ಮತಗಳ್ಳತನದ ವಿರುದ್ಧ ಕಾಂಗ್ರೆಸ್​ ಅಭಿಯಾನ: ಸಹಿ ಸಂಗ್ರಹ, ಆರ್​​ ಅಶೋಕ್ ತಿರುಗೇಟು

Updated on: Nov 08, 2025 | 9:08 PM

ಕರ್ನಾಟಕ ಕಾಂಗ್ರೆಸ್ ಮತಗಳ್ಳತನದ ವಿರುದ್ಧ ವ್ಯಾಪಕ ಅಭಿಯಾನ ನಡೆಸುತ್ತಿದೆ. ರಾಹುಲ್ ಗಾಂಧಿ ಆರೋಪಗಳ ಬೆನ್ನಲ್ಲೇ, ರಾಜ್ಯ ನಾಯಕರು ಸಹಿ ಸಂಗ್ರಹಿಸಿ ನವೆಂಬರ್ 25ರಂದು ದೆಹಲಿಯಲ್ಲಿ ಬೃಹತ್ ಸಮಾವೇಶಕ್ಕೆ ಸಜ್ಜಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದಿದ್ದಾರೆ.

ಬೆಂಗಳೂರು, ನವೆಂಬರ್​​ 08: ವೋಟ್ ಚೋರಿ (Vote Chori) ವಿರುದ್ಧ ಸಹಿ ಸಂಗ್ರಹ ನಡೆಸಿದ್ದ ಕಾಂಗ್ರೆಸ್​ಗೆ ಉತ್ತಮ‌ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಸಿದ ಅಭಿಯಾನದಲ್ಲಿ‌ ಮತದಾರರು ಭಾಗಿಯಾಗಿದ್ದು, ದಾಖಲೆ ಮಟ್ಟದಲ್ಲಿ ಸಹಿ ಸಂಗ್ರಹವಾಗಿದೆ. ರಾಜ್ಯದಲ್ಲಿ ಸಂಗ್ರಹವಾದ ಸಾಮಾನ್ಯಜನರ ಸಹಿ ಈಗ ದೆಹಲಿಗೆ ತಲುಪಿಸಲು ಕಾಂಗ್ರೆಸ್ ಮುಂದಾಗಿದೆ. ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಿಎಂ, ಡಿಸಿಎಂ ಬಿಜೆಪಿಯು ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದಿದೆ. ಚುನಾವಣಾ ಆಯೋಗ ಈ ಬಗ್ಗೆ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.