ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ಜತೆ ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ವಿಡಿಯೊ ಸಂವಾದ ನಡೆಸಿದ್ದಾರೆ. ಈ ಸಂವಾದದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ರಾಜ್ಯದಲ್ಲಿ 14 ದಿನಗಳ ಕಾಲ ಬಿಗಿಕ್ರಮ ಜಾರಿ ಹಿನ್ನೆಲೆಯಲ್ಲಿ ಕೆಪಿಸಿಸಿಯಿಂದ ಏನು ಕೆಲಸಗಳಾಗಬೇಕೆಂಬುದರ ಬಗ್ಗೆ ಇಲ್ಲಿ ಮಾತುಕತೆ ನಡೆದಿದ್ದು, ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಅದೇ ವೇಳೆ ಶವಸಂಸ್ಕಾರಕ್ಕೆ ವಾಹನ ,ಕಟ್ಟಿಗೆ ಸೇರಿ ಅಗತ್ಯ ನೆರವು ಒದಗಿಸುವುದು, ಸಾಧ್ಯವಾದ ಕಡೆ ಬಡವರಿಗೆ ಉಚಿತವಾಗಿ ಆಹಾರ ವಿತರಣೆ ಮಾಡಲಾಗುವುದು. ಇದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸೇವಾದಳದ ಕಾರ್ಯಕರ್ತರ ಬಳಕೆ ಮಾಡಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸುರ್ಜೇವಾಲ ವಿಡಿಯೊ ಸಂವದ ನಡೆಸಿದ ನಂತರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ, ನಮಗೆ ಮತ್ತು ಕಾರ್ಯಕರ್ತರಿಗೆ ಸುರ್ಜೇವಾಲ ಸಲಹೆ ನೀಡಿದ್ದಾರೆ. ಕೊವಿಡ್ ವಿರುದ್ಧ ಹೋರಾಟದ ಹೊತ್ತಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲು ಸಲಹೆ ನೀಡಿದ್ದಾರೆ. ಅದೇ ವೇಳೆ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಬೇಕು. ಮುಂಚೂಣಿ ಘಟಕಗಳ ಸಹಕಾರದಿಂದ ಕೆಲಸ ಮಾಡಬೇಕು. ಜಿಲ್ಲಾ ಮಟ್ಟದಲ್ಲೂ ಕೂಡ ಸಹಾಯವಾಣಿ ಆರಂಭಿಸಬೇಕು. ಆಕ್ಸಿಜನ್, ಆಂಬುಲೆನ್ಸ್, ಔಷಧ, ಸೋಂಕಿತರಿಗೆ ಬೆಡ್ ವ್ಯವಸ್ಥೆ ಮಾಡಬೇಕು. ಕೆಪಿಸಿಸಿಯಲ್ಲಿರುವ ವೈದ್ಯರ ಪಟ್ಟಿ ಮಾಡಬೇಕು ಎಂದಿದ್ದಾರೆ.
ಅಷ್ಟೇ ಅಲ್ಲದೆ ಬ್ಲಡ್ ಟೆಸ್ಟ್ ಮಾಡುವ ಕೇಂದ್ರ ತೆರೆಯಲು ಅವರು ಸೂಚಿಸಿದ್ದಾರೆ. ಕಟ್ಟಡ ಕಾರ್ಮಿಕರಿಗೆ ಕೆಲಸಕ್ಕೆ ಸರ್ಕಾರ ಅವಕಾಶ ಕೊಟ್ಟಿದೆ. ಆದರೆ ಬೆಂಗಳೂರು ಸಹವಾಸ ಬೇಡ ಎಂದು ಹೊರಟಿದ್ದಾರೆ. ಗಂಟು ಮೂಟೆ ಸಮೇತ ಜನರು ಬೆಂಗಳೂರಿಂದ ಹೊರಟಿದ್ದಾರೆ. ಐಸೋಲೇಷನ್ನಲ್ಲಿ ಇರುವವರಿಗೆ ಆಹಾರ ವಿತರಿಸಬೇಕು. ಗುಂಪು ಸೇರುವ ಕಡೆ ಕಾಂಗ್ರೆಸ್ ಚಿಹ್ನೆ ಇರುವ ಮಾಸ್ಕ್ ನೀಡಿ. ಕೊರೊನಾದಿಂದ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಎಂದಿದ್ದಾರೆ.
ಕೊರೊನಾ ಲಸಿಕೆ ಬಗ್ಗೆ ಗೊಂದಲ ಬೇಡ, 18 ವರ್ಷ ಮೇಲ್ಪಟ್ಟವರು ಕೂಡಾ 2 ಡೋಸ್ ಲಸಿಕೆ ಪಡೆಯಬೇಕು: ಆರೋಗ್ಯ ಸಚಿವ ಸುಧಾಕರ್
ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಲಸಿಕೆ ನೀಡುವತ್ತ ಸರಕಾರ ಮುಂದಾಗಿದೆ. ರಾಜ್ಯದಲ್ಲಿ ಕೊವಿಡ್ ಲಸಿಕೆ ಕೊರತೆ ಇಲ್ಲ. 18 ವರ್ಷ ಮೇಲ್ಪಟ್ಟವರು ಕೂಡಾ 2 ಡೋಸ್ ಲಸಿಕೆ ಪಡೆಯಬೇಕು. ಎಲ್ಲರಿಗೂ ಕೊವಿಡ್ ಲಸಿಕೆ ನೀಡುವುದನ್ನು ಮುಂದುವರಿಸುತ್ತೇವೆ ಯಾರಿಗೂ ಈ ಬಗ್ಗೆ ಗೊಂದಲ ಬೇಡ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಲಸಿಕೆ ಒಂದೇ ನಮ್ಮ ಜನರನ್ನು ಕಾಪಾಡಲು ಸಾಧ್ಯ. ಕೊರೊನಾ 3ನೇ ಅಲೆಯನ್ನು ತಡೆಯಬೆಕಾದರೆ ಲಸಿಕೆ ಪಡೆಯಬೇಕು. ಕಡ್ಡಾಯವಾಗಿ 2 ಡೋಸ್ ಲಸಿಕೆಯನ್ನು ಪಡೆಯಿರಿ ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೊವಿಡ್ ಹಿನ್ನೆಲೆಯಲ್ಲಿ ಕೋಲಾರಕ್ಕೆ 40 ವೆಂಟಿಲೇಟರ್‌ಗಳನ್ನು ನೀಡಲಾಗಿತ್ತು. ಅದರಲ್ಲಿ 20 ವೆಂಟಿಲೇಟರ್‌ಗಳನ್ನು ಮಾತ್ರ ಬಳಸುತ್ತಿದ್ದರು. ಇನ್ನುಳಿದ ವೆಂಟಿಲೇಟರ್ ಬಳಸದಿರುವುದು ಗಮನಕ್ಕೆ ಬಂತು. ಈ ನಿಟ್ಟಿನಲ್ಲಿ ಕೋಲಾರದ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಈ ಕುರಿತಾಗಿ ಕೋಲಾರ ಜಿಲ್ಲಾ ಸರ್ಜನ್, ಆರ್‌ಎಂಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Siddu Supporters : ಸಿದ್ದರಾಮಯ್ಯ ಅಭಿಮಾನಿಗಳಿಂದ ಇಂದಿರಾ ಕ್ಯಾಂಟೀನ್ ಬಳಿ ಮಾಸ್ಕ್, ಊಟ ವಿತರಣೆ