AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿ ಗಣತಿ ವರದಿ ಜಾರಿಗೆ ಕಾಂಗ್ರೆಸ್​ ಬದ್ಧವಾಗಿದೆ; ಸ್ವೆಟರ್ ಕೊಡಲು ಶಾಲೆ ಯಾವಾಗ ಆರಂಭವಾಗಿತ್ತು?: ಡಿಕೆ ಶಿವಕುಮಾರ್

DK Shivakumar: ಸ್ವೆಟರ್ ಕೊಡುವುದಕ್ಕೆ ಶಾಲೆ ಯಾವಾಗ ಆರಂಭವಾಗಿತ್ತು ಈ ಪ್ರಶ್ನೆಗೆ ಬಿಬಿಎಂಪಿ, ರಾಜ್ಯ ಸರ್ಕಾರವೇ ಉತ್ತರ ನೀಡಬೇಕು. ಮುಖ್ಯಮಂತ್ರಿಗಳೇ ಇದಕ್ಕೆ ಜವಾಬ್ದಾರಿ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಜಾತಿ ಗಣತಿ ವರದಿ ಜಾರಿಗೆ ಕಾಂಗ್ರೆಸ್​ ಬದ್ಧವಾಗಿದೆ; ಸ್ವೆಟರ್ ಕೊಡಲು ಶಾಲೆ ಯಾವಾಗ ಆರಂಭವಾಗಿತ್ತು?: ಡಿಕೆ ಶಿವಕುಮಾರ್
ಡಿ.ಕೆ. ಶಿವಕುಮಾರ್
TV9 Web
| Updated By: ganapathi bhat|

Updated on:Aug 25, 2021 | 4:43 PM

Share

ಬೆಂಗಳೂರು: ಜಾತಿಗಣತಿಗಾಗಿ ಸರ್ಕಾರ 160 ಕೋಟಿ ಹಣ ವೆಚ್ಚ ಮಾಡಿದೆ. ಜಾತಿಗಣತಿ ವರದಿಯಲ್ಲಿನ ಮಾಹಿತಿ ಜನರಿಗೆ ತಿಳಿಯಬೇಕು. ಜಾತಿ ಗಣತಿ ವರದಿ ಜಾರಿಗೆ ಕಾಂಗ್ರೆಸ್​ ಪಕ್ಷ ಬದ್ಧವಾಗಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬುಧವಾರ (ಆಗಸ್ಟ್ 25)​ ಹೇಳಿಕೆ ನೀಡಿದ್ದಾರೆ. ಜೊತೆಗೆ ಸ್ವೆಟರ್ ಹಂಚಿಕೆ ಅಕ್ರಮದ ಆರೋಪದ ಬಗ್ಗೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ನಾನು ಜಗ್ಗೇಶ್, ಕೋಮಲ್ ಬಗ್ಗೆ ಮಾತನಾಡುವುದಿಲ್ಲ. ಅವರು ಈ ಅಕ್ರಮದಲ್ಲಿದ್ದಾರೋ, ಇಲ್ಲವೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಸ್ವೆಟರ್ ಕೊಡುವುದು ಸಂತೋಷ. ಆದರೆ ಯಾರಿಗೆ ಸ್ವೆಟರ್ ಕೊಟ್ಟಿದ್ದಾರೆ ಎಂಬುದೇ ವಿಷಯ. ಸ್ವೆಟರ್ ಕೊಡುವುದಕ್ಕೆ ಶಾಲೆ ಯಾವಾಗ ಆರಂಭವಾಗಿತ್ತು ಈ ಪ್ರಶ್ನೆಗೆ ಬಿಬಿಎಂಪಿ, ರಾಜ್ಯ ಸರ್ಕಾರವೇ ಉತ್ತರ ನೀಡಬೇಕು. ಮುಖ್ಯಮಂತ್ರಿಗಳೇ ಇದಕ್ಕೆ ಜವಾಬ್ದಾರಿ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಶಾಸಕ ಯತ್ನಾಳ್ ಕಚೇರಿಗೆ ಪೋಸ್ಟರ್ ಅಂಟಿಸಿದ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ನಮ್ಮ ನಾಯಕರ ವಿರುದ್ಧ ಹೇಳಿಕೆ ಕೊಟ್ಟರೆ ಹೋರಾಟ ಮಾಡುತ್ತೇವೆ. ನಮ್ಮ ವಿರುದ್ಧ ಎಷ್ಟು ಕೇಸ್‌ಗಳನ್ನು ಬೇಕಿದ್ದರೂ ಹಾಕಲಿ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ, ಹೋರಾಟ ಮಾಡ್ತೀವಿ ಎಂದು ಶಿವಕುಮಾರ್ ಹೇಳಿದ್ದಾರೆ.

ಸ್ವೆಟರ್ ಅಕ್ರಮ ಪ್ರಕರಣಕ್ಕೆ ಜಗ್ಗೇಶ್ ಪ್ರತಿಕ್ರಿಯೆ ಜಗ್ಗೇಶ್​ ಸಹೋದರ ಕೋಮಲ್​ ಕುಮಾರ್​ ಅವರು ಬಿಬಿಎಂಪಿಯಿಂದ ಟೆಂಡರ್​ ಪಡೆದು ಅಕ್ರಮ ಎಸಗಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿದೆ. ಈ ಪ್ರಕರಣದಲ್ಲಿ ಜಗ್ಗೇಶ್​ ಅವರ ಹೆಸರನ್ನೂ ಎಳೆದುತಂದಿರುವುದು ಅವರ ಕೋಪಕ್ಕೆ ಕಾರಣ ಆಗಿದೆ. ‘ಮಾನ್ಯ ಡಿಎಸ್​ಎಸ್​ ರಘು ಅವರಿಗೆ.. ಮಾನ್ಯರೇ ತಾವು ಹಾಗೂ ತಮ್ಮ ವಿಳಾಸ ನನಗೆ ತಿಳಿಯದ ಕಾರಣ ಸಾಮಾಜಿಕ ಜಾಲತಾಣವಾದ ಟ್ವಿಟರ್​ನಲ್ಲಿ ತಮಗೆ ತಿಳಿಸುತ್ತಿರುವೆ. ನನ್ನ ಬಗ್ಗೆ ಸತ್ಯಾಸತ್ಯತೆ ಅರಿಯದೆ, ಮಾಧ್ಯಮದ ಮುಂದೆ ನನ್ನ ತೇಜೋವಧೆ ಮಾಡಿದ್ದೀರಿ. ನಾನು ತಪ್ಪು ಮಾಡಿಲ್ಲ. ಮಾಡುವುದೂ ಇಲ್ಲ. ಹಾಗಾಗಿ ನಿಮ್ಮ ಮೇಲೆ ಕಾನೂನು ಪ್ರಕ್ರಿಯೆ. ಉತ್ತರಿಸಿ!’ ಎಂದು ಜಗ್ಗೇಶ್​ ಪ್ರಕರಣಕ್ಕೆ ಸಂಬಂಧಿಸಿ ಇಂದು (ಆಗಸ್ಟ್ 25) ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ಜಮೀರ್ ಅಹ್ಮದ್​ಗೆ ಕೊಲೆ ಬೆದರಿಕೆ ಆರೋಪ ಇತ್ತ, ಶಾಸಕ ಜಮೀರ್ ಅಹ್ಮದ್‌ಗೆ ಕೊಲೆ ಬೆದರಿಕೆ ಆರೋಪಕ್ಕೆ ಸಂಬಂಧಿಸಿ ಜೆಡಿಎಸ್‌ನ ನರಸಿಂಹಮೂರ್ತಿ ವಿರುದ್ಧ ಠಾಣೆಗೆ ದೂರು ದಾಖಲಿಸಲಾಗಿದೆ. ಶಾಸಕ ಜಮೀರ್ ಬೆಂಬಲಿಗ ನವೀನ್ ಗೌಡನಿಂದ ದೂರು ನೀಡಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಡಿಸೆಂಬರ್​ನಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನ: ವಿವಿಧ ಕಾರ್ಯಕ್ರಮಗಳ ಬಗ್ಗೆ ಡಿಕೆ ಶಿವಕುಮಾರ್ ಮಾಹಿತಿ

ಬಿಹಾರದಲ್ಲಿ ಜಾತಿ ಗಣತಿ ಬೇಕು ಎಂದು ಒತ್ತಾಯಿಸಿದ ನಿತೀಶ್ ಕುಮಾರ್; ದೇಶದಾದ್ಯಂತ ಬೇಕು ಎಂದ ತೇಜಸ್ವಿ ಯಾದವ್

Published On - 4:39 pm, Wed, 25 August 21