ದೇಶ ಕಾಯುವ ಸೈನಿಕನೇ ಪರಮೋಚ್ಛ, ಆದರೆ ಕಾಂಗ್ರೆಸ್ ಸೈನಿಕರ ಮನೋಬಲ ಕುಗ್ಗಿಸುತ್ತಿದೆ: ಆರ್ ಅಶೋಕ

Updated on: Apr 25, 2025 | 4:38 PM

ಕಾಂಗ್ರೆಸ್ ಪಕ್ಷದ ನಾಯಕರ ಹಾಗೆ ತಾನೂ ಸಹ ರಾಜ್ಯ ಸರ್ಕಾರದ ಲೋಪಗಳನ್ನು ಎಣಿಸುತ್ತಾ ಕೂತರೆ ಅವರ ಯೋಗ್ಯತೆ ಏನು ಅನ್ನೋದು ಗೊತ್ತಾಗುತ್ತದೆ, ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣ, ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣಗಳು ಭದ್ರತಾ ಲೋಪವಲ್ಲದೆ ಮತ್ತೇನು? ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ಕೇಳಿದರು.

ಬೆಂಗಳೂರು, ಏಪ್ರಿಲ್ 25: ನಮ್ಮ ದೇಶವನ್ನು ಹಗಲಿರುಳು ಕಾಯುವ ಸೈನಿಕರ ಕಾರ್ಯಕ್ಷಮತೆ, ದಕ್ಷತೆ ಯನ್ನು ಪ್ರಶ್ನಿಸುವ ಕಾಂಗ್ರೆಸ್ ನಾಯಕರು (Congress leaders) ದೇಶದಲ್ಲಿ ಅದ್ಯಾರನ್ನು ನಂಬುತ್ತಾರೋ ಗೊತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ಹೇಳಿದರು. ಸೈನಿಕ, ಯೋಧನೇ ದೇಶದ ಭಧ್ರತಾ ವ್ಯವಸ್ಥೆಯಲ್ಲಿ ಪರಮೋಚ್ಛ ಎಂದು ಬಿಜೆಪಿ ಹೇಳುತ್ತದೆ, ಅದರೆ ಕಾಂಗ್ರೆಸ್ ಮಾತ್ರ ಸೈನಿಕರ ವಿರುದ್ಧ ಮಾತಾಡುತ್ತದೆ, ಆದರ ಹೇಳಿಕೆಗಳಿಂದ ಸೈನಿಕರ ಮನೋಬಲ ಕುಗ್ಗುತ್ತದೆ, ಉಗ್ರರು ಹಿಂದೂಗಳನ್ನು ಹುಡುಕಾಡಿ ಕೊಂದಿದ್ದಾರೆ, ಇದು ಟೀಕೆ ಮಾಡುವ ಸಮಯವಲ್ಲ, ಭಾರತೀಯರೆಲ್ಲ ಒಗ್ಗೂಡಿ ವೈರಿಗಳನ್ನು ಮಟ್ಟ ಹಾಕುವ ಸಮಯ ಎಂದು ಅಶೋಕ ಹೇಳಿದರು.

ಇದನ್ನೂ ಓದಿ:   ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ; ಶಂಕಿತನ ಜಾಡು ಹಿಡಿದ ಎನ್​ಐಎಗೆ ಸಿಕ್ಕಿತು ಚೆನ್ನೈ ಲಿಂಕ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ