ಮತ್ತೆ ಹಳ್ಳಿ ಹೈದನಾಗೋಕೆ ರವಿಚಂದ್ರನ್​ ರೆಡಿ; ಆದರೆ ಸಿನಿಮಾ ಶುರುವಾಗೋಕೆ ಎದುರಾಯ್ತು ವಿಘ್ನ

ಏಪ್ರಿಲ್​ ಅಥವಾ ಮೇ ತಿಂಗಳಲ್ಲಿ ಸಿನಿಮಾ ಶೂಟಿಂಗ್​ ಆರಂಭಿಸುವ ಆಲೋಚನೆ ಮಹೇಂದ್ರ ಅವರದ್ದಾಗಿತ್ತು. ಆದರೆ, ಕೊರೊನಾ ವೈರಸ್​ ಎರಡನೇ ಅಲೆ ದೇಶಾದ್ಯಂತ ಹಬ್ಬುತ್ತಿದೆ. ಹೀಗಾಗಿ ಸಿನಿಮಾ ಕೆಲಸಕ್ಕೆ ಬ್ರೇಕ್​ ಬಿದ್ದಿದೆ.

  • TV9 Web Team
  • Published On - 19:48 PM, 3 May 2021
ಮತ್ತೆ ಹಳ್ಳಿ ಹೈದನಾಗೋಕೆ ರವಿಚಂದ್ರನ್​ ರೆಡಿ; ಆದರೆ ಸಿನಿಮಾ ಶುರುವಾಗೋಕೆ ಎದುರಾಯ್ತು ವಿಘ್ನ
ವಿ. ರವಿಚಂದ್ರನ್​

ಸ್ಯಾಂಡಲ್​ವುಡ್​ನಲ್ಲಿ ಭಿನ್ನ ಚಿತ್ರಗಳನ್ನು ನಿರ್ಮಾಣ ಮಾಡಿ ನಟಿಸಿದ ಖ್ಯಾತಿ ರವಿಚಂದ್ರನ್​ ಅವರಿಗಿದೆ. ಪುಟ್ನಂಜ, ಹಳ್ಳಿ ಮೇಷ್ಟ್ರು, ಅಣ್ಣಯ್ಯ, ರಾಮಾಚಾರಿ, ಸಿಪಾಯಿ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹಳ್ಳಿ ಹಿನ್ನೆಲೆಯಲ್ಲಿ ಮೂಡಿ ಬಂದ ಈ ಚಿತ್ರಗಳು ಸೂಪರ್​ ಹಿಟ್​ ಆಗಿದ್ದವು. ನಂತರ ರವಿಚಂದ್ರನ್​ ಆ ಶೈಲಿಯ ಸಿನಿಮಾಗಳಿಂದ ದೂರವೇ ಉಳಿದುಕೊಂಡರು. ಈಗ ಅವರು ಮತ್ತೆ ಅದೇ ಮಾದರಿಯ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ.

ಎಸ್​. ಮಹೇಂದ್ರ ಅವರು ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರವಿಚಂದ್ರನ್​ ಹೀರೋ. ಈ ಸಿನಿಮಾದ ಕಥೆ ಹಳ್ಳಿ ಹಿನ್ನೆಲೆಯಲ್ಲಿ ಸಾಗಲಿದೆಯಂತೆ. ಈ ಮೂಲಕ ರವಿಚಂದ್ರನ್​ ಮತ್ತೆ ಹಳ್ಳಿ ಹೈದನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರ ಸದ್ಯ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಏಪ್ರಿಲ್​ ಅಥವಾ ಮೇ ತಿಂಗಳಲ್ಲಿ ಸಿನಿಮಾ ಶೂಟಿಂಗ್​ ಆರಂಭಿಸುವ ಆಲೋಚನೆ ಮಹೇಂದ್ರ ಅವರದ್ದಾಗಿತ್ತು. ಆದರೆ, ಕೊರೊನಾ ವೈರಸ್​ ಎರಡನೇ ಅಲೆ ದೇಶಾದ್ಯಂತ ಹಬ್ಬುತ್ತಿದೆ. ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೊರೊನಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರಿಂದಾಗಿ, ಸಿನಿಮಾ ಕೆಲಸ ನಿಲ್ಲಿಸಲಾಗಿದೆ. ಹೀಗಾಗಿ ಈ ಸಿನಿಮಾ ಶೂಟಿಂಗ್​ ಮುಂದೂಡಲ್ಪಟ್ಟಿದೆ.

ಮಲಯಾಳಂನಲ್ಲಿ ತೆರೆಕಂಡಿದ್ದ ದೃಶ್ಯಂ ಸಿನಿಮಾ ಕನ್ನಡಕ್ಕೆ ರಿಮೇಕ್​ ಆಗಿತ್ತು. ರಾಜೇಂದ್ರ ಪೊನ್ನಪ್ಪ ಆಗಿ ರವಿಚಂದ್ರನ್​ ಕಾಣಿಸಿಕೊಂಡಿದ್ದರು. ಈಗ ದೃಶ್ಯಂ 2 ಕೂಡ ಕನ್ನಡಕ್ಕೆ ರಿಮೇಕ್​ ಆಗುತ್ತಿದೆ. ರವಿಚಂದ್ರನ್​ ಇದರಲ್ಲಿ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರವಿಚಂದ್ರನ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಭಿನ್ನ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗಿದೆ. ಆದರೆ ಸೋಶಿಯಲ್​ ಮೀಡಿಯಾ ಕಡೆಗೆ ರವಿಚಂದ್ರನ್​ ತಲೆ ಹಾಕಿರಲಿಲ್ಲ. ಏ.13ರಂದು ಯುಗಾದಿ ಹಬ್ಬದ ಪ್ರಯುಕ್ತ ಅವರು ಸೋಶಿಯಲ್​ ಮೀಡಿಯಾ ಖಾತೆಗಳನ್ನು ತೆರೆದಿದ್ದರು.

ಇದನ್ನೂ ಓದಿ: Ravichandran: ರವಿಚಂದ್ರನ್​ ಸಿಗರೇಟ್​ ಸೇದ್ತಾರಾ? ಸೋಶಿಯಲ್​ ಮೀಡಿಯಾಗೆ ಬಂದು ಸತ್ಯ ಬಹಿರಂಗಪಡಿಸಿದ ಕ್ರೇಜಿ ಸ್ಟಾರ್​!

‘ದೃಶ್ಯ 2’ ಮಾಡೋಕೆ ರವಿಚಂದ್ರನ್​ ರೆಡಿ! ಯುಗಾದಿ ಹಬ್ಬದ ದಿನವೇ ‘ಕ್ರೇಜಿ ಸ್ಟಾರ್​’ ಅಭಿಮಾನಿಗಳಿಗೆ ಸಿಹಿ ಸುದ್ದಿ