೋದನೆ. ಇದರಿಂದ ಸುಮಾರು 34,178 ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ಗಳನ್ನ ಉಚಿತವಾಗಿ ವಿತರಿಸಲು ಅನುಮೋದನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್