Kambala 2023: ಕರಾವಳಿ ಭಾಗದ ಜನಪ್ರೀಯ ಕ್ರೀಡೆ ಕಂಬಳ 2022-23 ಏಪ್ರಿಲ್ ವರೆಗೆ ನಿಗದಿಪಡಿಸಲಾಗಿದೆ

| Updated By: ಅಕ್ಷತಾ ವರ್ಕಾಡಿ

Updated on: Dec 17, 2022 | 12:41 PM

2022-23ರ ಕಂಬಳ ಕ್ರೀಡಾ ಕಾರ್ಯಕ್ರಮ ಇದೀಗಾಗಲೇ ಚಾಲನೆಗೊಂಡಿದ್ದು ಮುಂದಿನ ವರ್ಷ ಏಪ್ರಿಲ್ 8 ರವರೆಗೆ ಒಟ್ಟು 22 ಸ್ಪರ್ಧಾತ್ಮಕ ಕಂಬಳಗಳನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ.

Kambala 2023: ಕರಾವಳಿ ಭಾಗದ ಜನಪ್ರೀಯ ಕ್ರೀಡೆ ಕಂಬಳ 2022-23 ಏಪ್ರಿಲ್ ವರೆಗೆ ನಿಗದಿಪಡಿಸಲಾಗಿದೆ
ಸಾಂದರ್ಭಿಕ ಚಿತ್ರ
Image Credit source: DNA India
Follow us on

ಮಂಗಳೂರು: ಸುಮಾರು 700 ವರ್ಷಗಳ ಇತಿಹಾಸವಿರುವ ಕರ್ನಾಟಕದ ಕರಾವಳಿ ಭಾಗದ ಜನಪ್ರೀಯ ಕ್ರೀಡೆ ಕಂಬಳ . 2022-23ರ ಕ್ರೀಡಾ ಕಾರ್ಯಕ್ರಮ ಇದೀಗಾಗಲೇ ಚಾಲನೆಗೊಂಡಿದ್ದು ಮುಂದಿನ ವರ್ಷ ಏಪ್ರಿಲ್ 8 ರವರೆಗೆ ಒಟ್ಟು 22 ಸ್ಪರ್ಧಾತ್ಮಕ ಕಂಬಳಗಳನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ಇದು ಕರಾವಳಿ ಭಾಗದ ಭತ್ತದ ಸುಗ್ಗಿಯ ನಂತರ ಕಂಬಳ ಆಚರಣೆಯನ್ನು ವರ್ಷಂಪ್ರತಿ ಆಚರಿಸಲಾಗುತ್ತದೆ. ಏಪ್ರಿಲ್ 8, 2023 ರಂದು ಮೂಡುಬಿದಿರೆಯ ಪಣಪಿಲದಲ್ಲಿ ಕೊನೆಯ ಕಂಬಳವನ್ನು ನಿಗದಿಪಡಿಸಲಾಗಿದೆ.

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಜನಪ್ರಿಯವಾಗಿರುವ ಕಂಬಳದ ಹೊಸ ಸೀಸನ್‌ಗೆ ಈಗಾಗಲೇ ಅದ್ದೂರಿಯಾಗಿ ಚಾಲನೆ ನೀಡಲಾಗಿದೆ.  ನವೆಂಬರ್ 26 ರಂದು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಕ್ಕೆಪದವಿನಲ್ಲಿ ಈ ಋತುವಿನ ಮೊದಲ ಕಂಬಳವನ್ನು ಚಾಲನೆ ನೀಡಲಾಯಿತು. ಅರ್ಚಕ ರಾಘವೇಂದ್ರ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಇಲ್ಲಿನ ದೇಗುಲದ ಪೂಜಾರಿ ಯೋಗೀಂದ್ರ ಭಟ್ ಅವರು ದಶಮಾನೋತ್ಸವಕ್ಕೆ ಕಾಲಿಟ್ಟ ಸತ್ಯ ಧರ್ಮ ಕಂಬಳ ವನ್ನು ಉದ್ಘಾಟಿಸಿದರು.

ಇದನ್ನೂ ಓದಿ: ದಸರಾ ಆನೆ ಬಲರಾಮನಿಗೆ ಗುಂಡೇಟು; ಜಮೀನು ಮಾಲೀಕ ಅರೆಸ್ಟ್, ಸಿಂಗಲ್ ಬ್ಯಾರಲ್ ಬಂದೂಕು ಹಾಗೂ ಕಾರ್ಟರಿಡ್ಜ್​​ ವಶ

ಕಂಬಳ ಕ್ರೀಡೆಯನ್ನು ಮುಂದಿನ ಪೀಳಿಗೆಯ ವರೆಗೆ ಉಳಿಸುವಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕಂಬಳದ ಮೂಲಕ ಕರಾವಳಿಯ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದು ಮಾಜಿ ಎಂಎಲ್‌ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

ಈ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಒಟ್ಟು 22 ಸ್ಪರ್ಧಾತ್ಮಕ ಕಂಬಳಗಳನ್ನು ಮುಂದಿನ ವರ್ಷ ಏಪ್ರಿಲ್ 8 ರವರೆಗೆ 2022-23 ನೇ ಸಾಲಿನಲ್ಲಿ ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗಡೆ ಯೆರ್ಮಾಳ್ ತಿಳಿಸಿದ್ದಾರೆ. ಏಪ್ರಿಲ್ 8, 2023 ರಂದು ಮೂಡುಬಿದಿರೆಯ ಪಣಪಿಲದಲ್ಲಿ ಕೊನೆಯ ಕಂಬಳವನ್ನು ನಿಗದಿಪಡಿಸಲಾಗಿದೆ. ಮುಡಿಪು ಮತ್ತು ಪಣಪಿಲ ಬಳಿಯ ಬೋಳಂಗಲದಲ್ಲಿ ನಡೆಯಲಿರುವ ಕಾರ್ಯಕ್ರಮಗಳು ಈ ವರ್ಷದಲ್ಲಿ ಹೊಸದಾಗಿ ಸೇರ್ಪಡೆಯಾಗಿದೆ. ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಸಾರಥ್ಯದ ಮಂಗಳೂರು ಕಂಬಳದ ಆರನೇ ಆವೃತ್ತಿಯು ಜನವರಿ 22 ರಂದು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:

Published On - 12:41 pm, Sat, 17 December 22