ಹೆಚ್ಚುತ್ತಿರುವ ಕೊರೊನಾ ಸೋಂಕು; ಕೊಡಗು ಜಿಲ್ಲೆಯಲ್ಲಿ ಮತ್ತಷ್ಟು ಕಠಿಣ ನಿಯಮ ಜಾರಿಗೊಳಿಸಿದ ಜಿಲ್ಲಾಧಿಕಾರಿ
ಈ ಹೊಸ ನಿಯಮದ ಅನ್ವಯ ಕೊಡಗು ಜಿಲ್ಲೆಯಲ್ಲಿ ವಾರದಲ್ಲಿ ಐದು ದಿನ ಸಂಪೂರ್ಣ ಲಾಕ್ಡೌನ್ ಇರುತ್ತದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುತ್ತದೆ.
ಕೊಡಗು: ಕೊರೊನಾ ಸೋಂಕಿನ ಪ್ರಮಾಣ ಉಲ್ಬಣಗೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ವಹಿಸಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ದಿನೇದಿನೆ ಕೊವಿಡ್ 19 ಕೇಸ್ಗಳು ಹೆಚ್ಚೆಚ್ಚು ದಾಖಲಾಗುತ್ತಿರುವುದರಿಂದ ಸಂಪೂರ್ಣ ಲಾಕ್ಡೌನ್ ಮಾಡಿ ಜಿಲ್ಲಾಧಿಕಾರಿ ಚಾರುಲತಾ ಆದೇಶ ಹೊರಡಿಸಿದ್ದಾರೆ.
ಈ ಹೊಸ ನಿಯಮದ ಅನ್ವಯ ಕೊಡಗು ಜಿಲ್ಲೆಯಲ್ಲಿ ವಾರದಲ್ಲಿ ಐದು ದಿನ ಸಂಪೂರ್ಣ ಲಾಕ್ಡೌನ್ ಇರುತ್ತದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುತ್ತದೆ. ಉಳಿದದಿನ ಹಾಲು-ತರಕಾರಿಗಳನ್ನು ಬೆಳಗ್ಗೆ 6ರಿಂದ 10 ಗಂಟೆ ಒಳಗೆ ಖರೀದಿ ಮಾಡಬೇಕಾಗಿದೆ. ಉಳಿದಂತೆ ಮಂಗಳವಾರ ಮತ್ತು ಶುಕ್ರವಾರ ಹೊರತು ಪಡಿಸಿ ಇನ್ಯಾವುದೇ ದಿನ ಯಾವ ಮಳಿಗೆಯನ್ನೂ ತೆರೆಯುವಂತಿಲ್ಲ.
ಸಚಿವ ಸೋಮಣ್ಣನವರೊಂದಿಗೆ ಸಭೆ ಇಂದು ಕೊಡಗು ಉಸ್ತುವಾರಿ ಸಚಿವ ಸೋಮಣ್ಣನವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಡಿಸಿ ಚಾರುಲತಾ ಈ ಆದೇಶ ಹೊರಡಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ವಿ.ಸೋಮಣ್ಣ, ಆಮ್ಲಜನಕದ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಿ. ಜಿಲ್ಲೆಯ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಆಮ್ಲಜನಕದ ದಾಸ್ತಾನು ಸಾಕಷ್ಟು ಇರಲಿ. ಆಗಾಗ ಪರಿಶೀಲಿಸಿ ವರದಿ ನೀಡುತ್ತಿರಿ. ಬರೀ ಆಕ್ಸಿಜನ್ ಅಷ್ಟೇ ಅಲ್ಲ, ಲಸಿಕೆ, ಔಷಧಿಗಳ ಬಗ್ಗೆಯೂ ನಿಗಾ ಇರಲಿ ಎಂದು ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಪತ್ನಿ ಮೃತದೇಹವನ್ನು ಭುಜದ ಮೇಲೆ ಹೊತ್ತು 3 ಕಿ.ಮೀ ನಡೆದುಕೊಂಡು ಹೋದ ಪತಿ!
ಮತ್ತೆ ಹಳ್ಳಿ ಹೈದನಾಗೋಕೆ ರವಿಚಂದ್ರನ್ ರೆಡಿ; ಆದರೆ ಸಿನಿಮಾ ಶುರುವಾಗೋಕೆ ಎದುರಾಯ್ತು ವಿಘ್ನ