ಮೈಸೂರು: ಎರಡೂವರೆ ಸಾವಿರ ಜನರ ಹಸಿವು ನೀಗಿಸಿದ ಕಾಲೇಜು ಯುವತಿಯರು
ಲಕ್ಷಾಂತರ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಕೆಲವರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸಾಕಷ್ಟು ಜನರು ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಮೈಸೂರಿನ ಯುವತಿಯರು ಕೂಡ ಸದ್ದಿಲ್ಲದೆ ಸುಮಾರು ಎರಡೂವರೆ ಸಾವಿರ ಕುಟುಂಬಗಳಿಗೆ ಫುಡ್ ಕಿಟ್ ನೀಡಿ ನೆರವಾಗಿದ್ದಾರೆ.
ಮೈಸೂರು: ಕೊರೊನಾ ನಿಯಂತ್ರಿಸಲು ಲಾಕ್ಡೌನ್ ಜಾರಿಯಾದ ಕಾರಣ ಬಡವರು, ನಿರ್ಗತಿಕರು ಒಂದು ಹೊತ್ತು ಊಟಕ್ಕೂ ಪರದಾಡುವಂತಾಗಿದೆ. ಹಲವರು ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅದರಂತೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯರು ಜನರ ಹಸಿವನ್ನು ನೀಗಿಸಿದ್ದಾರೆ. ಯಾವಾಗ ಲಾಕ್ಡೌನ್ ಘೋಷಣೆಯಾಯಿತು ಅಂದಿನಿಂದ ಇಂದಿನವರೆಗೆ ಕಾಲೇಜು ಯುವತಿಯರು ನಿರ್ಗತಿಕರಿಗೆ ನೆರವಾಗಿದ್ದಾರೆ. ಮೊದಲಿಗೆ ತಮ್ಮ ಕೂಡಿಟ್ಟ ಹಣದಿಂದ ಪ್ರಾರಂಭವಾದ ಇವರ ಸೇವೆ, ನಂತರ ಇತರರ ಸಹಾಯದಿಂದ ಎರಡೂವರೆ ಸಾವಿರ ಜನರ ಹಸಿವು ನೀಗಿಸಿದ್ದಾರೆ.
ಲಾಕ್ಡೌನ್ ಜಾರಿಯಾದ ದಿದದಿಂದ ದಿನಗೂಲಿಯನ್ನೆ ನಂಬಿ ಜೀವನ ನಡೆಸುತ್ತಿದ್ದ ಲಕ್ಷಾಂತರ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಕೆಲವರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸಾಕಷ್ಟು ಜನರು ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಮೈಸೂರಿನ ಯುವತಿಯರು ಕೂಡ ಸದ್ದಿಲ್ಲದೆ ಸುಮಾರು ಎರಡೂವರೆ ಸಾವಿರ ಕುಟುಂಬಗಳಿಗೆ ಫುಡ್ ಕಿಟ್ ನೀಡಿ ನೆರವಾಗಿದ್ದಾರೆ. ಮೊದಲಿಗೆ ಚೈತ್ರಾ ಎಂಬ ಕಾಲೇಜಿನ ಯುವತಿ ತನ್ನ ಅಕ್ಕನ ಜೊತೆ ಸೇರಿ ನಿರ್ಗತಿಕರಿಗೆ ಸಹಾಯ ಮಾಡುವುದಕ್ಕೆ ಮುಂದಾಗಿದ್ದಾರೆ. ತಾವು ಕೂಡಿಟ್ಟ ಹಣದಿಂದಲೆ ಸಹಾಯಕ್ಕೆ ಮುಂದಾಗಿದ್ದಾರೆ. ನಂತರ ಈ ವಿಚಾರ ತಮ್ಮ ಸ್ನೇಹಿತರಿಗೆ ತಿಳಿಸಿದ್ದಾರೆ. ಅವರು ಸಹ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬಳಗ ಅಂತ ಗ್ರೂಪ್ ಮಾಡಿದ್ದಾರೆ. ಈ ಮೂಲಕ ಕಾಲೇಜು ವಿದ್ಯಾರ್ಥಿಗಳನ್ನೆ ಸೇರಿಸಿ ಒಂದು ತಂಡ ಮಾಡಿಕೊಂಡು ಸಹಾಯ ಮಾಡಿದ್ದಾರೆ. ಇದನ್ನ ಗಮನಿಸಿದ ದಾನಿಗಳೂ ಇವರಿಗೆ ಹಣ ನೀಡಿದ್ದಾರೆ.
ಯುವತಿಯರು ಉಳ್ಳವರಿಗೆ ಸುಖಾಸುಮ್ಮನೆ ಸಹಾಯ ಮಾಡುತ್ತಿಲ್ಲ. ಮೊದಲಿಗೆ ಯಾರಿಗಾದರು ಸಹಾಯ ಮಾಡಿ ಅಂತ ಬೇರೆಯವರು ತಿಳಿಸಿದರೆ ಅವರ ಹಿನ್ನೆಲೆಯನ್ನು ಪರಿಶೀಲನೆ ಮಾಡುತ್ತಾರೆ. ಇದಕ್ಕಾಗಿ ಒಂದು ದಿನ ಮುಂಚಿತವಾಗಿಯೆ ಅವರ ಸ್ಥಿತಿಗತಿ ವಿಚಾರಿಸಿಕೊಂಡು ಬಂದು ನಂತರ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಯಾರಿಗಾದರೂ ಮತ್ತಷ್ಟು ಸಹಾಯದ ಅವಶ್ಯಕತೆ ಇದೆ ಎಂದು ಗೊತ್ತಾದರೆ ಅವರಿಗೆ ಎರಡ್ಮೂರು ಬಾರಿ ಫುಡ್ ಕಿಟ್ ವಿತರಿಸುತ್ತಿದ್ದಾರೆ. ಈ ಮೂಲಕ ಯುವತಿಯರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.
ಇದನ್ನೂ ಓದಿ
ಕನ್ನಡವನ್ನು ಕೀಳಾಗಿ ಬಿಂಬಿಸಿದ ಗೂಗಲ್ ವಿರುದ್ಧ ಕಾನೂನು ಕ್ರಮ: ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ
Kannada Language: ಕನ್ನಡಕ್ಕೆ ಅವಮಾನ; ಸಿಡಿದೆದ್ದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು
(College girls has given food to more than two thousand five hundred people at mysuru)