ಕೊರೊನಾ ಸಂಕಷ್ಟ: ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಬಿಲ್ ಕಟ್ಟಲು ಆಗದೇ ಪತಿಯ ಮೃತದೇಹ ಬಿಟ್ಟು ಹೋದ ಮಹಿಳೆ
Coronavirus: ಆಸ್ಪತ್ರೆಯ ಬಿಲ್ 4 ಲಕ್ಷ ಆಗಿತ್ತು. ನಾಲ್ಕು ಲಕ್ಷ ಮಹಿಳೆಯ ಬಳಿ ಇರಲಿಲ್ಲ ಹಾಗಾಗಿ 4 ಲಕ್ಷ ಹಣ ಇಲ್ಲ ನೀವೆ ಅಂತ್ಯ ಸಂಸ್ಕಾರ ಮಾಡಿ ಎಂದು ಮಹಿಳೆ ತನ್ನ ಪತಿಯ ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಬಂದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮೃತದೇಹ ಆಸ್ಪತ್ರೆಯಲ್ಲಿಯೇ ಇದೆ.
ಬೆಂಗಳೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ಬಿಲ್ ಪಾವತಿ ಮಾಡಲು ಸಾಧ್ಯವಾಗದೇ ಮಹಿಳೆಯೊಬ್ಬರು ತನ್ನ ಪತಿಯ ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋದ ಘಟನೆ ನಡೆದಿದೆ. ಆಸ್ಪತ್ರೆಯ ಬಿಲ್ ಕಟ್ಟಿಲ್ಲ ಹಾಗಾಗಿ ಮೃತದೇಹ ನೀಡಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಹೇಳಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಆಸ್ಪತ್ರೆಯ ಬಿಲ್ 4 ಲಕ್ಷ ಆಗಿತ್ತು. ನಾಲ್ಕು ಲಕ್ಷ ಮಹಿಳೆಯ ಬಳಿ ಇರಲಿಲ್ಲ ಹಾಗಾಗಿ 4 ಲಕ್ಷ ಹಣ ಇಲ್ಲ ನೀವೆ ಅಂತ್ಯ ಸಂಸ್ಕಾರ ಮಾಡಿ ಎಂದು ಮಹಿಳೆ ತನ್ನ ಪತಿಯ ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಬಂದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮೃತದೇಹ ಆಸ್ಪತ್ರೆಯಲ್ಲಿಯೇ ಇದೆ.
ಮೃತರ ಮಗಳು ಹೇಳಿದ್ದೇನು? ನನ್ನ ತಂದೆಗೆ 4 ದಿನಗಳಿಂದ ಹುಷಾರು ಇರಲಿಲ್ಲ. ಸ್ವಲ್ಪ ಜ್ವರ ಕೆಮ್ಮು ಇತ್ತು ನಂತರ ಕೊರೊನಾ ಪರೀಕ್ಷೆ ನಡೆಸಿದೆವು. ಕೊರೊನಾ ಪಾಸಿಟಿವ್ ಬಂತು, ಬಿಬಿಎಂಪಿಯವರಿಗೆ ಕರೆ ಮಾಡಿದೆವು. ಬಿಬಿಎಂಪಿ ಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಾವು ಮೊದಲು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಹೋದೆವು. 1 ಗಂಟೆಯ ನಂತರ ಕಣ್ವ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಿದರು. ಮೊದಲಿಗೆ 50 ಸಾವಿರ ಮುಂಗಡ ಹಣ ಕೊಡಿ ಅಂದರು. ನಮ್ಮ ಬಳಿ ಹಣ ಅಷ್ಟು ಹಣ ಇರಲಿಲ್ಲ, 20 ಸಾವಿರ ಪಾವತಿ ಮಾಡಿದೆವು. ಕಣ್ವ ಆಸ್ಪತ್ರೆಯಲ್ಲಿ ಯಾವುದೇ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಈ ಆಸ್ಪತ್ರೆಯಲ್ಲಿ ಇದ್ರೆ ನಾನು ಸಾಯುತ್ತೇನೆ. ಬೇರೆ ಆಸ್ಪತ್ರೆಗೆ ಸೇರಿಸು ಎಂದು ವಿಡಿಯೋ ಕಾಲ್ನಲ್ಲಿ ಅಪ್ಪ ಹೇಳಿದ್ದರು.
ಮೊದಲಿಗೆ ಸೋಂಕಿನಿಂದ ಶೇ 30ರಷ್ಟು ಗುಣಮುಖ ಆಗಿದ್ದಾರೆ ಅಂದಿದ್ದರು ಆಸ್ಪತ್ರೆಯವರು. ಆದಾಗಿ ಎರಡು ದಿನಗಳ ನಂತರ ಮೃತ ಪಟ್ಟರು ಎಂದು ಮೃತರ ಮಗಳು ಹೇಳಿದ್ದಾರೆ.
ವೆಂಟಿಲೇಟರ್, ಬೆಡ್ಗಳಿಗೆ ಪರದಾಟ ಕರ್ನಾಟಕದಲ್ಲಿ ವೆಂಟಿಲೇಟರ್, ಬೆಡ್ಗಳ ಸಮಸ್ಯೆ ಹೆಚ್ಚಿದೆ. ಅನೇಕ ಕಡೆ ಇವುಗಳ ಸಮಸ್ಯೆಯಿಂದಲೇ ಸೋಂಕಿತರು ನರಳಿ ನರಳಿ ಸಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದು ಕಡೆ ವೆಂಟಿಲೇಟರ್, ಬೆಡ್ ಸಿಗದೆ ಸೋಂಕಿತೆ ನರಳಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕೆಂಪೇಗೌಡ ನಗರದಲ್ಲಿ ನಡೆದಿದೆ.
ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಿನ್ನೆ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದರಿಂದ ನಿನ್ನೆ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಹಲವು ಸರ್ಕಾರಿ, ಖಾಸಗಿ ಆಸ್ಪತ್ರೆಗಳನ್ನು ಸುತ್ತಾಡಿದ್ದಾರೆ. ಆದ್ರೆ ಎಲ್ಲೂ ಅವರಿಗೆ ಬೆಡ್ ಸಿಕ್ಕಿಲ್ಲ. ಹೀಗಾಗಿ ಅಲೆದು ಅಲೆದು ಕಂಗಾಲಾಗಿ ಮನೆಗೆ ವಾಪಸಾಗಿದ್ದಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಹಿನ್ನೆಲೆಯಲ್ಲಿ ಮನೆಯಲ್ಲೇ ಕೊರೊನಾ ಸೋಂಕಿತ ಮಹಿಳೆ ಉಳಿದುಕೊಂಡಿದ್ದಾರೆ. ಸೋಂಕಿತೆ ಇರುವ ಮನೆಯಲ್ಲಿ ನಾಲ್ವರು ಕುಟುಂಬ ಸದಸ್ಯರಿದ್ದಾರೆ. ಹೀಗಾಗಿ ಆತಂಕ ಹೆಚ್ಚಿದ್ದು ಅವರಿಗೂ ಕೊರೊನಾ ತಗುಲುವ ಸಾಧ್ಯತೆ ಇದೆ.
ಇನ್ನು ಈ ಬಗ್ಗೆ ತಿಳಿಸಲು ಅಧಿಕಾರಿಗಳಿಗೆ ಕರೆ ಮಾಡಿದ್ರೆ ಯಾರೂ ಕೂಡ ಸ್ಪಂದಿಸುತ್ತಿಲ್ಲ. ದಿನೇ ದಿನೇ ಮಹಿಳೆ ಸ್ಥಿತಿ ಹಾಳಾಗುತ್ತಿದೆ. ಯಾವುದೇ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆ ಕುಟುಂಬಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 29,744 ಮಂದಿಗೆ ಕೊರೊನಾ ಸೋಂಕು, 201 ಜನರ ಸಾವು
(Unable to pay bill for Private Hospital in Bangalore Woman left her Husband’s Dead Body )