Tuber and roots mela ಗೆಡ್ಡೆ ಗೆಣಸು ಮೇಳ: ಮೈಸೂರಿನಲ್ಲಿ ಪೂರ್ವಿಕರು ಉಪಯೋಗಿಸುತ್ತಿದ್ದ ಆಹಾರದ ಪರಿಚಯ
Tuber and roots mela ಮೂರನೇ ವರ್ಷದ ಮೇಳದಲ್ಲಿ ಒಟ್ಟು 200 ಬಗೆಯ ಗೆಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಮೈಸೂರು ಮಂಡ್ಯ ಚಾಮರಾಜನಗರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಹಾಡಿಯ ಜನರು ಮೇಳದಲ್ಲಿ ಭಾಗವಹಿಸಿದ್ದರು.
ಮೈಸೂರು: ಗೆಡ್ಡೆ ಗೆಣಸು ನಮ್ಮ ಪೂರ್ವಿಕರು ಉಪಯೋಗಿಸುತ್ತಿದ್ದ ಆಹಾರ. ಆಧುನಿಕತೆಯ ಭರಾಟೆಯಲ್ಲಿ ಇಂದಿನ ಪೀಳಿಗೆಯ ಮಕ್ಕಳಿಗೆ ಗೆಡ್ಡೆ ಗೆಣಸು ನೋಡುವುದು ಕನಸಿನ ಮಾತು. ಇಂತಹ ಗೆಡ್ಡೆ ಗೆಣಸುಗಳನ್ನು ಪರಿಚಯ ಮಾಡಿಕೊಡಲು ಮೈಸೂರಿನಲ್ಲಿ ವಿಶೇಷ ಮೇಳವನ್ನು ಆಯೋಜಿದಲಾಗಿದೆ.
ಸಿಹಿ ಗೆಣಸಿನ ಪಾಯಸ, ಗೆಣಸಿನ ಹಲ್ವಾ ,ಸೊಗದೇ ಬೇರಿನ ಜ್ಯೂಸ್ ಒಂದಾ ಎರಡಾ ಹತ್ತಾರು ಬಗೆಯ ಗೆಡ್ಡೆ ಗೆಣಸಿನ ತಿನಿಸುಗಳು. ಹೌದು ಇದು ಮೈಸೂರಿನ ಹೃದಯಭಾಗದಲ್ಲಿರುವ ನಂಜರಾಜಬಹದ್ದೂರ್ ಕಲ್ಯಾಣಮಂಟಪದಲ್ಲಿ ಆಯೋಜಿಸಿರುವ ವಿಶೇಷ ಗೆಡ್ಡೆ ಗೆಣಸು ಮೇಳವನ್ನು ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಹಾಗೂ ರೋಟರಿ ಕ್ಲಬ್ ಸಂಯಕ್ತ ಆಶ್ರಯದಲ್ಲಿ ಆಯೋಜಿದಲಾಗಿದೆ.
ನಮ್ಮ ಪೂರ್ವಜರ ಬಹು ಮುಖ್ಯ ಆಹಾರವಾದ ಗೆಡ್ಡೆ ಗೆಣಸನ್ನು ಪರಿಚಯಿಸುವುದು ಮತ್ತು ಅವುಗಳಲ್ಲಿರುವ ಔಷಧೀಯ ಹಾಗೂ ಪೌಷ್ಠಿಕ ಗುಣಗಳ ಬಗ್ಗೆ ಜಾಗೃತಿ ಮೂಡಿಸಲು ಈ ಮೇಳವನ್ನು ಆಯೋಜಿಸಲಾಗಿದ್ದು,ಈ ಮೇಳದಲ್ಲಿ ನಗರ ಪ್ರದೇಶದಲ್ಲಿ ಗೆಡ್ಡೆ ಗೆಣಸುಗಳನ್ನು ಹೇಗೆ ಬೆಳೆಯಬಹದು ಎನ್ನುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಗೆಡ್ಡೆ ಗೆಣಸು ಕೊರೊನಾ ತಡೆಗೆ ಹೇಗೆ ಸಹಕಾರಿಯಾಗುತ್ತದೆ ಎನ್ನುವುದರ ಬಗ್ಗೆಯೂ ಇಲ್ಲಿ ಅರಿವು ಮೂಡಿಸಲಾಯಿತು.
ಮೂರನೇ ವರ್ಷದ ಮೇಳದಲ್ಲಿ ಒಟ್ಟು 200 ಬಗೆಯ ಗೆಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಮೈಸೂರು ಮಂಡ್ಯ ಚಾಮರಾಜನಗರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಹಾಡಿಯ ಜನರು ಮೇಳದಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲ ಗೆಡ್ಡೆ ಗೆಣಸಿನ ತಿನಿಸುಗಳನ್ನು ಸವಿಯುವ ಅವಕಾಶ ಸಹ ಕಲ್ಪಿಸಲಾಗಿತ್ತು. ಗೆಡ್ಡೆ ಗೆಣಸಿನಿಂದ ತಯಾರಿಸಲಾದ. ಚಿಪ್ಸು, ಐಸ್‌ಕ್ರೀಂ, ಪತ್ರೊಡೆ, ಉಪ್ಪಿನಕಾಯಿ, ಹಲ್ವಾ ಸೇರಿ 10 ಹಲವು ತಿನಿಸುಗಳ ರುಚಿ ಸವಿದ ಎಲ್ಲರೂ ಖುಷಿ ವ್ಯಕ್ತಪಡಿಸಿದ್ದು, ಇಂತಹ ಅಪರೂಪದ ಮೇಳವನ್ನು ಆಯೋಜಿಸಿದಕ್ಕೆ ಕೃತಜ್ಞತೆ ಜನರು ಕೃತಜ್ಞತೆ ಸಲ್ಲಿಸಿದರು.
ಇಲ್ಲಿನ ಗೆಡ್ಡೆ ಗೆಣಸು ಮೇಳ ಇಲ್ಲಿಗೆ ಬಂದವರಿಗೆ ಹೊಸ ಅನುಭವ ನೀಡಿತು. ಇದು ಸಹಜವಾಗಿ ಎಲ್ಲರಿಗೂ ಖುಷಿ ಕೊಟ್ಟಿದ್ದು, ಇಂತಹ ಮೇಳಗಳು ಪ್ರತಿ ಜಿಲ್ಲೆಯಲ್ಲೂ ಆಗಬೇಕು ಎನ್ನುವುದು ಮೇಳದಲ್ಲಿ ಭಾಗವಹಿಸಿದ್ದವರ ಮನದಾಳದ ಮಾತು. ಒಟ್ಟಾರೆ ಮಾಲ್‌ನ ಪಿಜ್ಜಾ ಬರ್ಗರ್‌ಗಳ ಸವಿ ಸವಿಯುತ್ತಿದ್ದವರು ನಮ್ಮ ಪೂರ್ವಿಕರ ಗೆಡ್ಡೆ ಗೆಣಸುಗಳ ಸವಿ ಸವಿದು ಎಂಜಾಯ್ ಮಾಡಿದರು.
ಸಮಗ್ರ ಕೃಷಿ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರದಿಂದ ವಿನೂತನ ಕಾರ್ಯಕ್ರಮ.. ಚಿತ್ರಗಳಲ್ಲಿ