ಕೊವಿಡ್​ನಿಂದ ಮೃತರಾದವರ ಕುಟುಂಬಗಳಿಗೆ ಒಂದೂವರೆ ಲಕ್ಷ ಪರಿಹಾರ: ಕಂದಾಯ ಸಚಿವ ಆರ್ ಅಶೋಕ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 27, 2021 | 4:10 PM

ಕೊವಿಡ್​ನಿಂದ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ ₹ 1 ಲಕ್ಷ ಹಾಗೂ ಕೇಂದ್ರ ಸರ್ಕಾರದಿಂದ ತಲಾ ₹ 50 ಸಾವಿರ ಪರಿಹಾರ ನೀಡಲಾಗುವುದು

ಕೊವಿಡ್​ನಿಂದ ಮೃತರಾದವರ ಕುಟುಂಬಗಳಿಗೆ ಒಂದೂವರೆ ಲಕ್ಷ ಪರಿಹಾರ: ಕಂದಾಯ ಸಚಿವ ಆರ್ ಅಶೋಕ್
ಕಂದಾಯ ಸಚಿವ ಆರ್.ಅಶೋಕ್ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್
Follow us on

ಬೆಂಗಳೂರು: ಕೊವಿಡ್​ನಿಂದ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ ₹ 1 ಲಕ್ಷ ಹಾಗೂ ಕೇಂದ್ರ ಸರ್ಕಾರದಿಂದ ತಲಾ ₹ 50 ಸಾವಿರ ಪರಿಹಾರ ನೀಡಲಾಗುವುದು. ಎರಡೂ ಸೇರಿ ಪ್ರತಿ ಕುಟುಂಬಕ್ಕೆ ತಲಾ ₹ 1.50 ಲಕ್ಷ ಪರಿಹಾರ ಸಿಗಲಿದೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್​ ಹೇಳಿದರು. ಮಳೆಯಿಂದ ಮನೆಹಾನಿಯಾದಾಗ ಮುಖ್ಯಮಂತ್ರಿ ಸಭೆ ನಡೆಸಿ, ಕೂಡಲೇ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸತತ ಮಳೆಯಿಂದ ಬೆಳೆನಷ್ಟ ಅನುಭವಿಸಿದ 15.45 ಲಕ್ಷ ರೈತರ ಅಕೌಂಟ್​ಗಳಿಗೆ ಒಟ್ಟು ₹ 1,100 ಕೋಟಿ ಪರಿಹಾರ ಕೊಟ್ಟಿದ್ದೇವೆ. ಒಂದೇ ತಿಂಗಳಲ್ಲಿ ಅವರ ಖಾತೆಗೆ ಹಣ ಜಮೆ ಮಾಡಿದ್ದೆವು. ಜನವರಿಯಲ್ಲಿ 45 ಲಕ್ಷ ರೈತರ ಮನೆಬಾಗಿಲಿಗೆ ಉಚಿತವಾಗಿ ಪಹಣಿ, ಆರ್​ಟಿಸಿ ವಿತರಿಸಿದ್ದೇವೆ ಎಂದರು.

ಮುಂದಿನ ಜನವರಿಯಲ್ಲಿ 45 ಲಕ್ಷ ರೈತರಿಗೆ ಪಹಣಿ ಹಾಗೂ ಆರ್​ಟಿಸಿಯನ್ನು ಉಚಿತವಾಗಿ ರೈತರ ಮನೆಗಳಿಗೆ ವಿತರಣೆ ಮಾಡುತ್ತೇವೆ ಎಂದರು.

ಪರಿಹಾರದ ಮೊತ್ತ ಹೆಚ್ಚಿಸಲು ಜಮೀರ್ ಅಹಮದ್ ಆಗ್ರಹ
ಎಪಿಎಲ್ ಕಾರ್ಡ್​ದಾರರಿಗೂ ಪರಿಹಾರ ನೀಡಬೇಕು ಎಂದು ಜಮೀರ್ ಅಹಮದ್ ಒತ್ತಾಯಿಸಿದರು. ಕೊರೊನಾದಿಂದ ಬಲಿಯಾದ ಬಿಪಿಎಲ್ ಕಾರ್ಡ್​ದಾರರಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಈ ಪರಿಹಾರವನ್ನು ಎಪಿಎಲ್ ಕಾರ್ಡ್​ದಾರರಿಗೂ ವಿಸ್ತರಿಸಬೇಕು ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ನನ್ನ (ಚಾಮರಾಜಪೇಟೆ) ಕ್ಷೇತ್ರದಲ್ಲಿ 119 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಈಗ 69 ಕುಟುಂಬಗಳಿಗೆ ಮಾತ್ರ ಪರಿಹಾರ ಹಣ ಸಿಗುತ್ತಿದೆ. ಮೃತಪಟ್ಟ ಎಲ್ಲ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು. ಬಿಪಿಎಲ್ ಕಾರ್ಡುದಾರರಿಗೆ ಒಂದು ಲಕ್ಷ, ಎಪಿಎಲ್‌ ಕಾರ್ಡುದಾರರಿಗೆ ಐವತ್ತು ಸಾವಿರ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಎಪಿ‌ಎಲ್ ಕಾರ್ಡುದಾರರಿಗೂ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಜಮೀರ್ ಅಹ್ಮದ್ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.

ಇದನ್ನೂ ಓದಿ: ಅಮೆರಿಕದಲ್ಲಿ ಒಮಿಕ್ರಾನ್ ಹೆಚ್ಚಳ; ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ ಮಕ್ಕಳು
ಇದನ್ನೂ ಓದಿ: ಒಮಿಕ್ರಾನ್, ಕೊರೊನಾ ಭೀತಿ ನಡುವೆ ಮತ್ತೊಂದು ಆತಂಕ; ಕಣ್ಣು ಬಿಡುವ ಮುನ್ನವೇ ಉಸಿರು ಚೆಲ್ಲುತಿವೆ ನವಜಾತ ಶಿಶುಗಳು