ಇಂದಿರಾ ಗಾಂಧಿ ಜನಪ್ರಿಯತೆ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಹೇಳಿದ ಕತೆ!
ಮನೆಯ ಗಂಡಸರೆಲ್ಲ ಜನತಾ ಪಾರ್ಟಿಗೆ ವೋಟು ಹಾಕ್ತೀವಿ ಅಂತ ಹೇಳುತ್ತಾರೆ ನೀವು ಮನೇಲಿ ಇಂದಿರಾ ಗಾಂಧಿ ಫೋಟೋ ಇಟ್ಕೊಂಡಿದ್ದೀರಲ್ಲ ಅಂತ ಸಿದ್ದರಾಮಯ್ಯ ಕೇಳಿದಾಗ ಯಾರು ಏನು ಬೇಕಾದರೂ ಹೇಳಿಕೊಳ್ಲಿ, ನಾವು ಇಂದಿರಾಗಾಂಧಿಗೆನೇ ವೋಟ್ ಹಾಕೋದು ಅಂದಿದ್ದರಂತೆ. ಅವರೇ ತಮ್ಮ ಆರಾಧ್ಯ ದೈವ ಎಂದು ಮಹಿಳೆಯರು ಹೇಳಿದ್ದರಂತೆ. ಕೊನೆಗೆ ಸಿದ್ದರಾಮಯ್ಯ ಮೂರ್ತಿ ಅವರಿಗೆ, ನಾವು ತಿಪ್ಪರಲಾಗ ಹಾಕಿದರೂ ಈ ಜನ ನಮಗೆ ವೋಟು ಹಾಕಲ್ಲ, ನಡೀರಿ ಹೋಗೋಣ ಅಂತ ಅಲ್ಲಿಂದ ಹೊರಟರಂತೆ.
ಬೆಂಗಳೂರು: ಇಂದು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಜನ್ಮ ವಾರ್ಷಿಕೋತ್ಸವ ಮತ್ತು ಭಾರತದ ಪ್ರಧಾನಿ ಇಂದಿರಾ ಗಾಂಧಿಯವರ (Indira Gandhi) ಪುಣ್ಯಸ್ಮರಣೆ. ಕೆಪಿಸಿಸಿ ಕಚೇರಿಯಲ್ಲಿ ಸರ್ದಾರ್ ಪಟೇಲ್ ಹಾಗೂ ಇಂದಿರಾ ಗಾಂಧಿ ಇಬ್ಬರನ್ನೂ ನೆನೆಯಲಾಯಿತು. ಆದರೆ ಕಾಂಗ್ರೆಸ್ ನಾಯಕರು ಎಸಗಿದ ಒಂದು ಪ್ರಮಾದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಸಮಾಧಾನಗೊಳ್ಳುವಂತೆ ಮಾಡಿತು. ಕಚೇರಿಯಲ್ಲಿ ಇಂದಿರಾಗಾಂಧಿಯವರವ ಫೋಟೋಗಳಿದ್ದವರು, ಸರ್ದಾರ್ ಪಟೇಲ್ ಅವರಿದ್ದರಲಿಲ್ಲ. ಈ ಸಂದರ್ಭದಲ್ಲಿ ಮಾತಾಡಿದ ಸಿದ್ದರಾಮಯ್ಯ ಇಂದಿರಾಗಾಂಧಿಯವರ ಜನಪ್ರಿಯತೆ ಬಗ್ಗೆ ಒಂದು ಸಂದರ್ಭ ಹೇಳಿದರು. 1978 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಜನತಾ ಪಕ್ಷದಲ್ಲಿದ್ದರಂತೆ. ಮೈಸೂರಿನ ಹಾರೋಹಳ್ಳಿಯಲ್ಲಿ ಅವರು ತಮ್ಮ ಪಕ್ಷದ ಅಭ್ಯರ್ಥಿ ರಾಜಶೇಖರ್ ಮೂರ್ತಿ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾಗ, ಆ ಊರಿನ ಎಲ್ಲ ಮನೆಗಳಲ್ಲಿ ಇಂದಿರಾಗಾಂಧಿಯರ ಪೋಟೋಗಳಿದ್ದವಂತೆ. ಮನೆಯ ಗಂಡಸರೆಲ್ಲ ಜನತಾ ಪಾರ್ಟಿಗೆ ವೋಟು ಹಾಕ್ತೀವಿ ಅಂತ ಹೇಳುತ್ತಾರೆ ನೀವು ಮನೇಲಿ ಇಂದಿರಾ ಗಾಂಧಿ ಫೋಟೋ ಇಟ್ಕೊಂಡಿದ್ದೀರಲ್ಲ ಅಂತ ಸಿದ್ದರಾಮಯ್ಯ ಕೇಳಿದಾಗ ಯಾರು ಏನು ಬೇಕಾದರೂ ಹೇಳಿಕೊಳ್ಲಿ, ನಾವು ಇಂದಿರಾಗಾಂಧಿಗೆನೇ ವೋಟ್ ಹಾಕೋದು ಅಂದಿದ್ದರಂತೆ. ಅವರೇ ತಮ್ಮ ಆರಾಧ್ಯ ದೈವ ಎಂದು ಮಹಿಳೆಯರು ಹೇಳಿದ್ದರಂತೆ. ಕೊನೆಗೆ ಸಿದ್ದರಾಮಯ್ಯ ಮೂರ್ತಿ ಅವರಿಗೆ, ನಾವು ತಿಪ್ಪರಲಾಗ ಹಾಕಿದರೂ ಈ ಜನ ನಮಗೆ ವೋಟು ಹಾಕಲ್ಲ, ನಡೀರಿ ಹೋಗೋಣ ಅಂತ ಅಲ್ಲಿಂದ ಹೊರಟರಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ