ಬೆಂಗಳೂರು: ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ದೂರು ನೀಡಿದ್ದಾರೆ. ಆಪ್ತ ಸಹಾಯಕ ಫಾರೂಕ್ ಮೂಲಕ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿಕೆ ಮಾಡಿದ್ದಾರೆ. ಸದಾಶಿವ ನಗರದ ಗೆಸ್ಟ್ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ.
ಸದಾಶಿವ ನಗರದ ಗೆಸ್ಟ್ಹೌಸ್ಗೆ ಗನ್ಮ್ಯಾನ್ಗಳು ಪ್ರವೇಶ ಮಾಡಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಗನ್ಮ್ಯಾನ್ಗಳು ಬೀಗ ಮುರಿದು ಒಳನುಗ್ಗಿದ್ದಾರೆ. ಗೆಸ್ಟ್ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ದೂರು ಸಲ್ಲಿಸಲಾಗಿದೆ.
ಸದಾಶಿವನಗರದ ಗೆಸ್ಟ್ಹೌಸ್ ತೆರವು ಮಾಡಿದ್ದರು. ಕುಮಾರಸ್ವಾಮಿಗೆ ಸೇರಿದ ಅಗತ್ಯ ವಸ್ತುಗಳು ಅಲ್ಲಿದ್ದವು. ಗೆಸ್ಟ್ಹೌಸ್ ಕೀಲಿ ಶಾಸಕ ಜಮೀರ್ ಅಹ್ಮದ್ ಬಳಿಯಿತ್ತು. ಜಮೀರ್ಗೆ ಭೋಜೇಗೌಡ ಕರೆ ಮಾಡಿ ಟೈಮ್ ಕೇಳಿದ್ದರು. ಅದಕ್ಕೆ 2 ದಿನ ಕಾಲಾವಕಾಶ ಕೇಳಿದ್ದ ಎಸ್.ಎಲ್.ಭೋಜೇಗೌಡ. ಈ ನಡುವೆ ಹೆಚ್ಡಿಕೆ ಪಲ್ಟಿ ಗಿರಾಕಿ ಎಂದು ಜಮೀರ್ ಹೇಳಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನಲೆ ಗಲಾಟೆ ತಾರಕ್ಕೇರಿತ್ತು. ಹಾಗಾಗಿ, ನಿಖಿಲ್ ಕುಮಾರಸ್ವಾಮಿ ಗನ್ ಮ್ಯಾನ್ ಬೀಗ ಮುರಿದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಸದಾಶಿವನಗರದ ಎಂದರೆ ಹೆಚ್ ಡಿ ಕುಮಾರಸ್ವಾಮಿ ಅಥವಾ ಹೆಚ್ ಡಿ ಕುಮಾರಸ್ವಾಮಿ ಎಂದರೆ ಸದಾಶಿವನಗರ ಎನ್ನುವ ಕಾಲವೊಂದಿತ್ತು. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಯವರಿಗೆ ಜಮೀರ್ ಬಹಳ ಆಪ್ತರಾಗಿದ್ದರು ಆಗ ಜಮೀನನ್ನು ಕುಮಾರಸ್ವಾಮಿಯವರಿಗೆ ಬಿಟ್ಟುಕೊಟ್ಟಿದ್ದರು. ಅದು ಎಷ್ಟರ ಮಟ್ಟಿಗೆ ಗುರುತಿಸಲ್ಪಟ್ಟಿತ್ತು ಎಂದರೆ ಗೆಸ್ಟ್ ಹೌಸ್ ಅನ್ನು ಕುಮಾರಸ್ವಾಮಿಯವರೇ ಕೊಂಡುಕೊಂಡಿದ್ದಾರೆ ಅವರ ಹೆಸರಿನಲ್ಲಿಯೇ ಇದೆ ಎಂದು ಜನ ನಂಬಿದ್ದರು ಆದರೆ ಕುಮಾರಸ್ವಾಮಿ ಮತ್ತು ಜಮೀರ್ ಅವರ ನಡುವೆ ಬಿರುಕು ಬಿಟ್ಟು ಕಾಂಗ್ರೆಸ್ಸಿಗೆ ಹೋಗಿದ್ದರೂ ಸಹ ವಿಚಾರ ಇಷ್ಟು ಕೆಳಕ್ಕೆ ಇದ್ದಿರಲಿಲ್ಲ ಬಿದ್ದಿರಲಿಲ್ಲ. ಈಗ ಹಾಗೆ ಬಾಗಿಲು ಮುರಿದು ಒಳಗೆ ಹೋಗಲು ಯತ್ನಿಸಿದ್ದಾರೆ ಎಂಬ ಆರೋಪ ಬಂದಿರುವುದು ಒಂದು ವಿಚಿತ್ರ ಆದರೂ ಸತ್ಯ.
ಇದನ್ನೂ ಓದಿ: Zameer on HDK : ಕುಮಾರಸ್ವಾಮಿ ಅಧಿಕಾರಕ್ಕಾಗಿ ಯಾವಾಗ ಬೇಕಾದರೂ ಪಲ್ಟಿ ಹೊಡಿತಾನೆ
ಕರ್ನಾಟಕದಲ್ಲಿ ಕಾಂಗ್ರೆಸ್ ಮೂಲೆಗುಂಪಾಗುವಂಥ ತಂತ್ರ ಹೆಣಿ: ಕುಮಾರಸ್ವಾಮಿಗೆ ದೇವೇಗೌಡರ ಕಿವಿಮಾತು
Published On - 7:16 pm, Wed, 9 June 21