ಬಿಜೆಪಿ ಮುಖಂಡನಿಗೆ ಮಸಿ ಬಳಿದರೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ ಕಾಂಗ್ರೆಸ್ ನಾಯಕಿ

ಫೇಸ್​ಬುಕ್ ಲೈವ್​ನಲ್ಲಿ ಬಹುಮಾನ ಘೋಷಿಸಿದ ಪ್ರತಿಭಾ 4 ದಿನಗಳ ಒಳಗೆ ಜನಾರ್ಧನ ಪೂಜಾರಿ ಕಾಲಿಗೆ ಬಿದ್ದು ಜಗದೀಶ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಮುಖಂಡನಿಗೆ ಮಸಿ ಬಳಿದರೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ ಕಾಂಗ್ರೆಸ್ ನಾಯಕಿ
ಜಗದೀಶ್, ಪ್ರತಿಭಾ ಕುಳಾಯಿ
Follow us
sandhya thejappa
|

Updated on:Feb 08, 2021 | 12:48 PM

ಮಂಗಳೂರು: ಜನಾರ್ದನ ಪೂಜಾರಿ ಮತ್ತು ಬಿಲ್ಲವರ ಆರಾಧ್ಯ ದೈವ ಕೋಟಿ ಚೆನ್ನಯ್ಯರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾದ ಜಗದೀಶ್ ಅಧಿಕಾರಿ ಕೀಳಾಗಿ ಮಾತನಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಬಿಲ್ಲವ ನಾಯಕಿ ಪ್ರತಿಭಾ ಕುಳಾಯಿ, ಜಗದೀಶ್ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.

ಫೇಸ್​ಬುಕ್ ಲೈವ್​ನಲ್ಲಿ ಬಹುಮಾನ ಘೋಷಿಸಿದ ಪ್ರತಿಭಾ 4 ದಿನಗಳ ಒಳಗೆ ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಜಗದೀಶ್ ಕ್ಷಮೆಯಾಚಿಸಬೇಕು. ಕ್ಷಮೆಯಾಚಿಸದಿದ್ದರೆ ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿಯುವ ಬಿಲ್ಲವ ಯುವಕರಿಗೆ ಒಂದು ಲಕ್ಷ ನೀಡುವುದಾಗಿ ಹೇಳಿದ್ದಾರೆ.

ಕಾರಣವೇನು? ವಾಲ್ಪಾಡಿಗುತ್ತುವಿನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಜಗದೀಶ್, ಪಟ್ಟ ಆದವರ ಕಾಲು ಹಿಡಿಯುತ್ತೇನೆ ಹೊರತು ಜನಾರ್ದನ ಪೂಜಾರಿ ಕಾಲು ಹಿಡಿಯಲ್ಲ ಎಂದು ಹೇಳಿದ್ದರು. ಈ ವಿಚಾರಕ್ಕೆ ಜಗದೀಶ್​ಗೆ ಕರೆ ಮಾಡಿದ್ದ ಬಿಲ್ಲವ ಸಮುದಾಯದ ಮುಖಂಡರೊಬ್ಬರು ಈ ರೀತಿ ಏಕೆ ಹೇಳಿದ್ದೀರಿ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಎನೋ ಉತ್ತರ ನೀಡಿ ಜಗದೀಶ್ ಸುಮ್ಮನಾಗಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ತಮ್ಮ ಜೊತೆ ಇದ್ದವರೊಂದಿಗೆ ಬಿಲ್ಲವ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ವೇಳೆ ಕರೆ ಕಟ್ ಆಗಿರಲಿಲ್ಲ ಮತ್ತು ಅವಹೇಳನಕಾರಿಯಾಗಿ ಮಾತನಾಡಿದ ಜಗದೀಶ್ ಮಾತುಗಳು ರೆಕಾರ್ಡ್ ಆಗಿತ್ತು. ಈ ವಿಚಾರ ಬಿಲ್ಲವ ಸಮುದಾಯಕ್ಕೆ ತಿಳಿದಿದ್ದು ಕೆಂಡಮಂಡಲಾಗಿದ್ದಾರೆ.

ಈಶ್ವರಪ್ಪ ಯಾರ ವಿರುದ್ಧ ಹೋರಾಟ ಮಾಡ್ತಿದ್ದಾರೆ? -ಸಚಿವರ ನಡೆಗೆ ಡಿ.ಕೆ.ಶಿವಕುಮಾರ್ ಶಾಕ್​

Published On - 12:41 pm, Mon, 8 February 21